ಕೊರೋನಾ ವಿರುದ್ಧ ಹೋರಾಟದಲ್ಲಿ ಮಡಿದವರಿಗೆ 50 ಲಕ್ಷ ಪರಿಹಾರ ಘೋಷಿಸಿದ ರಾಜಸ್ಥಾನ ಸರ್ಕಾರ

ದೆಹಲಿ ಸರ್ಕಾರವು ಅತಿ ಹೆಚ್ಚು ಪರಿಹಾರ ಘೋಷಿಸಿದೆ. ಕೊರೋನಾ ವಿರುದ್ಧ ಹೋರಾಡುವಾಗ ಮಡಿದರೆ ಅವರ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ ನೀಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಘೋಷಿಸಿದ್ದಾರೆ.

news18-kannada
Updated:April 22, 2020, 4:45 PM IST
ಕೊರೋನಾ ವಿರುದ್ಧ ಹೋರಾಟದಲ್ಲಿ ಮಡಿದವರಿಗೆ 50 ಲಕ್ಷ ಪರಿಹಾರ ಘೋಷಿಸಿದ ರಾಜಸ್ಥಾನ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಏ.22): ಕೊರೋನಾ ವಿರುದ್ಧದ ಹೋರಾಟದಲ್ಲಿ ಮಡಿದವರಿಗೆ 50 ಲಕ್ಷ ರೂ.  ಪರಿಹಾರ ನೀಡುವುದಾಗಿ ಮೊದಲ ಬಾರಿಗೆ ರಾಜಸ್ಥಾನ ಸರ್ಕಾರ ಘೋಷಣೆ ಮಾಡಿದೆ.  ಅಷ್ಟೇ ಅಲ್ಲದೇ ಕೊರೋನಾ ವಿರುದ್ಧ ಹೋರಾಡುವಾಗ ಸಾವನ್ನಪ್ಪಿದವರಿಗೆ ಕೇಂದ್ರ ಸರ್ಕಾರದಿಂದ 50 ಲಕ್ಷ ರೂ. ವಿಮೆ ಘೋಷಣೆ ಮಾಡಲಾಗಿದೆ. 1.70 ಲಕ್ಷ ಕೋಟಿ ಪ್ಯಾಕೇಜ್​ನಡಿಯಲ್ಲಿ 50 ಲಕ್ಷ ರೂ.ವಿಮೆ ಘೋಷಿಸಲಾಗಿದೆ. 

ದೆಹಲಿ ಸರ್ಕಾರವು ಅತಿ ಹೆಚ್ಚು ಪರಿಹಾರ ಘೋಷಿಸಿದೆ. ಕೊರೋನಾ ವಿರುದ್ಧ ಹೋರಾಡುವಾಗ ಮಡಿದರೆ ಅವರ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ ನೀಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಘೋಷಿಸಿದ್ದಾರೆ.

ಇನ್ನು, ದೆಹಲಿ ಮತ್ತು ರಾಜಸ್ಥಾನ ಮಾತ್ರವಲ್ಲದೇ, ಮಹಾರಾಷ್ಟ್ರ, ಒರಿಸ್ಸಾ, ಮಧ್ಯಪ್ರದೇಶ, ಛತ್ತೀಸ್​ಗಡ, ಉತ್ತರ ಪ್ರದೇಶ ಸರ್ಕಾರಗಳು ಸಹ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿವೆ.  ತಮಿಳುನಾಡು ಸರ್ಕಾರ ಇಂದು 50 ಲಕ್ಷ ರೂ. ಪರಿಹಾರ ಘೋಷಿಸಿದೆ.

ಕೊರೋನಾ ವಾರಿಯರ್ಸ್​​ ಮೇಲೆ ಹಲ್ಲೆ ಮಾಡಿದರೆ 7 ವರ್ಷ ಜೈಲು ಶಿಕ್ಷೆ; ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಒಪ್ಪಿಗೆ

ಗುಜರಾತ್ ಸರ್ಕಾರ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ 10 ಲಕ್ಷ ರೂ. ವಿಮೆ ಘೋಷಣೆ ಮಾಡಲಾಗಿದೆ. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಪತ್ರಕರ್ತರಿಗೂ 10 ಲಕ್ಷ ರೂ. ವಿಮೆ ಘೋಷಿಸಲಾಗಿದೆ.

ಇನ್ನು, ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ್, ಹರಿಯಾಣ, ಜಾರ್ಖಂಡ್, ಜಮ್ಮು ಕಾಶ್ಮೀರ, ಪಂಜಾಬ್, ತೆಲಂಗಾಣದಲ್ಲಿ ಈವರೆಗೆ ಪರಿಹಾರ ಘೋಷಣೆ ಮಾಡಿಲ್ಲ.
First published: April 22, 2020, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading