Rajya Sabha Elections: ರಾಜ್ಯಸಭಾ ಚುನಾವಣೆ: ಪಿಪಿಇ ಕಿಟ್‌ ಧರಿಸಿ ಮತ ಚಲಾಯಿಸಿದ ಸೋಂಕು ಪೀಡಿತ ಕಾಂಗ್ರೆಸ್‌ ಶಾಸಕ

ವೈರಸ್ ಉಸಿರಾಟದ ಹನಿಗಳಿಂದ ಹರಡುತ್ತದೆ ಎಂದು ಭಾವಿಸಿರುವ ಹಲವು ಶಾಸಕರು ಚೌಧರಿಯವರಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ತನ್ನ ಮತ ಚಲಾಯಿಸಿ ನಂತರ ಶಾಸಕ ಚೌಧರಿ ಅಲ್ಲಿಂದ ಮತ್ತೆ ಕ್ವಾರಂಟೈನ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಪಿಪಿಇ ಕಿಟ್‌ ಧರಿಸಿ ಮತ ಚಲಾಯಿಸಲು ತೆರಳುತ್ತಿರುವ ಮದ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಕುನಾಲ್‌ ಚೌಧರಿ.

ಪಿಪಿಇ ಕಿಟ್‌ ಧರಿಸಿ ಮತ ಚಲಾಯಿಸಲು ತೆರಳುತ್ತಿರುವ ಮದ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಕುನಾಲ್‌ ಚೌಧರಿ.

  • Share this:
ಭೂಪಾಲ್‌ (ಜೂನ್‌ 19); ಗುಜರಾತ್‌ ರಾಜಸ್ತಾನ ಮದ್ಯಪ್ರದೇಶ ಸೇರಿದಂತೆ ದೇಶದ ಏಳು ರಾಜ್ಯಗಳ 18 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಕೊರೋನಾ ಭೀತಿಯ ನಡುವೆಯೂ ನಡೆಯುತ್ತಿರುವ ಈ ಚುನಾವಣೆ ರಾಷ್ಟ್ರಾದ್ಯಂತ ಸಾಕಷ್ಟು ಗಮನ ಸೆಳೆಯುತ್ತಿದೆ. ಆದರೆ, ಇದನ್ನೂ ಮೀರಿ ಇಂದು ಗಮನ ಸೆಳೆದವರು ಮಾತ್ರ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಕುನಾಲ್ ಚೌಧರಿ. ಕೊರೋನಾ ಸೋಂಕು ತಗುಲಿದ್ದರೂ ಸಹ ಪಿಪಿಇ ಕಿಟ್‌ ಧರಿಸಿ ವಿಧಾನಸಭೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಶಾಸಕ ಚೌಧರಿ ಇಂದು ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ನಡೆದ ಕೊರೊನಾ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಕುನಾಲ್‌ ಚೌಧರಿ ಅವರಿಗೆ ಸಾಂಕ್ರಾಮಿಕ COVID-19 ತಗುಲಿದ್ದು ದೃಢಪಟ್ಟಿತ್ತು. ಜೂನ್ 6 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜೂನ್‌ 10ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೂನ್ 12 ರಂದು ಅವರಿಗೆ ಕೊರೋನಾ ತಗುಲಿರುವುದು ಖಚಿತವಾಗಿತ್ತು.

ಹೀಗಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈ ಕೊರೋನಾ ಭೀತಿ ಅವರ ರಾಜ್ಯಸಭಾ ಮತ ಚಲಾವಣೆಗೆ ಅಡ್ಡಿಯಾಗಿಲ್ಲ. ರಾಜ್ಯಸಭಾ ಚುನಾವಣೆಗೆ ಕನಿಷ್ಠ 205 ಶಾಸಕರು ಮತ ಚಲಾಯಿಸಿದ ನಂತರ ಅವರ ಮತದಾನದ ಸರದಿ ಬಂದಿತ್ತು. ಮುಡಿಯಿಂದ ಅಡಿವರೆಗೂ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ ಸೂಟ್) ತೊಟ್ಟಿದ್ದ ಅವರು ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಮತದಾನದ ಕೋಣೆಗೆ ಕಾಲಿಟ್ಟರು.ವೈರಸ್ ಉಸಿರಾಟದ ಹನಿಗಳಿಂದ ಹರಡುತ್ತದೆ ಎಂದು ಭಾವಿಸಿರುವ ಹಲವು ಶಾಸಕರು ಚೌಧರಿಯವರಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ತನ್ನ ಮತ ಚಲಾಯಿಸಿ ನಂತರ ಶಾಸಕ ಚೌಧರಿ ಅಲ್ಲಿಂದ ಮತ್ತೆ ಕ್ವಾರಂಟೈನ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸುದ್ದಿ ಸಂಸ್ಥೆಗಳ ಜೊತೆಗೆ ಸ್ವತಃ ಮಾತನಾಡಿರುವ ಶಾಸಕ ಕುನಾಲ್ ಚೌಧರಿ, "ಪೂರ್ಣ ಮುನ್ನೆಚ್ಚರಿಕೆಯೊಂದಿಗೆ ಪಿಪಿಇ ಕಿಟ್ ಧರಿಸಿ ನಾನು ಮಧ್ಯಾಹ್ನ 12.45ರ ಸುಮಾರಿಗೆ ಆಂಬ್ಯುಲೆನ್ಸ್‌ನಲ್ಲಿ ವಿಧಾನಸಭೆಯನ್ನು ತಲುಪಿದೆ. ಅಧಿಕಾರಿಗಳು ಸಹ ಪಿಪಿಇ ಕಿಟ್ ಧರಿಸಿದ್ದರು. ಅವರು ಸ್ವಲ್ಪ ಭಯಭೀತರಾಗಿದ್ದಾರೆಂದು ನಾನು ಭಾವಿಸಿದ್ದೆ. ಅದು ಸಹಜ. ಆದರೆ, ನಾನು ನನ್ನ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿ ಮರಳಿದೆ" ಎಂದು ತಿಳಿಸಿದ್ದಾರೆ.

ಆದರೆ, ಇದನ್ನು ವಿರೋಧಿಸಿರುವ ಬಿಜೆಪಿ ಮುಖಂಡ ಹಿತೇಶ್ ಬಾಜ್ಪೈ, "ಕೊರೋನಾ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿ ಕ್ವಾರಂಟೈನ್‌ನಿಂದ ಹೊರ ಬಂದು ಮತ ಚಲಾಯಿಸಲು ಚುನಾವಣಾ ಆಯೋಗ ಹೇಗೆ ಅವಕಾಶ ನೀಡಿತು? ಮಾರಣಾಂತಿಕ ಸೋಂಕಿಗೆ ತುತ್ತಾಗಿರುವ ಶಾಸಕರಿಗೆ ವಿಧಾನಸಭೆಯ ಆವರಣಕ್ಕೆ ಪ್ರವೇಶಿಸಲು ಚುನಾವಣಾ ಆಯೋಗವು ಅನುಮತಿ ನೀಡುವುದು ಸಾಂಕ್ರಾಮಿಕ ನಿಯಂತ್ರಣ ನಿಯಮಗಳ ಉಲ್ಲಂಘನೆಯಲ್ಲವೇ?" ಎಂದು ಟ್ವೀಟ್‌ ಮಾಡುವ ಮೂಲಕ ಕುಟುಕಿದ್ದಾರೆ.

ಇದಕ್ಕೆ ಪ್ರತ್ಯುತ್ತರಿಸಿರುವ ಕಾಂಗ್ರೆಸ್ ಶಾಸಕ ಚೌಧರಿ"ಪಂಚಾಯತ್ ಚುನಾವಣೆಯಲ್ಲಿ ಸಹ ಗೆಲ್ಲಲು ಸಾಧ್ಯವಾಗದ ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಅವರು ಸರ್ಕಾರವನ್ನು ನಡೆಸುತ್ತಿರುವ ತಮ್ಮ ಪಕ್ಷದ ಮುಖಂಡರಿಗೆ ಈ ಪ್ರಶ್ನೆ ಕೇಳಬೇಕು" ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೋನಾ; ಪರೀಕ್ಷೆ ಬರೆದ ಎಲ್ಲರೂ ಕ್ವಾರಂಟೈನ್‌?

ರಾಜ್ಯಸಭಾ ಚುನಾವಣೆ ಪೈಕಿ ಕರ್ನಾಟಕ ಹಾಗೂ ಅರುಣಾಚಲ ಪ್ರದೇಶದಲ್ಲಿ ಈಗಾಗಲೇ ಅವಿರೋಧ ಆಯ್ಕೆ ನಡೆದಿದ್ದು, ಗುಜರಾತ್-ಆಂಧ್ರ ಪ್ರದೇಶದಲ್ಲಿ ತಲಾ ನಾಲ್ಕು ಸ್ಥಾನಗಳು, ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ತಲಾ ಮೂರು ಸ್ಥಾನಗಳು, ಜಾರ್ಖಂಡ್​ನಲ್ಲಿ ಎರಡು ಹಾಗೂ ಮಣಿಪುರ, ಮಿಜೋರಾಂನಲ್ಲಿ ತಲಾ ಒಂದೊಂದು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
First published: