ಕೊರೋನಾದಿಂದ ಹಿರಿಜೀವಗಳನ್ನು ರಕ್ಷಿಸಲು ಅವರ ಮನೆ ಬಾಗಿಲಿಗೇ ಟೆಸ್ಟ್ ಕಿಟ್

ಕೋವಿಡ್  ಪರೀಕ್ಷೆಯನ್ನು ಚುರುಕುಗೊಳಿಸಲು ನಿರ್ಧರಿಸಿರುವ ಬಿಬಿಎಂಪಿ, ಇದಕ್ಕಾಗಿ ಮೊಬೈಲ್ ಟೀಂನ್ನು ರೆಡಿ ಮಾಡಿದೆ. ಈ ಟೀಮ್ ಹಿರಿಯ ನಾಗರಿಕರನ್ನು ಪರೀಕ್ಷೆಗೆ ಒಳಪಡಿಸಲು ಮನೆ ಅವರ ಮನೆ ಬಾಗಿಲುಗಳಿಗೆ ತೆರಳಲಿದೆ. ಅಲ್ಲಿ ಅವರ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೆ ಸ್ಯಾಂಪಲ್​ ಕಲೆಕ್ಟ್ ಮಾಡಿ ಶೀಘ್ರವೇ ರಿಸಲ್ಟ್ ನೀಡಲಿದೆ.

news18-kannada
Updated:July 18, 2020, 5:15 PM IST
ಕೊರೋನಾದಿಂದ ಹಿರಿಜೀವಗಳನ್ನು ರಕ್ಷಿಸಲು ಅವರ ಮನೆ ಬಾಗಿಲಿಗೇ ಟೆಸ್ಟ್ ಕಿಟ್
ಕೊರೋನಾ ವೈರಸ್ ಸ್ಯಾಂಪಲ್
  • Share this:
ಬೆಂಗಳೂರು(ಜು.18):ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ  ಮಾರಕ ಕೊರೋನಾ ಸೋಂಕು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಹೊರಟಿದೆ. 

ಕೊರೋನಾ ಸೋಂಕಿಗೆ ಹೆಚ್ಚಾಗಿ ಬಲಿಯಾಗುತ್ತಿರುವುದು ಮತ್ತು ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ವಯೋಮಾನ ವೃದ್ಧರಲ್ಲಿ. ಈ ಹಿನ್ನೆಲೆ ಹಿರಿಯ ಜೀವಗಳನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲು ಬಿಬಿಎಂಪಿ ಮುಂದಾಗಿದೆ. ವೃದ್ಧರ ಸಂಪೂರ್ಣ ಆರೋಗ್ಯ ತಪಾಸಣೆ ವ್ಯಾಪಕವಾಗಿ ಆಗಬೇಕು.  ಪರಿಣಾಮಕಾರಿಯಾಗಿಯೂ ಕಾರ್ಯಗತಗೊಳ್ಳಬೇಕು. ಹಾಗಾಗಿಯೇ ಇದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ರೋಗ ನಿರೋಧಕ ಶಕ್ತಿ ವೃದ್ಧರು ಮತ್ತು ಸಣ್ಣ ಮಕ್ಕಳಲ್ಲಿ ಕಡಿಮೆ ಇರುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈವರೆಗೆ ದಾಖಲಾಗಿರುವ ಸಾವುಗಳ ಸಂಖ್ಯೆಯನ್ನು ನೋಡಿದಾಗ ಹಾಗೂ ಸೋಂಕು ಹೆಚ್ಚಿನ ರೀತಿಯಲ್ಲಿ ಆವರಿಸಿರುವುದನ್ನು ನೋಡಿದಾಗ ಇದಕ್ಕೆ ಹೆಚ್ಚಿನ ರೀತಿಯಲ್ಲಿ ಬಲಿಯಾದವರು ವೃದ್ಧರೇ. ಹಾಗಾಗಿ ಬಿಬಿಎಂಪಿ ಟಾರ್ಗೆಟ್ ಈಗ ವೃದ್ಧರು.

ವೃದ್ಧರೇ ಬಹುಪಾಲು  ಸೋಂಕಿಗೆ ಬಲಿಯಾಗುತ್ತಿರುವ ಸಂದರ್ಭವನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ, ವೃದ್ಧರ ಸರ್ವೇ ಕಾರ್ಯವನ್ನು ಆರಂಭಿಸಿದೆ. ಜೊತೆಗೆ ವೃದ್ಧರನ್ನು ಹೆಚ್ಚೆಚ್ಚು ಸ್ವ್ಯಾಬ್ ಟೆಸ್ಟ್ ಗೆ ಒಳಪಡಿಸಿ ಅವರ ಫಲಿತಾಂಶವನ್ನು ಹೆಚ್ಚು ಶೀಘ್ರವಾಗಿ ಪಡೆದುಕೊಳ್ಳುವ ವ್ಯವಸ್ಥೆಗೆ ಮುಂದಾಗಿದೆ. ಇದಕ್ಕಾಗಿ ತನ್ನ ಆಡಳಿತ ವ್ಯವಸ್ಥೆಯನ್ನು  ದುಡಿಸಿಕೊಳ್ಳುತ್ತಿದೆ.

ಗ್ರಾಮೀಣ ಭಾಗದಲ್ಲಿ ಇಂಟರ್​ನೆಟ್​ ಸಮಸ್ಯೆ; ಆನ್​ಲೈನ್ ತರಗತಿ ಕೇಳಲು ಈ ವಿದ್ಯಾರ್ಥಿ ಮಾಡಿದ್ದೇನು ಗೊತ್ತಾ?

ಕೋವಿಡ್  ಪರೀಕ್ಷೆಯನ್ನು ಚುರುಕುಗೊಳಿಸಲು ನಿರ್ಧರಿಸಿರುವ ಬಿಬಿಎಂಪಿ, ಇದಕ್ಕಾಗಿ ಮೊಬೈಲ್ ಟೀಂನ್ನು ರೆಡಿ ಮಾಡಿದೆ. ಈ ಟೀಮ್ ಹಿರಿಯ ನಾಗರಿಕರನ್ನು ಪರೀಕ್ಷೆಗೆ ಒಳಪಡಿಸಲು ಮನೆ ಅವರ ಮನೆ ಬಾಗಿಲುಗಳಿಗೆ ತೆರಳಲಿದೆ. ಅಲ್ಲಿ ಅವರ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೆ ಸ್ಯಾಂಪಲ್​​ ಕಲೆಕ್ಟ್ ಮಾಡಿ ಶೀಘ್ರವೇ ರಿಸಲ್ಟ್ ನೀಡಲಿದೆ.

ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗಾಗಿ ಎಂಟು ಕಂಟ್ರೋಲ್ ರೂಮ್ ಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಪ್ರತಿಯೊಂದು ಕಂಟ್ರೋಲ್ ರೂಂನ ನಿರ್ವಹಣೆಗೆ  ನೋಡಲ್ ಅಧಿಕಾರಿಗಳು ನಿಯೋಜನೆ ಆಗಲಿದ್ದಾರೆ. ನೋಡಲ್ ಅಧಿಕಾರಿಯ ಉಸ್ತುವಾರಿಯಲ್ಲಿ ಕೆಲಸ ಮಾಡಲಿರುವ ಸ್ವಯಂಸೇವಕರು ಸೋಂಕು ಲಕ್ಷಣ ಇರುವವರ ಮನೆಗಳಿಗೆ ಭೇಟಿ ಕೊಡಲಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹಿರಿಯ ನಾಗರಿಕರನ್ನು ಸಂಪರ್ಕಿಸಿ ಅವರ ಮನೆ ಬಾಗಿಲಲ್ಲೇ ಅವರ ಗಂಟಲು ದ್ರವದ ಮಾದರಿಯನ್ನು ಪಡೆದು ಅಲ್ಲಿಯೇ  ಪರೀಕ್ಷೆಯನ್ನು ಮಾಡಲಿದ್ದಾರೆ.ಹಿರಿಯ ನಾಗರಿಕರ ಗಂಟಲು ದ್ರವವನ್ನು ಪಡೆದು ಮನೆ ಬಾಗಿಲಲ್ಲೇ ಸ್ಯಾಂಪಲನ್ನು ಟೆಸ್ಟ್ ಮಾಡಿ ಅದರ ರಿಸಲ್ಟ್ ನೀಡಲಿರುವ ಈ ಒಂದು ಹೊಸ ವ್ಯವಸ್ಥೆಗಾಗಿ 115 ತಂಡಗಳನ್ನು ರಚನೆ ಮಾಡಲಾಗಿದೆ. ಈ 115 ತಂಡಗಳು ನಿತ್ಯವೂ ಹಿರಿಯ ನಾಗರಿಕರನ್ನು ಸಂಪರ್ಕಿಸಿ ಅವರನ್ನು ಟೆಸ್ಟ್ ಗೆ ಒಳಪಡಿಸಿ ಕೆಲವೇ ಘಂಟೆಗಳಲ್ಲಿ ರಿಸಲ್ಟ್ ಕೊಡುವ ಕೆಲಸ ಮಾಡಲಿದೆ. ಬೆಂಗಳೂರಿನಲ್ಲಿ ಸುಮಾರು ಇಪ್ಪತ್ತು ಲಕ್ಷದಷ್ಟು ಹಿರಿಯ ನಾಗರಿಕರು ಇರಬಹುದೆಂದು ಅಂದಾಜಿಸಲಾಗಿದೆ.

ಈ ಎಲ್ಲಾ ಇಪ್ಪತ್ತು ಲಕ್ಷ ಹಿರಿಯ ನಾಗರಿಕರನ್ನು ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆಯನ್ನು ಮನಗಂಡಿರುವ ಬಿಬಿಎಂಪಿ, ಹಾಲಿ ರಚಿಸಲಾಗಿರುವ 115  ತಂಡಗಳಿಗಿಂತ ಹೆಚ್ಚಿನ ಅಗತ್ಯ ಕಂಡುಬಂದರೆ, ಈ ತಂಡದ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಲೆಕ್ಕಾಚಾರವನ್ನು ಕೂಡ  ಮಾಡಿದೆ.

ಒಟ್ಟಿನಲ್ಲಿ ಕೊರೋನಾ ಸೋಂಕಿಗೆ ಒಳಪಡುತ್ತಿರುವ ಹಿರಿಯ ಜೀವಗಳ ಆರೋಗ್ಯ ರಕ್ಷಣೆ ಮಾಡುವ ಕಾಳಜಿ ಜೊತೆಗೆ ಕೊರೋನಾದಿಂದ ಅವರನ್ನು ಮುಕ್ತಗೊಳಿಸಿ, ಒಂದು ಸಂತೃಪ್ತ ಹಾಗೂ ನೆಮ್ಮದಿಯ ಬದುಕನ್ನು ನಡೆಸಲು ಪೂರಕವಾದವ ವಾತಾವರಣ ನಿರ್ಮಿಸಿಕೊಡಲು ಬಿಬಿಎಂಪಿ ಈಗ ಆದ್ಯತೆ ಕೊಟ್ಟಿದೆ.ಇ ದು ಒಳ್ಳೆ ಬೆಳವಣಿಗೆಯೂ ಹೌದು.
Published by: Latha CG
First published: July 18, 2020, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading