HOME » NEWS » Coronavirus-latest-news » RAJYA SABHA SESSION POSTPONED DUE TO CORONAVIRUS RH

ಕೊರೋನಾ ಭೀತಿ; ನಾಳೆಯಿಂದ ಅನಿರ್ದಿಷ್ಟಾವಧಿವರೆಗೆ ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ

ಮಾರ್ಚ್ 2ರಿಂದ ಆರಂಭವಾಗಿದ್ದ ಸಂಸತ್​ ಅಧಿವೇಶನ ಏಪ್ರಿಲ್ 3ರವರೆಗೆ ನಡೆಯಬೇಕಿತ್ತು. ಇದೀಗ ಕೊರೋನಾ ವೈರಸ್ ಭೀತಿಯಿಂದ ಉಭಯ ಸದನವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ ಮಾಡಲಾಗಿದೆ.

news18-kannada
Updated:March 23, 2020, 3:37 PM IST
ಕೊರೋನಾ ಭೀತಿ; ನಾಳೆಯಿಂದ ಅನಿರ್ದಿಷ್ಟಾವಧಿವರೆಗೆ ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ
ಸಂಸತ್ ಭವನ.
  • Share this:
ನವದೆಹಲಿ: ದಿನದಿಂದ ದಿನಕ್ಕೆ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇನ್ನುದೇಶದ ಹಲವು ನಗರಗಳನ್ನು ಲಾಕ್​ಡೌನ್​ ಮಾಡಲಾಗಿದೆ. ಅದರಂತೆ ರಾಜ್ಯಸಭೆ ಹಾಗೂ ಲೋಕಸಭೆಯ ಕಲಾಪಗಳನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ ಮಾಡಲಾಗಿದೆ.

ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಇಂದಿನ ರಾಜ್ಯಸಭೆ ಕಲಾಪಗಳನ್ನು ನಡೆಸಿ, ನಾಳೆಯಿಂದ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು.

ಹಾಗೆಯೇ ಲೋಕಸಭೆ ಕಲಾಪವನ್ನು ಮುಂದೂಡಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಸೋಂಕುಪೀಡಿತ ಗಾಯಕಿ ಕನಿಕಾ ಕಪೂರ್ ಜೊತೆಗೆ ಸಂಸದ ದುಷ್ಯಂತ್ ಸಿಂಗ್ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ಬಳಿಕ ಲೋಕಸಭಾ ಕಲಾಪದಲ್ಲೂ ದುಶ್ಯಂತ್ ಸಿಂಗ್ ಭಾಗಿಯಾಗಿದ್ದರು. ಇದರಿಂದ ಸಂಸದರು ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಿಕೆ ಮಾಡಲಾಗಿದೆ.

ಮಾರ್ಚ್ 2ರಿಂದ ಆರಂಭವಾಗಿದ್ದ ಸಂಸತ್​ ಅಧಿವೇಶನ ಏಪ್ರಿಲ್ 3ರವರೆಗೆ ನಡೆಯಬೇಕಿತ್ತು. ಇದೀಗ ಕೊರೋನಾ ವೈರಸ್ ಭೀತಿಯಿಂದ ಉಭಯ ಸದನವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ ಮಾಡಲಾಗಿದೆ.

ಇದನ್ನು ಓದಿ: ನಾಳೆಯಿಂದ ಇಡೀ ಕರ್ನಾಟಕ ಲಾಕ್​ಡೌನ್?; ಇಂದು ಸಂಜೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

 
First published: March 23, 2020, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories