ಮಾರಕ ಸೋಂಕಿನಿಂದ ಇಂದು 1074 ಜನರು ಗುಣಮುಖ; ವಾಸಿಯಾಗುವ ಪ್ರಮಾಣ ಶೇ.27.52ಕ್ಕೆ ಏರಿಕೆ

ಕರ್ನಾಟಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಹೊಸದಾಗಿ 37 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 651 ಪ್ರಕರಣಗಳು ದಾಖಲಾಗಿವೆ. ಇಂದು ದಾವಣಗೆರೆಯಲ್ಲಿ 22,  ಬೀದರ್ 7, ಮಂಡ್ಯ 2 ಹಾಗೂ ಕಲಬುರಗಿಯಲ್ಲಿ 2 ಮತ್ತು ಚಿಕ್ಕಬಳ್ಳಾಪುರ, ಹಾವೇರಿ, ವಿಜಯಪು, ಬೆಂಗಳೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ.

news18-kannada
Updated:May 4, 2020, 5:23 PM IST
ಮಾರಕ ಸೋಂಕಿನಿಂದ ಇಂದು 1074 ಜನರು ಗುಣಮುಖ; ವಾಸಿಯಾಗುವ ಪ್ರಮಾಣ ಶೇ.27.52ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ಸೋಂಕು ಹೆಚ್ಚೆಚ್ಚು ವ್ಯಾಪಿಸುತ್ತಿರುವ ನಡುವೆಯೇ ಈ ಕಾಯಿಲೆಯಿಂದ ಗುಣಮುಖರಾಗುವ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಈವರೆಗೂ 11,706 ಮಂದಿ ಕೋವಿಡ್-19 ನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಕಳೆದ 24 ಗಂಟೆಯಲ್ಲಿ 1,074 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಈವರೆಗೂ 11,706 ಸೋಂಕಿಯರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಮಾರಕ ಸೋಂಕಿನಿಂದ ಗುಣವಾಗುವ ಪ್ರಮಾಣ ಶೇ.27.52ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 42,533 ಪ್ರಕರಣಗಳು ಈವರೆಗೆ ದಾಖಲಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಮಾಹಿತಿ ನೀಡಿದ್ದಾರೆ.

ಆದರೆ, ಕರ್ನಾಟಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಹೊಸದಾಗಿ 37 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 651 ಪ್ರಕರಣಗಳು ದಾಖಲಾಗಿವೆ. ಇಂದು ದಾವಣಗೆರೆಯಲ್ಲಿ 22,  ಬೀದರ್ 7, ಮಂಡ್ಯ 2 ಹಾಗೂ ಕಲಬುರಗಿಯಲ್ಲಿ 2 ಮತ್ತು ಚಿಕ್ಕಬಳ್ಳಾಪುರ, ಹಾವೇರಿ, ವಿಜಯಪು, ಬೆಂಗಳೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ.

ಇದನ್ನು ಓದಿ: ಲಕ್ಷಗಟ್ಟಲೆ ಕಾರ್ಮಿಕರು ವಾಪಸ್ ಹೋಗಿಬಿಟ್ಟರೆ ಬೆಂಗಳೂರು ಕಥೆ ಏನು? ಸರ್ಕಾರಕ್ಕೀಗ ಹೊಸ ಚಿಂತೆ
First published: May 4, 2020, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading