HOME » NEWS » Coronavirus-latest-news » RAJYA SABHA MEMBER APPEALS TO PM MODI PLEASE TAKEN STUDENTS TO INDIA WHO STAYED IN RUSSIA LG

ರಷ್ಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಪಸ್​ ಕರೆತನ್ನಿ; ಪ್ರಧಾನಿ ಮೋದಿಗೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಮನವಿ

ಕೊರೋನಾ ಮತ್ತು ಲಾಕ್​ಡೌನ್​ ಕಾರಣಗಳಿಂದಾಗಿ ಅವರಿಗೆ ಈಗ ಅಲ್ಲಿ ಇರಲು ಬಹಳ ಕಷ್ಟ ಆಗುತ್ತಿದೆ. ನೊಂದ ವಿದ್ಯಾರ್ಥಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ. ಆದುದರಿಂದ ಕೂಡಲೇ ಕೇಂದ್ರ ಸರ್ಕಾರ ಅವರನ್ನು ಸ್ವದೇಶಕ್ಕೆ ಕರೆತರುವ ಏರ್ಪಾಟು ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

news18-kannada
Updated:July 1, 2020, 8:16 AM IST
ರಷ್ಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಪಸ್​ ಕರೆತನ್ನಿ; ಪ್ರಧಾನಿ ಮೋದಿಗೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಮನವಿ
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್
  • Share this:
ನವದೆಹಲಿ(ಜು.01): ಲಾಕ್​ಡೌನ್​ ಘೋಷಣೆ ಮಾಡಿ, ಅಂತರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಳಿಸಿರುವುದರಿಂದ ರಷ್ಯಾದಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ವಾಪಸ್ ಕರೆತರುವ ವ್ಯವಸ್ಥೆ ಮಾಡಬೇಕೆಂದು ರಾಜ್ಯದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ರಷ್ಯಾದಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳ ಸುಮಾರು 200 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಕೊರೋನಾ ಮತ್ತು ಲಾಕ್​ಡೌನ್​ ಕಾರಣಗಳಿಂದಾಗಿ ಅವರಿಗೆ ಈಗ ಅಲ್ಲಿ ಇರಲು ಬಹಳ ಕಷ್ಟ ಆಗುತ್ತಿದೆ. ನೊಂದ ವಿದ್ಯಾರ್ಥಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ. ಆದುದರಿಂದ ಕೂಡಲೇ ಕೇಂದ್ರ ಸರ್ಕಾರ ಅವರನ್ನು ಸ್ವದೇಶಕ್ಕೆ ಕರೆತರುವ ಏರ್ಪಾಟು ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್ ಯೋಜನೆಯಡಿ ವಿಮಾನಗಳನ್ನು ಕಳುಹಿಸಲಾಗುತ್ತದೆ. ಆದರೆ ಜೂನ್ 30ರವರೆಗೂ ಎಲ್ಲಾ ವಿಮಾನಗಳು ತುಂಬಿರುತ್ತಿದ್ದ ಕಾರಣಕ್ಕೆ ವಿದ್ಯಾರ್ಥಿಗಳು ಇನ್ನೂ ರಷ್ಯಾದಲ್ಲೇ ಸಿಲುಕಿದ್ದಾರೆ. ಮತ್ತೆ ವಂದೇ ಭಾರತ್ ಮಿಷನ್ ಆರಂಭಿಸಿ ವಿದ್ಯಾರ್ಥಿಗಳು ಭಾರತಕ್ಕೆ ಬರಲು ಅವಕಾಶ ಕಲ್ಪಿಸಿಕೊಡಬೇಕು.

ಮಂಡ್ಯದ ಮೈಷುಗರ್ ಆರಂಭಕ್ಕಾಗಿ ಹಗ್ಗ ಜಗ್ಗಾಟ; ಸರ್ಕಾರವೇ ನಡೆಸುವಂತೆ ಪಟ್ಟು ಹಿಡಿದ ರೈತರು
Youtube Video

ವಿದ್ಯಾರ್ಥಿಗಳಿಗೆ ನೆರವಾಗಲು ಅಲ್ಲಿನ‌ ರಾಯಭಾರ ಕಚೇರಿಗೆ ಸೂಚಿಸಬೇಕು ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ಪತ್ರದಲ್ಲಿ‌ ಜಿ.ಸಿ. ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ.

 
First published: July 1, 2020, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories