HOME » NEWS » Coronavirus-latest-news » RECORD 84 NEW CASES REGISTERED IN KARNATAKA AS TOTAL CASES RISE TO 1231 SNVS

ಅರ್ಧ ದಿನದಲ್ಲೇ ದಾಖಲೆಯ 84 ಹೊಸ ಪ್ರಕರಣಗಳು; ಕರ್ನಾಟಕಕ್ಕೆ ‘ಮಹಾ’ ಗಂಡಾಂತರ

ಇವತ್ತು ಪತ್ತೆಯಾದ 84 ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ ಬಂದವರೇ 56 ಮಂದಿ ಇದ್ದಾರೆ. ಶಿವಾಜಿನಗರದ ಹೌಸ್​ಕೀಪಿಂಗ್ ಹುಡುಗನಿಂದ ಸೋಂಕು ಹರಡುವಿಕೆ ಮುಂದುವರಿದಿದೆ.

news18-kannada
Updated:May 18, 2020, 1:49 PM IST
ಅರ್ಧ ದಿನದಲ್ಲೇ ದಾಖಲೆಯ 84 ಹೊಸ ಪ್ರಕರಣಗಳು; ಕರ್ನಾಟಕಕ್ಕೆ ‘ಮಹಾ’ ಗಂಡಾಂತರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮೇ 18): ರಾಜ್ಯದಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಹೆಚ್ಚಳಗೊಳ್ಳುತ್ತಿದೆ. ನಿನ್ನೆ ಸಂಜೆಯಿಂದ ಕೇವಲ 12 ಗಂಟೆ ಅವಧಿಯಲ್ಲಿ 84 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 1,231ಕ್ಕೆ ಏರಿದಂತಾಗಿದೆ. ರಾಜ್ಯದಲ್ಲಿ 12 ಗಂಟೆ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು ಇದೇ ಮೊದಲು.

ಇವತ್ತು ಬೆಳಕಿಗೆ ಬಂದ ಪ್ರಕರಣಗಳಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರೇ ಆಗಿದ್ಧಾರೆ. 84ರಲ್ಲಿ 56 ಪ್ರಕರಣಗಳಲ್ಲಿ ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಇದು ಬಿಟ್ಟರೆ ಬೆಂಗಳೂರಿನ ಶಿವಾಜಿನಗರದಲ್ಲಿ ಹೌಸ್ ಕೀಪಿಂಗ್ ಹುಡುಗನಿಂದ ಸೋಂಕು ಹರಡಿರುವ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಶಿವಾಜಿನಗರದಲ್ಲಿ ಇವತ್ತು ಪತ್ತೆಯಾದ ಎಲ್ಲಾ 15 ಪ್ರಕರಣಗಳು ಹೌಸ್​ಕೀಪಿಂಗ್ ಹುಡುಗನಿಂದ ಸೋಂಕಿತರಾದವರೇ ಆಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬಸ್, ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ; ಲಾಕ್​ಡೌನ್-4ನಲ್ಲಿ ಏನಿರಲಿದೆ? ಏನಿಲ್ಲ?

ಕೊರೋನಾ ಕಳಂಕ ನೀಗಿಸಿಕೊಂಡು ದೇಶಕ್ಕೆ ಮಾದರಿಯಾಗಿದ್ದ ಮೈಸೂರಿನಲ್ಲಿ ಇವತ್ತು ಒಂದು ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲೂ ಕೂಡ ಮಹಾರಾಷ್ಟ್ರವೇ ವಿಲನ್ ಆಗಿದೆ. ಮಹಾರಾಷ್ಟ್ರದ ಮುಂಬೈನಿಂದ ಮೈಸೂರಿಗೆ ಬಂದ ವ್ಯಕ್ತಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಇನ್ನು, ಮಂಡ್ಯ, ಹಾಸನ, ರಾಯಚೂರು, ಕೊಪ್ಪಳ, ವಿಜಯಪುರ, ದಾವಣಗೆರೆ, ಯಾದಗಿರಿ, ಕಲಬುರ್ಗಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇವತ್ತು ಪತ್ತೆಯಾದ ಪ್ರಕರಣಗಳೆಲ್ಲವೂ ಮಹಾರಾಷ್ಟ್ರದಿಂದ ಬಂದವರಿಗೆ ಸಂಬಂಧಿಸಿದ್ದಾಗಿದೆ.

First published: May 18, 2020, 1:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories