ಸೋಂಕಿತರನ್ನು ಕಿಟಕಿ ಮೂಲಕ ಭೇಟಿಯಾಗುತ್ತಿರುವ ಸಂಬಂಧಿಕರು; ಬೀದರ್​ನಲ್ಲಿ ಹೆಚ್ಚಿದ ಕೊರೋನಾ ಭೀತಿ

ಕದ್ದು ಮುಚ್ಚಿ ಸೋಂಕಿತರ ಜೊತೆಗೆ ಮಾತನಾಡುವವರು ಮಾಸ್ಕ್ ‌ಸಹ ಹಾಕಿಕೊಂಡಿಲ್ಲ . ಸಾಮಾಜಿಕ ಅಂತರವೂ ಇಲ್ಲ. ಹೀಗಾಗಿ ಕೊರೊನಾ ಯಾವಾಗ ಯಾವ ರೂಪದಲ್ಲಿ ಹರಡುತ್ತೋ ಎನ್ನುವ ಆತಂಕದಲ್ಲಿ  ಜಿಲ್ಲೆಯ ಜನರಿದ್ದಾರೆ.

news18-kannada
Updated:July 6, 2020, 4:01 PM IST
ಸೋಂಕಿತರನ್ನು ಕಿಟಕಿ ಮೂಲಕ ಭೇಟಿಯಾಗುತ್ತಿರುವ ಸಂಬಂಧಿಕರು; ಬೀದರ್​ನಲ್ಲಿ ಹೆಚ್ಚಿದ ಕೊರೋನಾ ಭೀತಿ
ಆಸ್ಪತ್ರೆ
  • Share this:
ಬೀದರ್(ಜು.06): ಬೀದರ್ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ‌ಏರುತ್ತಲೇ ಸಾಗಿದೆ. ಕಳೆದ ಒಂದೂವರೆ ತಿಂಗಳಿಂದ ಪ್ರತಿನಿತ್ಯವೂ ಕೊರೋನಾ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಸದ್ಯ 726 ಕೊರೊನಾ ‌ಸೋಂಕಿತರಿದ್ದು, 512 ಜನ ‌ಸೋಂಕಿತರು ಗುಣಮುಖರಾಗಿ ಕೋವಿಡ್ ‌ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 187 ಸಕ್ರಿಯ ಪ್ರಕರಣಗಳಿದ್ದು, ಅವರನ್ನು ಕೋವಿಡ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್​​​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ‌ಐಸೋಲೆಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ  ಸೋಂಕಿತರನ್ನು ನೋಡಲು ಅವರ ಸಂಬಂಧಿಕರು ಕದ್ದು ಮುಚ್ಚಿ ಭೇಟಿಯಾಗುತ್ತಿದ್ದಾರೆ. ಕದ್ದು ಮುಚ್ಚಿ ಕಿಟಕಿಗಳ ಮೂಲಕ ಸೋಂಕಿತರನ್ನು ಮಾತನಾಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಿಟಕಿ ಮೂಲಕ ಸೋಂಕಿತರನ್ನು ಮಾತನಾಡಿಸುತ್ತಿರುವ ಸಂಬಂಧಿಕರು


ಸೋಂಕಿತರ ಜೊತೆಗೆ ಮಾತನಾಡಿ ನಂತರ ಎಲ್ಲಾ ಕಡೆಗೆ ಓಡಾಡಿ ಮನೆಗೆ ವಾಪಾಸ್ ಆಗುತ್ತಿರುವುದು ಆತಂಕ ಹೆಚ್ಚಿಸುವಂತೆ ಮಾಡಿದೆ. ‌ಹಾಡು ಹಗಲೆ ಕೋವಿಡ್ ವಾರ್ಡ್ ಕಿಟಕಿಗಳಿಂದ ಸೋಂಕಿತರ ಜೊತೆಗೆ ಮಾತನಾಡುವ ಸಂಬಂಧಿಕರನ್ನೂ ನೋಡಿಯೂ ನೋಡದಂತೆ ಬ್ರಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಅಧಿಕಾರಿ ವರ್ಗ ಮೌನ ವಹಿಸಿದ್ದಾರೆ.

ಖಾಸಗಿ ಶಿಕ್ಷಕರ ಪರ ಧ್ವನಿಯೆತ್ತಿದ ಜೆಡಿಯು; ಅನುಮತಿಯಿಲ್ಲದೇ ಸಿಎಂ ಗೃಹ ಕಚೇರಿವರೆಗೆ ರ‍್ಯಾಲಿ

ಕದ್ದು ಮುಚ್ಚಿ ಸೋಂಕಿತರ ಜೊತೆಗೆ ಮಾತನಾಡುವವರು ಮಾಸ್ಕ್ ‌ಸಹ ಹಾಕಿಕೊಂಡಿಲ್ಲ . ಸಾಮಾಜಿಕ ಅಂತರವೂ ಇಲ್ಲ. ಹೀಗಾಗಿ ಕೊರೊನಾ ಯಾವಾಗ ಯಾವ ರೂಪದಲ್ಲಿ ಹರಡುತ್ತೋ ಎನ್ನುವ ಆತಂಕದಲ್ಲಿ  ಜಿಲ್ಲೆಯ ಜನರಿದ್ದಾರೆ.
ಸೋಂಕಿತರ ಜೊತೆಗೆ ಮಾತನಾಡುವ ದೃಶ್ಯ ಮೊಬೈಲ್ ‌ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡಿದ‌ ಮೇಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಬೀದರ್ ಜಿಲ್ಲೆ ಮುಂದೆ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.
Published by: Latha CG
First published: July 6, 2020, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading