ರಾಮನಗರ ಜಿ.ಪಂ. ಸಿಇಒ ಇಕ್ರಂ ಕಾರ್ಯವೈಖರಿಗೆ ಜನಮೆಚ್ಚುಗೆ; ಕೊರೋನಾ ಸಂತ್ರಸ್ತರಿಗೆ ಸಹಾಯವಾಣಿ

ಸಾರ್ವಜನಿಕರು ಈ ಸಹಾಯವಾಣಿಯ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ ಜನರಿಗಾಗಿ ಈ ನೂತನ ಯೋಜನೆ ಪ್ರಾರಂಭವಾಗಿದೆ ಎಂದು ಇಕ್ರಮ್ ತಿಳಿಸಿದ್ದಾರೆ.

news18
Updated:March 31, 2020, 10:19 PM IST
ರಾಮನಗರ ಜಿ.ಪಂ. ಸಿಇಒ ಇಕ್ರಂ ಕಾರ್ಯವೈಖರಿಗೆ ಜನಮೆಚ್ಚುಗೆ; ಕೊರೋನಾ ಸಂತ್ರಸ್ತರಿಗೆ ಸಹಾಯವಾಣಿ
ರಾಮನಗರ ಜಿ.ಪಂ. ಸಿಇಒ
  • News18
  • Last Updated: March 31, 2020, 10:19 PM IST
  • Share this:
ರಾಮನಗರ: ಕೊರೋನಾ ವೈರಸ್​ನಿಂದ ಇಡೀ ವಿಶ್ವವೇ ಸಂಪೂರ್ಣ ಸ್ತಬ್ಧವಾಗಿದೆ. ಬಡವರಿರಲಿ, ಶ್ರೀಮಂತರಿರಲಿ ಎಲ್ಲರಿಗೂ ಕೊರೋನಾ ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯ ಜನರಿಗೆ ದಿನನಿತ್ಯದ ಅಗತ್ಯ ವಸ್ತುಗಳು ಸಿಗದೇ ಸಾಕಷ್ಟು ತೊಂದರೆಯಾಗಿದೆ. ಆದರೆ ರಾಮನಗರ ಜಿಲ್ಲಾ ಪಂಚಾಯಿತಿ ಸಿಇಓ ಇಕ್ರಂರವರು ಇದಕ್ಕಾಗಿ ಒಂದು ಸಹಾಯವಾಣಿ ಪ್ರಾರಂಭಿಸಿದ್ದಾರೆ.

ಕೊರೋನಾ ಕರ್ಫ್ಯೂ ಇರುವ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಸಹಾಯವಾಣಿ ನಂಬರ್ ನೀಡಲಾಗಿದ್ದು, ಸಾರ್ವಜನಿಕರು 8277517672 ಈ ನಂಬರ್​ಗೆ ಕರೆ ಮಾಡಿ ತಮಗೆ ಬೇಕಾದ ದಿನನಿತ್ಯದ ಅಗತ್ಯ ವಸ್ತುಗಳನ್ನ ಖರೀದಿ ಮಾಡಬಹುದಾಗಿದೆ.

ಈ ಬಗ್ಗೆ ಸಿಇಓ ಇಕ್ರಂರವರು ಮಾತನಾಡಿ, ಸಾರ್ವಜನಿಕರು ಈ ಸಹಾಯವಾಣಿಯ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ ಜನರಿಗಾಗಿ ಈ ನೂತನ ಯೋಜನೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ಚಿಕಿತ್ಸೆಗೆ ಈ ಔಷಧವೇ ಸದ್ಯಕ್ಕೆ ಬೆಸ್ಟ್ ಎನ್ನುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ

ಆದರೆ ಅಗತ್ಯ ಇಲ್ಲದಿದ್ದರೂ ಸುಖಾಸುಮ್ಮನೆ ಕರೆ ಮಾಡದಿರಿ. ಅವಶ್ಯಕತೆ ಇರುವ ಮಂದಿಗೆ ಸಹಾಯದ ಅವಕಾಶ ತಪ್ಪಿಸಬೇಡಿ ಎಂದು ಇಕ್ರಂರವರು ಜನರಲ್ಲಿ ಮನವಿ ಮಾಡಿದ್ದಾರೆ. ರಾಮನಗರ ಜಿ.ಪಂ. ಸಿಇಓ ಅವರ ಈ ಕಾರ್ಯಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ಎ.ಟಿ. ವೆಂಕಟೇಶ್

First published:March 31, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading