ಭೂಪಾಲ್ (ಜುಲೈ 26); ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ಈ ಜಗತ್ತಿನಿಂದ ತೊಡೆದು ಹಾಕಲು ಪ್ರತಿಯೊಬ್ಬರು ದಿನಕ್ಕೆ ಐದು ಬಾರಿ ಹನುಮಾನ್ ಚಾಲಿಸಾವನ್ನು ಪಠಿಸಬೇಕು ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮನವಿ ಮಾಡಿದ್ದಾರೆ.
ರಾಮ ಮಂದಿರ ದೇವಾಲಯದ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಆಗಸ್ಟ್ 05ಕ್ಕೆ ಭೂಮಿ ಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡುವ ಮೂಲಕ ಜನರಲ್ಲಿ ಮನವಿ ಮಾಡಿರುವ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, “ನಾವೆಲ್ಲರೂ ಒಗ್ಗಟ್ಟಾಗಿ ಆಧ್ಯಾತ್ಮಿಕದ ಮೂಲಕ ಮಾರಣಾಂತಿಕ ಕೊರೋನಾ ವೈರಸ್ ಅನ್ನು ಜಗತ್ತಿನಿಂದ ತೊಡೆದು ಹಾಕಲು ಪ್ರಯತ್ನಿಸೋಣ. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಬಯಸೋಣ. ಹೀಗಾಗಿ ಜುಲೈ 25 ರಿಂದ ಆಗಸ್ಟ್ 05ರವರೆಗೆ ಎಲ್ಲರೂ ತಮ್ಮ ಮನೆಗಳಲ್ಲಿ ದಿನಕ್ಕೆ ಐದು ಬಾರಿ ಹನುಮಾನ್ ಚಾಲಿಸಾ ಪಠಿಸಿ” ಎಂದಿದ್ದಾರೆ.
BJP MP Pragya Singh Thakur on Saturday appealed people to recite the Hanuman Chalisa five times a day till August 5, which she believes will rid the world of the coronavirus pandemic.https://t.co/uK7q2vUlOw
— CNNNews18 (@CNNnews18) July 26, 2020
ಮತ್ತೊಂದು ಟ್ವೀಟ್‌ನಲ್ಲಿ "ಮಧ್ಯಪ್ರದೇಶದಲ್ಲಿ ಕೊರೋನಾ ಸೋಂಕನ್ನು ತಡೆಯುವ ಸಲುವಾಗಿ ಇಲ್ಲಿನ ಬಿಜೆಪಿ ಸರ್ಕಾರ ಆಗಸ್ಟ್ 04ರ ವರೆಗೆ ಲಾಕ್‌ಡೌನ್ ಘೋಷಿಸಿದೆ. ಲಾಕ್‌ಡೌನ್ 4ಕ್ಕೆ ಮುಗಿದರೂ ಹನುಮಾನ್ ವಾಲಿಸಾ ಪಠಣ ಆಗಸ್ಟ್ 05 ರಂದು ಕೊನೆಗೊಳ್ಳಲಿದೆ. ಈ ದಿನ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯಲಿದ್ದು, ಆ ದಿನವನ್ನು ನಾವು ದೀಪಾವಳಿಯಂತೆ ಆಚರಿಸಲಿದ್ದೇವೆ” ಎಂದು ಪ್ರಜ್ಞಾ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಇದನ್ನೂ ಓದಿ : CoronaVirus: ದೇಶದಲ್ಲಿ ಮುಂದುವರೆದ ಕೊರೋನಾ ಉಪಟಳ:13 ಲಕ್ಷ ದಾಟಿದ ಸೋಂಕು ಪೀಡಿತರ ಸಂಖ್ಯೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ