HOME » NEWS » Coronavirus-latest-news » RAPID TEST STARTING AT UTTAR KANNADA DISTRICT FOR PREVENT CORONA VIRUS LG

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ‌ ರಣಕೇಕೆ ತಡೆಯಲು ರ‍್ಯಾಪಿಡ್ ಟೆಸ್ಟ್ ಗೆ ಮುಂದಾದ ಆರೋಗ್ಯ ಇಲಾಖೆ

ಇನ್ನು ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳ ಸಂಖ್ಯೆ 2 ಸಾವಿರದ ಗಡಿ ದಾಟಿದ ಹಿನ್ನಲೆ ಜನರಲ್ಲೂ ಒಂದು ರೀತಿಯ ಆತಂಕ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಟೆಸ್ಟ್‌ಗಳನ್ನ ಹೆಚ್ಚಿಸಲು ಆರೋಗ್ಯ ಇಲಾಖೆ ಉತ್ತಮ ಕ್ರಮ ಕೈಗೊಂಡಿದೆ ಅಂತಾ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

news18-kannada
Updated:August 3, 2020, 4:07 PM IST
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ‌ ರಣಕೇಕೆ ತಡೆಯಲು ರ‍್ಯಾಪಿಡ್ ಟೆಸ್ಟ್ ಗೆ ಮುಂದಾದ ಆರೋಗ್ಯ ಇಲಾಖೆ
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಆ.03): ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲೂ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಸೋಂಕು ತಗುಲಿದ ಮೂಲವೇ ಗೊತ್ತಿಲ್ಲದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕೊರೋನಾ ಸೋಂಕು ಸಮುದಾಯಕ್ಕೆ ಹಬ್ಬಿರುವ ಆತಂಕವನ್ನ ಜನರಲ್ಲಿ ಮೂಡಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಗೆ ಕಡಿವಾಣ ಹಾಕಿ ಸೋಂಕು ಹಬ್ಬುವಿಕೆಯನ್ನ ಆದಷ್ಟು ನಿಯಂತ್ರಣ ಮಾಡಲು ಕೊನೆಗೂ ಆರೋಗ್ಯ ಇಲಾಖೆ ರ್ಯಾಪಿಡ್ ಟೆಸ್ಟ್ ಗೆ ಮುಂದಾಗಿದೆ.

ಸದ್ಯ ಜೋರಾಗಿ ಕೆಮ್ಮಿದರೂ ಸಾಕು, ಅದು ಕೊರೋನಾ ಲಕ್ಷಣನಾ ಅಂತಾ ಜನರು ಆತಂಕದಲ್ಲೇ ನೋಡುವ ಪರಿಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ಮೊದಲು ಕೇವಲ ವಿದೇಶಗಳಿಂದ ಮಾತ್ರ ವಾಪಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋವಿಡ್-19 ಇದೀಗ ಮನೆಯಲ್ಲೇ ಇದ್ದವರಿಗೂ ಬೇರೆಯವರಿಂದ ತಗುಲಿದ ಸಾಕಷ್ಟು ಪ್ರಕರಣಗಳು ಸಹ ನಮ್ಮ ಮುಂದೆಯೇ ಇವೆ. ಅಷ್ಟರಮಟ್ಟಿಗೆ ಮಹಾಮಾರಿ ತನ್ನ ಕಬಂಧಬಾಹುವನ್ನ ವಿಸ್ತರಿಸುತ್ತಿದ್ದು, ಉತ್ತರಕನ್ನಡ ಜಿಲ್ಲೆಯ ಜನತೆ ಸಹ ಕೊರೋನಾ ಪ್ರಕರಣಗಳ ಹೆಚ್ಚಳದಿಂದ ಬೆಚ್ಚಿ ಬೀಳುವಂತಾಗಿದೆ.

ಅದರಲ್ಲೂ ದಿನದಿಂದ ದಿನಕ್ಕೆ ಸೋಂಕಿನ ಪ್ರಕರಣಗಳೂ ಸಹ ಹೆಚ್ಚುತ್ತಲೇ ಇದ್ದು, ಸೋಂಕಿನ ನಿಯಂತ್ರಣ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಕೊರೋನಾ ನಾಗಾಲೋಟಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಸಿದ್ಧತೆಯನ್ನ ಮಾಡಿಕೊಂಡಿದ್ದು, ಜಿಲ್ಲೆಯ ಪ್ರತಿಯೊಂದು ತಾಲ್ಲೂಕುಗಳಲ್ಲೂ ಕೊರೋನಾ ಟೆಸ್ಟ್ ಹೆಚ್ಚಿಸಲು ಮುಂದಾಗಿದೆ.

ಕ್ವಾರಂಟೈನ್ ಕೇಂದ್ರಕ್ಕೆ 500 ಬೆಡ್ ನೀಡಿದರೂ ಜಿಲ್ಲಾಡಳಿತ ತಿರಸ್ಕಾರ; ಕಾಂಗ್ರೆಸ್​ ಶಾಸಕ ಕೆ.ವೈ.ನಂಜೇಗೌಡ ಕಿಡಿ

ಹೌದು ಉತ್ತರಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಸುಮಾರು 8 ಸಾವಿರದಷ್ಟು ಆ್ಯಂಟಿಜೆನ್ ರ್ಯಾಪಿಡ್ ಟೆಸ್ಟಿಂಗ್ ಕಿಟ್‌ಗಳನ್ನ ತರಿಸಿಕೊಂಡಿದೆ. ಅವುಗಳನ್ನ ಜಿಲ್ಲೆಯ ಹತ್ತು ತಾಲ್ಲೂಕುಗಳಿಗೂ ವಿತರಣೆ ಮಾಡಿದ್ದು ಪಟ್ಟಣ ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ರ್ಯಾಪಿಡ್ ಟೆಸ್ಟಿಂಗ್ ನಡೆಯಲಿದೆ. ಪ್ರತಿ ತಾಲ್ಲೂಕಿಗೆ 500 700ರ ವರೆಗೆ ಕಿಟ್‌ಗಳನ್ನ ಹಂಚಿಕೆ ಮಾಡಿದ್ದು ಈಗಾಗಲೇ ಸುಮಾರು 5 ಸಾವಿರಕ್ಕೂ ಅಧಿಕ ಟೆಸ್ಟಿಂಗ್‌ಗಳನ್ನ ಮಾಡಲಾಗಿದೆ. ಈ ಮೂಲಕ ಟೆಸ್ಟ್ ಮಾಡಿದ 15 ನಿಮಿಷದಲ್ಲೇ ಪಾಸಿಟಿವ್ ಅಥವಾ ನೆಗೆಟಿವ್ ಎನ್ನುವುದು ಗೊತ್ತಾಗುವುದರಿಂದ ಸೋಂಕಿತರನ್ನ ಪತ್ತೆ ಮಾಡಿ ಅವರಿಂದ ಇತರರಿಗೆ ಸೋಂಕು ಹಬ್ಬದಂತೆ ತಡೆಯಲು ಇದು ಸಹಕಾರಿಯಾಗಲಿದೆ.

ಇನ್ನು ಮುಂದಿನ ಹಂತದಲ್ಲಿ ಈ ಆ್ಯಂಟಿಜೆನ್ ಕಿಟ್‌ಗಳನ್ನ ಬಳಸಿಕೊಂಡು ಪ್ರತಿಯೊಂದು ತಾಲ್ಲೂಕುಗಳಲ್ಲೂ 60 ವರ್ಷ ಮೇಲ್ಪಟ್ಟವರ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಕೊರೊನಾ ಸೋಂಕು 60 ವರ್ಷ ಮೇಲ್ಪಟ್ಟವರು, ಮಕ್ಕಳು ಹಾಗೂ ವಿವಿಧ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಹೆಚ್ಚು ಅಪಾಯಕಾರಿಯಾಗಿದ್ದು ಅಂತಹವರಿಗೆ ಮೊದಲು ತಪಾಸಣೆ ಮಾಡಬೇಕಾದ ಅಗತ್ಯತೆ ಇದೆ. ಹೀಗಾಗಿ ಮತ್ತಷ್ಟು ಕಿಟ್‌ಗಳನ್ನ ತರಿಸಿಕೊಂಡು ಪ್ರತಿಯೊಂದು ತಾಲ್ಲೂಕಿನಲ್ಲೂ ಆಯ್ದ ವಯಸ್ಸಿನವರ ತಪಾಸಣೆಗೆ ಆರೋಗ್ಯ ಇಲಾಖೆ ಪ್ಲ್ಯಾನ್ ರೂಪಿಸಿದೆ.

ಇನ್ನು ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳ ಸಂಖ್ಯೆ 2 ಸಾವಿರದ ಗಡಿ ದಾಟಿದ ಹಿನ್ನಲೆ ಜನರಲ್ಲೂ ಒಂದು ರೀತಿಯ ಆತಂಕ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಟೆಸ್ಟ್‌ಗಳನ್ನ ಹೆಚ್ಚಿಸಲು ಆರೋಗ್ಯ ಇಲಾಖೆ ಉತ್ತಮ ಕ್ರಮ ಕೈಗೊಂಡಿದೆ ಅಂತಾ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಕೊರೋನಾ ಪ್ರಕರಣಗಳ ಹೆಚ್ಚಳದಿಂದ ಆತಂಕಗೊಂಡಿದ್ದ ಜನತೆಗೆ ರ್ಯಾಪಿಡ್ ಟೆಸ್ಟಿಂಗ್ ಕೊಂಚ ನೆಮ್ಮದಿ ತಂದಿದೆ. ಇನ್ನಾದ್ರೂ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಾ ಎನ್ನುವುದನ್ನ ಕಾದು ನೋಡಬೇಕು.
Published by: Latha CG
First published: August 3, 2020, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories