HOME » NEWS » Coronavirus-latest-news » RAMANAGAR DC ARCHANA MUFTI VISIT TO PROVISIONAL STORES AND MEETING WITH VATAL NAGARAJ SNVS

ಜಿಲ್ಲಾಧಿಕಾರಿ ಅರ್ಚನಾ ಮಫ್ತಿಯಲ್ಲಿ ಕಾರ್ಯಾಚರಣೆ; ದಿನಸಿ ಅಂಗಡಿಗಳಿಗೆ ಶಾಕ್; ವಾಟಾಳ್ ನಾಗರಾಜ್ ಜೊತೆಯೂ ಚರ್ಚೆ

ಕೆಲ ದಿನಸಿ ಅಂಗಡಿ ಮಾಲೀಕರು ಯಾವುದೇ ಲೈಸೆನ್ಸ್ ಇಲ್ಲದೇ ದಿನಸಿ ಮಾರಾಟ ಮಾಡುತ್ತಿದ್ದುದು ಮತ್ತು ಬೇಕಾಬಿಟ್ಟಿ ದರ ನಿಗದಿ ಪಡಿಸಿ ಮಾರುತ್ತಿದ್ದುದು ಕಂಡುಬಂದಿತ್ತು.

news18-kannada
Updated:April 14, 2020, 1:21 PM IST
ಜಿಲ್ಲಾಧಿಕಾರಿ ಅರ್ಚನಾ ಮಫ್ತಿಯಲ್ಲಿ ಕಾರ್ಯಾಚರಣೆ; ದಿನಸಿ ಅಂಗಡಿಗಳಿಗೆ ಶಾಕ್; ವಾಟಾಳ್ ನಾಗರಾಜ್ ಜೊತೆಯೂ ಚರ್ಚೆ
ರಾಮನಗರ ಜಿಲ್ಲಾಧಿಕಾರಿ ಅರ್ಚನಾ
  • Share this:
ರಾಮನಗರ: ಕೊರೋನಾ ವೈರಸ್ ಬಿಕ್ಕಟ್ಟು ಜನಸಾಮಾನ್ಯರಿಗೆ ತೀವ್ರವಾಗಿ ತಟ್ಟಿದೆ. ಕೆಲ ದಿನಸಿ ಅಂಗಡಿ ಮಾಲೀಕರು ಈ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಮನಗರದಲ್ಲಿ ಇಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಫ್ತಿಯಲ್ಲಿ ದಿನಸಿ ಅಂಗಡಿಗಳಿಗೆ ದಿಢೀರ್ ಭೇಟಿ ಕೊಟ್ಟು ಶಾಕ್ ಕೊಟ್ಟಿದ್ದಾರೆ.

ಕೊರೋನಾಯಿಂದಾಗಿ ಒಂದಕ್ಕೆ ಡಬಲ್ ರೇಟ್ ಫಿಕ್ಸ್ ಮಾಡಿ ಗ್ರಹಕರಿಗೆ ಮೋಸ ಮಾಡುತ್ತಿದ್ದ ರಾಮನಗರದ ಕೆಲ ಅಂಗಡಿಗಳಿಗೆ ಸೋಮವಾರ ಸಂಜೆ ಡಿಸಿ ಅರ್ಚನಾ ಹಾಗೂ APMC ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ.

ಕೆಲ ದಿನಸಿ ಅಂಗಡಿ ಮಾಲೀಕರು ಯಾವುದೇ ಲೈಸೆನ್ಸ್ ಇಲ್ಲದೇ ದಿನಸಿ ಮಾರಾಟ ಮಾಡುತ್ತಿದ್ದುದು ಮತ್ತು ಬೇಕಾಬಿಟ್ಟಿ ದರ ನಿಗದಿ ಪಡಿಸಿ ಮಾರುತ್ತಿದ್ದುದು ಕಂಡುಬಂದಿತ್ತು. ಅಂಗಡಿಯಲ್ಲಿ ಕುಳಿತು ಮಾಲೀಕರಿಗೆ ಜಿಲ್ಲಾಧಿಕಾರಿಗಳೇ ತರಾಟೆಗೆ ತೆಗೆದುಕೊಂಡರು.

ಇವತ್ತು ಅವರು ಈ ದಿನಸಿ ಅಂಗಡಿ ಮಾಲೀಕರಿಗೆ ನೋಟಿಸ್ ಕೊಡಲು ನಿರ್ಧಾರ ಮಾಡಿದ್ದಾರೆ. ಮುಂದೆ ಗ್ರಾಹಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕೆಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ 40 ವಾರ್ಡ್​ಗಳಲ್ಲಿ ಕೊರೋನಾ ಸೋಂಕು; ಈ ಪಟ್ಟಿಯಲ್ಲಿ ನಿಮ್ಮ ಪ್ರದೇಶ ಇದೆಯಾ?

Vatal Nagaraj meets Ramanagar DC Archana
ರಾಮನಗರ ಜಿಲ್ಲಾಧಿಕಾರಿ ಅರ್ಚನಾ ಅವರ ಜೊತೆ ವಾಟಾಳ್ ನಾಗರಾಜ್ ಚರ್ಚೆ


ಇದೇ ವೇಳೆ, ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ವಾಟಾಳ್ ನಾಗರಾಜ್ ನಿನ್ನೆ ಭೇಟಿ ನೀಡಿ ಜಿಲ್ಲೆಯಲ್ಲಿನ ಕೋವಿಡ್ - 19 ವಿಚಾರವಾಗಿ ಚರ್ಚೆ ನಡೆಸಿದರು. ಎಂ.ಎಸ್.ಅರ್ಚನಾ ಜೊತೆಗೆ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಮಾತುಕತೆ ನಡೆಸಿದ ವಾಟಾಳ್ ನಾಗರಾಜ್, ಕೊರೋನಾ ಸೋಂಕು ಒಂದು ಮಹಾಮಾರಿ. ಹಾಗಾಗಿ ಇವತ್ತು ರಾಮನಗರ ಜಿಲ್ಲೆಗೆ ಭೇಟಿ ಕೊಟ್ಟಿದ್ದೇನೆ. ಮುಂದೆ ಕೋಲಾರ, ಚಾಮರಾಜನಗರಕ್ಕೆ ಭೇಟಿ ಕೊಡ್ತೀನಿ. ರಾಜ್ಯ ಸರ್ಕಾರಕ್ಕೆ ನಾನು ಒತ್ತಾಯ ಮಾಡ್ತೇನೆ. ಸಂಸದರನ್ನ, ಶಾಸಕರನ್ನ ಈ ಸಂದರ್ಭದಲ್ಲಿ ಬಳಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಅವರ ಜವಾಬ್ದಾರಿ ಹೆಚ್ಚಿದೆ. ಸಂಸದರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು. ಸಂಸದರ ಅಡಿಯಲ್ಲಿ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸದಸ್ಯರಿಗೆ ಜವಾಬ್ದಾರಿ ಕೊಡಬೇಕು. ಕೊರೋನಾ ವೈರಸ್ ವಿರುದ್ಧ ಎಲ್ಲರೂ ಹೋರಾಡಬೇಕು. ಈ ವಿಚಾರದಲ್ಲಿ ರಾಜಕಾರಣ ತರಬಾರದು ಎಂದರು.ಇನ್ನು, ರಾಮನಗರ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ವಿಚಾರಕ್ಕೆ ಮಾತನಾಡಿ, ಇದರಲ್ಲಿ ಯಾವುದೇ ವಿಶೇಷತೆಯಿಲ್ಲ . ನಾನು ಇಲ್ಲಿ ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ. ಆ ರೀತಿಯ ಯಾವ ಯೋಚನೆಯೂ ಇಲ್ಲ ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು.

ವರದಿ: ಎ.ಟಿ. ವೆಂಕಟೇಶ್

Youtube Video
First published: April 14, 2020, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories