Ramadan 2020: ಭಾರತದಲ್ಲಿ ಪವಿತ್ರ ರಂಜಾನ್-2020 ಆಚರಣೆ ದಿನ ಯಾವುದು ಗೊತ್ತಾ?

Eid Al-Fitr 2019: ಭಾರತದಲ್ಲಿ ಪವಿತ್ರ ರಂಜಾನ್ 2020 ಏಪ್ರಿಲ್ 24 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಇದು ಅರ್ಧ ಚಂದ್ರಾಕೃತಿಯ ದೃಶ್ಯವನ್ನು ಅವಲಂಬಿಸಿರುತ್ತದೆ. ಹೀಗೆ ಆರಂಭವಾಗುವ ರಂಜಾನ್ ಅನ್ನು ನಾಲ್ಕು ವಾರಗಳವರೆಗೆ ಆಚರಿಸಲಾಗುತ್ತದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ವಿಶ್ವದಾದ್ಯಂತ ಮುಸ್ಲಿಮರು ಸಂಭ್ರಮ ಸಡಗರದಿಂದ ಆಚರಿಸುವ ರಂಜಾನ್ ತಿಂಗಳನ್ನು ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ ಪವಿತ್ರ ತಿಂಗಳು ಎಂದೇ ಕರೆಯಲಾಗುತ್ತದೆ. ಈ ರಂಜಾನ್ ಹಬ್ಬವನ್ನು ಈ ವರ್ಷದ ಮುಸ್ಲಿಮ್ ಕ್ಯಾಲೆಂಡರ್‌ ಪ್ರಕಾರ 9ನೇ ತಿಂಗಳು ಆಚರಿಸಲಾಗುತ್ತದೆ. ಅಂದರೆ ಇದೇ  ಏಪ್ರಿಲ್ ತಿಂಗಳು ಆಚರಿಸಲಾಗುತ್ತದೆ.

ಅರೇಬಿಕ್ ನುಡಿಗಟ್ಟುಗಳ ಪ್ರಕಾರ “ರಂಜಾನ್ ಕರೀಮ್” ಎಂದರೆ ದೇವರ ಆಶೀರ್ವಾದ ಮತ್ತು ಸಂತೋಷದಿಂದ ರಂಜಾನ್ ಹಬ್ಬವನ್ನು ಆನಂದಿಸುವುದಾಗಿದೆ.

ಭಾರತದಲ್ಲಿ ರಂಜಾನ್ 2020 ದಿನಾಂಕ:

ಭಾರತದಲ್ಲಿ ಪವಿತ್ರ ರಂಜಾನ್ 2020 ಏಪ್ರಿಲ್ 24 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಇದು ಅರ್ಧ ಚಂದ್ರಾಕೃತಿಯ ದೃಶ್ಯವನ್ನು ಅವಲಂಬಿಸಿರುತ್ತದೆ. ಹೀಗೆ ಆರಂಭವಾಗುವ ರಂಜಾನ್ ಅನ್ನು ನಾಲ್ಕು ವಾರಗಳವರೆಗೆ ಆಚರಿಸಲಾಗುತ್ತದೆ.

ಈ ರಂಜಾನ್ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಆಚರಿಸುತ್ತಾರೆ. ಸೂರ್ಯಾಸ್ತಮನದ ನಂತರ ಸಂಜೆ ವೇಳೆಗೆ ಎಲ್ಲರೂ ಒಟ್ಟಾಗಿ ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇಫ್ತಾರ್ ಎಂದೂ ಕರೆಯಲ್ಪಡುವ ಆಹಾರವನ್ನು ಸೇವಿಸುವ ಮೂಲಕ ಉಪವಾಸವನ್ನು ಮುರಿಯುತ್ತಾರೆ.

ಒಬ್ಬ ವ್ಯಕ್ತಿ ದಿನವಿಡೀ ಆಹಾರ ಮತ್ತು ನೀರಿನಿಂದ ದೂರವಿರುವುದರಿಂದ ಆತ ಜನರ ನೋವು ಮತ್ತು ಸಂಕಟಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಅಲ್ಲದೆ ದೇವರಿಗೆ (ಅಲ್ಲಾಹ್) ಹತ್ತಿರವಾಗುತ್ತಾನೆ ಎಂದು ಇಸ್ಲಾಂ ಧರ್ಮದಲ್ಲಿ ನಂಬಲಾಗಿದೆ.

ಇಸ್ಲಾಂ ಧರ್ಮದ ಪ್ರಮುಖ 5 ನಂಬಿಕೆ ಅಥವಾ ಆಚರಣೆಯಲ್ಲಿ ರಂಜಾನ್ ಸಮಯದ ಉಪಾವಾಸವನ್ನೂ ಒಂದು ಎಂದು ಪರಿಗಣಿಸಲಾಗಿದೆ. ಇದಲ್ಲದೆ, ದೇವರಲ್ಲಿ ನಂಬಿಕೆ, ದೈನಂದಿನ ಪ್ರಾರ್ಥನೆ, ದಾನ ಮತ್ತು ಬದುಕಿನಲ್ಲಿ ಒಮ್ಮೆ ಮೆಕ್ಕಾಗೆ ಹಜೆ ಯಾತ್ರೆ ಕೈಗೊಳ್ಳುವುದು ಇಸ್ಲಾಂ ಧರ್ಮದ ಉಳಿದ ಪ್ರಮುಖ ನಾಲ್ಕು ನಂಬಿಕೆಗಳಾಗಿವೆ.

ಈ ನಡುವೆ ಪವಿತ್ರ ರಂಜಾನ್ ತಿಂಗಳಲ್ಲಿ ಎಲ್ಲಾ ಮುಸ್ಲಿಮರೂ ಲಾಕ್‌ಡೌನ್ ನಿಯಮಗಳನ್ನು ಮುರಿಯದೆ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಲು ಮತ್ತು ಇತರೆ ಧಾರ್ಮಿಕ ಆಚರಣೆಗಳಲ್ಲಿ ತೊಡಗಲು ಎಲ್ಲಾ ವಕ್ಫ್‌ ಮಂಡಳಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೇಂದ್ರ ಸರ್ಕಾರದ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ಕೇಂದ್ರ ವಕ್ಫ್ ಕೌನ್ಸಿಲ್ ಅಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಸೂಚಿಸಿದ್ದಾರೆ.

ಇದನ್ನೂ ಓದಿ : ಫೇಸ್‌ಬುಕ್‌ ಜೊತೆಗಿನ ಒಪ್ಪಂದದ ನಂತರ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಮುಖೇಶ್ ಅಂಬಾನಿ
First published: