ಕೊರೋನಾ ಬಗ್ಗೆ ಬಾಬಾ ರಾಮದೇವ್ ನೀಡಿದ ಹೇಳಿಕೆಗೆ ವೈದ್ಯರ ಅಸಮಾಧಾನ

ಪತಂಜಲಿ ಸಂಸ್ಥೆಯ ಉತ್ಪನ್ನಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಆದರೆ, ಕೊರೋನಾ ವೈರಸ್ ನಿಗ್ರಹ ಸಾಧ್ಯವೆಂಬುದು ತಮಗೆ ಗೊತ್ತಿಲ್ಲ ಎಂದು ಆಯುಶ್ ಇಲಾಖೆಯ ಅಧಿಕಾರಿ ಹೇಳಿದ್ಧಾರೆ.

news18
Updated:March 18, 2020, 5:38 PM IST
ಕೊರೋನಾ ಬಗ್ಗೆ ಬಾಬಾ ರಾಮದೇವ್ ನೀಡಿದ ಹೇಳಿಕೆಗೆ ವೈದ್ಯರ ಅಸಮಾಧಾನ
ಬಾಬಾ ರಾಮದೇವ್
  • News18
  • Last Updated: March 18, 2020, 5:38 PM IST
  • Share this:
ಮುಂಬೈ(ಮಾ. 18): ಮೂರ್ನಾಲ್ಕು ತಿಂಗಳಿಂದ ಜಗತ್ತಿನ ರಾಷ್ಟ್ರಗಳಿಗೆ ತಲೆನೋವಾಗಿರುವ ಕೊರೋನಾ ವೈರಸ್ ರೋಗಕ್ಕೆ ಔಷಧಿ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹರಸಾಹಸ ಮಾಡುತ್ತಿದ್ದಾರೆ. ಔಷಧಿ ಇಲ್ಲವೆಂದು ಜನರು ಭಯದಲ್ಲಿ ಮುಲುಗುತ್ತಿದ್ದಾರೆ. ಈ ಸಂದರ್ಭದಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರು ಕೊರೋನಾ ರೋಗಕ್ಕೆ ಆಯುರ್ವೇದದಲ್ಲಿ ಮದ್ದಿದೆ ಎಂದು ಹೇಳಿಕೊಂಡಿದ್ದಾರೆ. ವೈಜ್ಞಾನಿಕವಾಗಿ ಸಂಶೋಧನೆಯನ್ನೂ ಮಾಡಿದ್ದೇವೆ ಎಂದು ಹೇಳಿಕೊಂಡ ಅವರು ಆ ಸಂಶೋಧನಾ ವರದಿಯಲ್ಲಿ ಅಂತಾರಾಷ್ಟ್ರೀಯ ಪತ್ರಿಕೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ಧಾರೆ.

ಕೊರೋನಾಗೆ ಮದ್ದು ಕಂಡುಹಿಡಿದಿರುವುದಾಗಿ ಅವರು ಯಾವುದೋ ವಿಜ್ಞಾನ ವೇದಿಕೆಯಲ್ಲಿ ಹೇಳಿದ್ದಲ್ಲ. ಅವರ ಮಾಲಕತ್ವದ ಪತಂಜಲಿ ಆಯುರ್ವೇದ ಸಂಸ್ಥೆಯ ಅಶ್ವಗಂಧ ಉತ್ಪನ್ನದ ಜಾಹೀರಾತಿನಲ್ಲಿ ಹೇಳಿದ್ದು. ಕೊರೋನಾ ರೋಗಕ್ಕೆ ಅಶ್ವಗಂಧ ಮದ್ದೆಂಬುದು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಬೀತಾಗಿದೆ. ಮಾನವನ ಪ್ರೋಟೀನ್ ಜೊತೆ ಕೊರೋನಾ ವೈರಸ್​ನ ಪ್ರೋಟೀನ್ ಸಮ್ಮಿಳಿತಗೊಳ್ಳದಂತೆ ಅಶ್ವಗಂಧ ಕೆಲಸ ಮಾಡುತ್ತದೆ ಎಂದು ಈ ಜಾಹೀರಾತಿನಲ್ಲಿ ರಾಮದೇವ್ ಹೇಳುತ್ತಾರೆ.

ಇದನ್ನೂ ಓದಿ: ಕೊರೋನಾ ಎಫೆಕ್ಟ್‌; ಭಾರತಕ್ಕೆ ವಾಪಸ್‌ ಬರಲಾಗದೆ ಇಂಡೋನೇಷ್ಯದಲ್ಲೇ ಸಿಲುಕಿದ ನೂರಕ್ಕೂ ಹೆಚ್ಚು ಭಾರತೀಯರು

ಆದರೆ, ಅವರು ಈ ಸಂಶೋಧನೆಯ ವಿವರವನ್ನು ನೀಡಿಲ್ಲ. ಮಾಧ್ಯಮದವರ ಸಂಪರ್ಕಕ್ಕೆ ರಾಮದೇವ್ ಅವರಾಗಲೀ, ಪತಂಜಲಿ ಸಂಸ್ಥೆಯವರಾಗಲೀ ಸಿಕ್ಕಿಲ್ಲ. ರಾಮದೇವ್ ಅವರ ಈ ಜಾಹೀರಾತಿಗೆ ಕೆಲ ವೈದ್ಯರು ಅಸಮಾಧಾನಗೊಂಡಿದ್ಧಾರೆ. “ಇಂಥ ಹೇಳಿಕೆಗಳು ಜನರಲ್ಲಿ ನಕಲಿ ಭದ್ರತಾ ಭಾವನೆ ಸೃಷ್ಟಿಸುತ್ತದೆ. ಹೆಚ್ಚು ಶಿಕ್ಷಿತರಲ್ಲದ ಜನರು ಇಂಥ ಜಾಹೀರಾತಿಗೆ ಮರುಳಾಗುತ್ತಾರೆ. ಇಂಥ ಜಾಹೀರಾತುಗಳನ್ನ ಸರ್ಕಾರ ನಿಷೇಧಿಸಬೇಕು” ಎಂದು ವೈದ್ಯಕೀಯ ಸಂಸ್ಥೆಯೊಂದರ ಪ್ರೊಫೆಸರ್ ಡಾ. ಗಿರಿಧರ್ ಬಾಬು ಹೇಳುತ್ತಾರೆ.

ಬಾಬಾ ರಾಮದೇವ್ ಅವರ ಈ ಜಾಹೀರಾತಿನ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಆಯುಶ್ ಇಲಾಖೆಯ ಸಲಹೆಗಾರ ಮನೋಜ್ ನೇಸರಿ, ಪತಂಜಲಿ ಸಂಸ್ಥೆಯ ಉತ್ಪನ್ನಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಆದರೆ, ಕೊರೋನಾ ವೈರಸ್ ನಿಗ್ರಹ ಸಾಧ್ಯವೆಂಬುದು ತಮಗೆ ಗೊತ್ತಿಲ್ಲ. ಈ ಬಗ್ಗೆ ದೂರು ಕೊಟ್ಟರೆ ಪರಿಶೀಲಿಸಲಾಗುವುದು ಎಂದಿದ್ದಾರೆ.

ಕೊರೋನಾ ವೈರಸ್​ ಮದ್ದು ಕುರಿತು ಮಾತನಾಡಿದ್ದು ಬಾಬಾ ರಾಮದೇವ್ ಮೊದಲಿಗರಲ್ಲ. ಕೆಲ ಬಿಜೆಪಿ ನಾಯಕರು ಗೋಮೂತ್ರದಿಂದ ಕೊರೋನಾ ವೈರಸ್ ನಿಗ್ರಹಿಸಬಹುದು ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

First published: March 18, 2020, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading