RBI Governor: ಕೋವಿಡ್ ಬಿಕ್ಕಟ್ಟನಲ್ಲಿ ಆರ್ಥಿಕ ಸಂಕಷ್ಟ; ಕೃಷಿ ಮಾತ್ರ ಆಶಾಕಿರಣ: ಆರ್​ಬಿಐ ಗವರ್ನರ್

RBI Governor Press Conference: ಕೃಷಿ ಕ್ಷೇತ್ರ ಎದ್ದು ನಿಂತಿದ್ದರೂ ದೇಶದಲ್ಲಿ ಆಹಾರ ಹಣದುಬ್ಬರ ಹೆಚ್ಚಾಗುತ್ತಿದೆ. ಏಪ್ರಿಲ್​ನಲ್ಲಿ ಶೇ. 8.6ಕ್ಕೆ ಫುಡ್ ಇನ್​ಫ್ಲೇಷನ್ ಮುಟ್ಟಿದೆ ಎಂದರು.

ಶಕ್ತಿಕಾಂತ ದಾಸ್

ಶಕ್ತಿಕಾಂತ ದಾಸ್

 • News18
 • Last Updated :
 • Share this:
  ನವದೆಹಲಿ(ಮೇ 22): ಒಂದು ಸೂಕ್ಮ್ಮಾಣು ವೈರಸ್ ಹೇಗೆ ಜಗತ್ತಿನ ಆರ್ಥಿಕತೆನ್ನೇ ಗಡಗಡ ಅಲುಗಾಡಿಸುತ್ತಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಬೆರಗು ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಭಾರತದ ಆರ್ಥಿಕತೆ ಬಹಳ ಸಂಕಷ್ಟಕ್ಕೆ ಸಿಕ್ಕಿದೆ. ಬಹುತೇಕ ಕ್ಷೇತ್ರಗಳು ಹಿನ್ನಡೆ ಅನುಭವಿಸಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಕೃಷಿ ಕ್ಷೇತ್ರ ಮಾತ್ರ ಭರವಸೆಯ ಹೊಂಗಿರಣವಾಗಿದೆ ಎಂದು ಅಭಿಪ್ರಾಯಪಟ್ಟರು.

  ಇಂಥ ದೊಡ್ಡ ಬಿಕ್ಕಟ್ಟಿನ ನಡುವೆಯೂ ಕೃಷಿ ಕ್ಷೇತ್ರ ಸಮರ್ಥವಾಗಿ ಎದ್ದುನಿಂತಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಗಳೂ ಕೂಡ ಕೃಷಿ ಕ್ಷೇತ್ರಕ್ಕೆ ಆಶಾದಾಯಕವಾಗಿವೆ ಎಂದು ಹೇಳಿದರು.

  ಕೃಷಿ ಕ್ಷೇತ್ರ ಎದ್ದು ನಿಂತಿದ್ದರೂ ದೇಶದಲ್ಲಿ ಆಹಾರ ಹಣದುಬ್ಬರ ಹೆಚ್ಚಾಗುತ್ತಿದೆ. ಏಪ್ರಿಲ್​ನಲ್ಲಿ ಶೇ. 8.6ಕ್ಕೆ ಫುಡ್ ಇನ್​ಫ್ಲೇಷನ್ ಮುಟ್ಟಿದೆ ಎಂದರು.

  ಇದನ್ನೂ ಓದಿ: RBI Governor Press Conference - ಹಣಕಾಸು ಹರಿವಿಗೆ ಆರ್​ಬಿಐ ವಿವಿಧ ಕ್ರಮ; ರೆಪೋ ದರ ಇಳಿಕೆ

  ವಿಶ್ವಾದ್ಯಂತ ವ್ಯವಹಾರದಲ್ಲಿ ಶೇ. 13-32ರಷ್ಟು ನಷ್ಟವಾಗಬಹುದು. ಭಾರತದ ರೀಟೇಲ್ ವಸ್ತುಗಳ ರಫ್ತು ಪ್ರಮಾಣ ಕಳೆದ 30 ವರ್ಷದಲ್ಲೇ ಅತ್ಯಂತ ತಳಮಟ್ಟಕ್ಕೆ ಕುಸಿದಿದೆ. ಜಿಡಿಪಿ ಅಭಿವೃದ್ಧಿ ದರ ಆಶಾದಾಯಕವಾಗಿಲ್ಲ. ಖಾಸಗಿ ಅನುಭೋಗ ಪಾತಾಳ ಕಚ್ಚಿದೆ. ಔದ್ಯಮಿಕ ಉತ್ಪಾದನೆ ಮತ್ತು ಮುಖ್ಯ ಉದ್ಯಮಗಳ ಉತ್ಪಾದನೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಶಕ್ತಿಕಾಂತ ದಾಸ್ ಕಳವಳ ವ್ಯಕ್ತಪಡಿಸಿದರು.

  ಆದರೆ, ಆರ್​ಬಿಐ ಗವರ್ನರ್ ಅವರು ಈ ಹಣಕಾಸುವ ವರ್ಷದ ದ್ವಿತೀಯಾರ್ಧದಲ್ಲಿ, ಅಂದರೆ ಅಕ್ಟೋಬರ್ ನಂತರ ಆರ್ಥಿಕತೆಯ ಚೇತರಿಕೆ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಿದ್ದಾರೆ.

  ಇದನ್ನೂ ಓದಿ: RBI measures - ಸಾಲ ಮರುಪಾವತಿಗೆ ಇನ್ನೂ 3 ತಿಂಗಳು ಕಾಲಾವಕಾಶ ಹೆಚ್ಚಳ

  ಲಾಕ್​ಡೌನ್ ಸಡಿಲಿಕೆ, ಆರ್ಥಿಕ ಪ್ಯಾಕೇಜ್ ಕ್ರಮಗಳಿಂದ ಮುಂದಿನ ಕೆಲ ತಿಂಗಳ ನಂತರ ಪರಿಸ್ಥಿತಿ ಸುಧಾರಿಸಬಹುದು. ಇದೆಲ್ಲವೂ ಕೊರೋನಾ ವೈರಸ್ ಎಷ್ಟರಮಟ್ಟಿಗೆ ತಹಬದಿಗೆ ಬರುತ್ತದೆ ಹಾಗೂ ಹಣದುಬ್ಬರ ಪ್ರಮಾಣ ಎತ್ತ ಇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು.
  First published: