ಬೆಳಗಾವಿ ಉಸ್ತುವಾರಿ ಸ್ಥಾನ ಕೈತಪ್ಪಿದ ಹತಾಶೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ

ಈಗ ಬೆಳಗಾವಿ ಉಸ್ತುವಾರಿ ಇರಲಿ, ಯಾವುದೇ ಜಿಲ್ಲೆಯ ಉಸ್ತುವಾರಿ ಸಹ ಗೋಕಾಕ್ ಸಾಹುಕಾರ್​ನಿಗೆ ಸಿಕ್ಕಿಲ್ಲ. ಬೆಳಗಾವಿ ಉಸ್ತುವಾರಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ನೀಡಲಾಗಿದೆ.

ಸಚಿವ ರಮೇಶ್​ ಜಾರಕಿಹೊಳಿ

ಸಚಿವ ರಮೇಶ್​ ಜಾರಕಿಹೊಳಿ

  • Share this:
ಬೆಂಗಳೂರು(ಏ.10): ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರಗಳನ್ನು ಮರು ನೇಮಕ ಮಾಡಿ ಆದೇಶ ಮಾಡಿ ಹೊರಡಿಸಿದ್ದಾರೆ.‌ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಆದೇಶದಲ್ಲಿ ಆಶ್ಚರ್ಯ ಅಂದ್ರೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ.

ಸಚಿವ ರಮೇಶ್ ಸಾಹುಕಾರ್ ನನಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿಯೇ ಬೇಕು ಅಂತ ಹಲವು ಸಲ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಕೇಳಿಕೊಂಡಿದ್ದರು. ಆದರೆ, ಈಗ ಬೆಳಗಾವಿ ಉಸ್ತುವಾರಿ ಇರಲಿ, ಯಾವುದೇ ಜಿಲ್ಲೆಯ ಉಸ್ತುವಾರಿ ಸಹ ಗೋಕಾಕ್ ಸಾಹುಕಾರ್​ನಿಗೆ ಸಿಕ್ಕಿಲ್ಲ. ಬೆಳಗಾವಿ ಉಸ್ತುವಾರಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ನೀಡಲಾಗಿದೆ.

ಸಿಎಂ ಬಿಎಸ್​ವೈ ಅವರ ಈ ನಡೆಗೆ ಗೋಕಾಕ್ ಸಾಹುಕಾರ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈಗ ರಾಜ್ಯ ಕೊರೋನಾ ಸಂಕಷ್ಟದಲ್ಲಿದೆ. ಹಾಗಾಗಿ ಅಸಮಾಧಾನ ಇದ್ದರೂ ಸದ್ಯ ಅದನ್ನು ಸಿಎಂ ಮುಂದೆ ತೋಡಿಕೊಳ್ಳದೆ ಇರಲು ತೀರ್ಮಾನಿಸಿದ್ದಾರಂತೆ ಗೋಕಾಕ ಸಾಹುಕಾರ್. ಸದ್ಯ ಈ ವಿಷಯದ ಬಗ್ಗೆ ಏನೂ ಮಾತನಾಡದೆ ಇರಲು ನಿರ್ಧರಿಸಿರುವ ರಮೇಶ್ ಜಾರಕಿಹೊಳಿ ರಾಜ್ಯದಲ್ಲಿ ಕೊರೋನಾ ಹಾವಳಿ ನಂತರ ಈ ವಿಷಯದ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.

ಇನ್ನು ರಮೇಶ್ ಜಾರಕಿಹೊಳಿ ರಾಜ್ಯ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅಲ್ಲದೆ ಬೆಳಗಾವಿ ಜಿಲ್ಲೆಯ ಉಸ್ತುವಾರಿಯ ಬಗ್ಗೆ ಕನಸ್ಸು ಕಂಡಿದ್ದರು. ಬೆಳಗಾವಿ ಉಸ್ತುವಾರಿ ತನಗೇ ಸಿಗುತ್ತೆ ಎಂದು ಆಸೆ ಹೊಂದಿದ್ದರು. ಈ ಹಿಂದೆ ಆಪರೇಷನ್ ಕಮಲವಾದಾಗ ಮಾತು ಕೊಟ್ಟಿದ್ದ ಸಿಎಂ ಬಿಎಸ್ವೈ, ‌ಸಚಿವ ಸ್ಥಾನದ ಜೊತೆಗೆ ಬೆಳಗಾವಿ ಉಸ್ತುವಾರಿ ಕೊಡುವುದಾಗಿ ಹೇಳಿದ್ರಂತೆ. ಈಗ ಉಸ್ತುವಾರಿ ಮಿಸ್ ಆಗಿರುವುದರಿಂದ ಸಾಹುಕಾರ್​ಗೆ ಸಿಟ್ಟು ಬಂದಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು.

ಇದನ್ನೂ ಓದಿ : ಲಾಕ್ ಡೌನ್ ಮುರಿದವರಿಗೆ ಲಾಠಿ - ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಕ್ಕಿ ವಿತರಿಸಿದ ಮುಖ್ಯ ಶಿಕ್ಷಕ ಅಮಾನತು

ಮತ್ತೊಂದು ಕಡೆ, ಗೆಳೆಯ ಶಾಸಕ ಮಹೇಶ್ ಕುಮಟಹಳ್ಳಿಗೂ ಸಚಿವ ಸಂಪುಟದ ಸ್ಥಾನ ಸಿಕ್ಕಿಲ್ಲ. ಕುಮಟಹಳ್ಳಿ ಕೇಳಿದ ನಿಗಮ ಮಂಡಳಿ ಸಹ ಕೊಟ್ಟಿಲ್ಲ ಎಂಬುದು ಕೂಡ ಸಾಹುಕಾರ್​ನನ್ನು ಕೆರೆಳಿಸಿದೆ. ಅಂದುಕೊಂಡಿದ್ದು ಸಿಕ್ಕಿಲ್ಲ ಅಂದ್ರೆ ಸಾಹುಕಾರ್ ಸುಮ್ಮನೆ ಇರುವ ರಾಜಕಾರಣಿ ಅಲ್ಲ ಎಂಬುದು ನಿಜ. ಆದರೆ, ಈಗ ರಾಜ್ಯದಲ್ಲಿ ಕೊರೋನಾ ವೈರಸ್​​ ಹಾಳಿಯಿದೆ. ಹಾಗಾಗಿ ಇದೆಲ್ಲಾ ಮುಗಿದ ಮೇಲೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಕೈ ತಪ್ಪಿದ್ದ ಬಗ್ಗೆ ಸಿಎಂ ಯಡಿಯೂರಪ್ಪ ಬಳಿ ಅವರು ಚರ್ಚೆ ಮಾಡಿಯೇ ಮಾಡುತ್ತಾರೆ ಎನ್ನಲಾಗಿದೆ.
First published: