Rakshit Shetty: ಲಾಕ್​ಡೌನ್​ ಮುಗಿದ ಕೂಡಲೇ ವಿದೇಶಕ್ಕೆ ಹೋಗಲೇಬೇಕಂತೆ ರಕ್ಷಿತ್​ ಶೆಟ್ಟಿ...!

777 Charlie: ಕೆಲ ಸೆಲೆಬ್ರಿಟಿಗಳಂತೂ ಲಾಕ್​ಡೌನ್​ ಮುಗಿದು ಎಲ್ಲ ಮೊದಲಿನಂತೆ ಆದ ಕೂಡಲೇ ಎಲ್ಲಿಗೆ ಹೋಗಬೇಕು ಎಂದೆಲ್ಲ ಪ್ಲಾನ್​ ಮಾಡಿಕೊಂಡಿದ್ದಾರೆ. ಅದರಂತೆ ರಕ್ಷಿತ್ ಶೆಟ್ಟಿ ಸಹ ಲಾಕ್​ಡೌನ್​ ಮುಗಿದ ಕೂಡಲೇ ವಿದೇಶಕ್ಕೆ ಹಾರಲೇಬೇಕು ಅಂತ ನಿರ್ಧರಿಸಿದ್ದಾರಂತೆ. 

Anitha E | news18-kannada
Updated:May 23, 2020, 10:41 PM IST
Rakshit Shetty: ಲಾಕ್​ಡೌನ್​ ಮುಗಿದ ಕೂಡಲೇ ವಿದೇಶಕ್ಕೆ ಹೋಗಲೇಬೇಕಂತೆ ರಕ್ಷಿತ್​ ಶೆಟ್ಟಿ...!
ರಕ್ಷಿತ್​ ಶೆಟ್ಟಿ
  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕೆಲಸಗಳನ್ನು ನಿಲ್ಲಿಸಲಾಗಿತ್ತು. ಆದರೆ ಈಗ ಲಾಕ್​ಡೌನ್​ ಸಡಿಲಿಸಲಾಗುತ್ತಿದ್ದು, ಮೆಲ್ಲನೆ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ಮರಳುತ್ತಿದ್ದಾರೆ. ಇದಕ್ಕೆ ಸಿನಿ ರಂಗವೂ ಹೊರತಾಗಿಲ್ಲ. 

ಕೆಲ ಸೆಲೆಬ್ರಿಟಿಗಳಂತೂ ಲಾಕ್​ಡೌನ್​ ಮುಗಿದು ಎಲ್ಲ ಮೊದಲಿನಂತೆ ಆದ ಕೂಡಲೇ ಎಲ್ಲಿಗೆ ಹೋಗಬೇಕು ಎಂದೆಲ್ಲ ಪ್ಲಾನ್​ ಮಾಡಿಕೊಂಡಿದ್ದಾರೆ. ಅದರಂತೆ ರಕ್ಷಿತ್ ಶೆಟ್ಟಿ ಸಹ ಲಾಕ್​ಡೌನ್​ ಮುಗಿದ ಕೂಡಲೇ ವಿದೇಶಕ್ಕೆ ಹಾರಲೇಬೇಕು ಅಂತ ನಿರ್ಧರಿಸಿದ್ದಾರಂತೆ.




 



View this post on Instagram




 

#quarantinelife Charlie and Dharma ❤️ #777Charlie #liveinyourlivingroom


A post shared by Rakshit Shetty (@rakshitshetty) on






ರಕ್ಷಿತ್ ಶೆಟ್ಟಿ ಲಾಕ್​ಡೌನ್​ನಿಂದಾಗಿ ಬೋರಾಗಿ ವಿದೇಶಕ್ಕೆ ಹೋಗುವ ಪ್ಲಾನ್​ನಲ್ಲಿಲ್ಲ. ಬದಲಾಗಿ ಅವರ ಸಿನಿಮಾ '777 ಚಾರ್ಲಿ'ಯ ಉಳಿದ ಭಾಗದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಲೇಬೇಕಂತೆ. ಕನ್ನಡದ ಇತರೆ ಚಿತ್ರತಂಡಗಳು ಕೊರೋನಾದಿಂದಾಗಿ ಭಾರತದಲ್ಲೇ ಚಿತ್ರೀಕರಣ ಮುಗಿಸಿದ್ದಾರೆ. ಆದರೆ ರಕ್ಷಿತ್​ ಮಾತ್ರ ಕೊರೋನಾ ಕಾರಣದಿಂದಲೇ ಈಗ ವಿದೇಶಕ್ಕೆ ಹೋಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ.

Three Charlies are Traveling Pan India with Rakshit shettys Charlie Team
777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ


'777 ಚಾರ್ಲಿ' ಸಿನಿಮಾದ ಶೇ.65ರಷ್ಟು ಭಾಗದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದ ಚಿತ್ರತಂಡ ಏಪ್ರಿಲ್​ನಲ್ಲಿ ಕೊಡೈಕೆನಾಲ್​, ಶಿಮ್ಲಾ, ಕಾಶ್ಮೀರ ಸೇರಿದಂತೆ ಇನ್ನೂ ಕೆಲವೆಡೆಗಳಲ್ಲಿ ಶೂಟಿಂಗ್​ ಮಾಡಲಿತ್ತು.  ಹಿಮ ಬೀಳುವಾಗ ನಡೆಯಬೇಕಿದ್ದ ಲಾಕ್​ಡೌನ್​ನಿಂದಾಗಿ ನಡೆಯಲಿಲ್ಲ. ಈಗ ಮತ್ತೆ ಅಲ್ಲಿಗೆ ಹೋಗಿ ಚಿತ್ರೀಕರಣ ಮಾಡಬೇಕೆಂದರೆ ನವೆಂಬರ್​ವರೆಗೂ ಕಾಯಬೇಕಂತೆ.

ಇದನ್ನೂ ಓದಿ: ಕ್ಯಾನ್ಸರ್​ನಿಂದಾಗಿ 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಬಾಲಿವುಡ್​ ನಟ..!

ಈ ಕಾರಣದಿಂದಲೇ ಹಿಮಚ್ಛಾಧಿತ ಪ್ರದೇಶವಿರುವ ಕಡೆ ಹೋಗಿ ಸಿನಿಮಾ ಚಿತ್ರೀಕರಣ ಮುಗಿಸುವ ಪ್ಲಾನ್​ನಲ್ಲಿದೆಯಂತೆ '777 ಚಾರ್ಲಿ' ಚಿತ್ರತಂಡ. ಹೀಗೊಂದು ಸುದ್ದಿ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.

Adah Sharma: ಹೊಸ ಚಾಲೆಂಜ್​ ಕೊಟ್ಟ ಅದಾ ಶರ್ಮಾ: ಹಾಟ್​ ಫೋಟೋಗಳು ವೈರಲ್​..!

First published: May 23, 2020, 10:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading