Rakhi Sawant: ಕೊರೊನಾ ವೈರಸ್​ ನಾಶಕ್ಕೆ ಔಷಧಿಯೊಂದಿಗೆ ಚೀನಾದತ್ತ ಪ್ರಯಾಣ ಬೆಳೆಸಿದ ವಿವಾದಿತ ನಟಿ ರಾಖಿ ಸಾವಂತ್​..!

Corona Virus- Rakhi Sawant: ರಾಖಿ ಸಾವಂತ್​ ಎಂದಿನಂತೆ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಕೂಡ ತಮ್ಮ ಹೊಸ ವಿಡಿಯೋದಿಂದಾಗಿ. ಹೌದು, ರಾಖಿ ಈಗ ಚೀನಾದತ್ತ ಪ್ರಯಾಣ ಬೆಳೆಸಿದ್ದಾರೆ. ಕಾರಣ ಕೊರೊನಾ ವೈರಸನ್ನು ನಾಶಪಡಿಸೋಕೆ. ಅದಕ್ಕಾಗಿ ವಿಶೇಷವಾದ ಔಷಧವನ್ನೂ ತಮ್ಮ ಜೊತೆ ಇಟ್ಟುಕೊಂಡು ಹೋಗಿದ್ದಾರಂತೆ ರಾಖಿ.

Anitha E | news18-kannada
Updated:February 4, 2020, 12:05 PM IST
Rakhi Sawant: ಕೊರೊನಾ ವೈರಸ್​ ನಾಶಕ್ಕೆ ಔಷಧಿಯೊಂದಿಗೆ ಚೀನಾದತ್ತ ಪ್ರಯಾಣ ಬೆಳೆಸಿದ ವಿವಾದಿತ ನಟಿ ರಾಖಿ ಸಾವಂತ್​..!
ರಾಖಿ ಸಾವಂತ್​
  • Share this:
ಸದಾ ತಮ್ಮ ವಿಚಿತ್ರವಾದ ವಿಡಿಯೋ ಹಾಗೂ ವಿವಾದಗಳಿಂದಲೇ  ನಟಿ ರಾಖಿ ಸಾವಂತ್​ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಅವರು ಕೆಲವೊಂದು ವಿಷಯಗಳ ಬಗ್ಗೆ ಕೊಡುವ ಹೇಳಿಕೆಗಳು ಸಾಕಷ್ಟು ಚರ್ಚೆಗೀಡಾಗುತ್ತವೆ.

ರಾಖಿ ಸಾವಂತ್​ ಎಂದಿನಂತೆ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಕೂಡ ತಮ್ಮ ಹೊಸ ವಿಡಿಯೋದಿಂದಾಗಿ. ಹೌದು, ರಾಖಿ ಈಗ ಚೀನಾದತ್ತ ಪ್ರಯಾಣ ಬೆಳೆಸಿದ್ದಾರೆ. ಕಾರಣ ಕೊರೊನಾ ವೈರಸನ್ನು ನಾಶಪಡಿಸೋಕೆ. ಅದಕ್ಕಾಗಿ ವಿಶೇಷವಾದ ಔಷಧವನ್ನೂ ತಮ್ಮ ಜೊತೆ ಇಟ್ಟುಕೊಂಡು ಹೋಗಿದ್ದಾರಂತೆ ರಾಖಿ.

Rakhi Sawant reached china to remove corona virus after taking medicine from NASA
ರಾಖಿ ಸಾವಂತ್​


ನಾಸಾದಿಂದ ವಿಶೇಷವಾಗಿ ತರಿಸಲಾಗಿರುವ ಔಷಧವನ್ನು ಚೀನಾಗೆ ತೆಗೆದುಕೊಂಡು ಹೋಗಿದ್ದಾರೆ. ಅವರು ವಿಮಾನದಲ್ಲಿ ಟೇಕ್ಆಫ್​ ಆಗುವ ಮುನ್ನ ಮಾಡಿರುವ ವಿಡಿಯೋ ಇಲ್ಲಿದೆ. 
View this post on Instagram

 

A post shared by Rakhi Sawant (@rakhisawant2511) on Feb 2, 2020 at 3:13am PST


ತಮ್ಮ ವಿಡಿಯೋದಲ್ಲಿ ಮೋದಿಗೆ ಅವರಿಗೆ ರಾಖಿ ಹೀಗೆ ಹೇಳಿದ್ದಾರೆ. ನಾನು ನಾಸಾದಿಂದ ಕೊರೊನಾ ವೈರಸ್​ ಕೊಲ್ಲಲು ಔಷಧ ತರಿಸಿದ್ದೇನೆ. ಅದನ್ನು ತೆಗೆದುಕೊಂಡು ಚೀನಾಗೆ ಹೋಗುತ್ತಿದ್ದೇನೆ ಎಂದಿದ್ದಾರೆ. ಅದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕಾಲಿವುಡ್​ನ ಸ್ಟಾರ್​ ಸಹೋದರರ ಜೊತೆ ರಶ್ಮಿಕಾ ರೊಮ್ಯಾನ್ಸ್​..!

ಇನ್ನೂ ವಿಡಿಯೋದಲ್ಲಿ ರಾಖಿ ಕೆಂಪು ಬಣ್ಣದ ಬಟ್ಟೆ ತೊಟ್ಟಿದ್ದು, ಕೊರಳಿನಲ್ಲಿ ಮಾಂಗಲ್ಯವಿದೆ. ಅಲ್ಲದೆ ರಾಖಿ 2019ರಲ್ಲಿ ತಮ್ಮ ವಿವಾಹದ ವಿಷಯದಿಂದ ಸಖತ್ ಸದ್ದು ಮಾಡಿದ್ದರು.

ಇದನ್ನೂ ಓದಿ: ಅಕ್ಷಯ್​ ಕುಮಾರ್​ಗೆ ಪೊರಕೆಯಲ್ಲಿ ಹೊಡೆದ ಕತ್ರಿನಾ ಕೈಫ್:​ ವಿಡಿಯೋ ಇಲ್ಲಿದೆ..!

ಕೊರೊನಾ ವೈರಸ್​ನಿಂದಾಗಿ ಚೀನಾದಲ್ಲಿ 400 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಚೀನಾದಲ್ಲಿರುವ ಭಾರತೀಯರನ್ನು ಈಗಾಗಲೇ ಹಿಂದಕ್ಕೆ ಕರೆಸಿಕೊಳ್ಳಲಾಗಿದ್ದು, ಅವರನ್ನು ನಿಗಾ ಘಟಕದಲ್ಲಿ ಇಡಲಾಗಿದೆ.

Sudha Murthy-Narayana Murthy Biopic: ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಸೆಟ್ಟೇರಲಿದೆ ನಾರಾಯಣ ಮೂರ್ತಿ-ಸುಧಾ ಮೂರ್ತಿ ಜೀವನಾಧಾರಿತ ಸಿನಿಮಾ ..!

First published:February 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ