ಬೆಂಗಳೂರಿಗೆ ಬಂದ ರಾಜಧಾನಿ ಎಕ್ಸ್​ಪ್ರೆಸ್; ಇಂದು ಮುಂಬೈನಿಂದಲೂ ಬರಲಿದೆ ಉದ್ಯಾನ್ ರೈಲು

ಕೊರೋನಾ ಹಾಟ್​ಸ್ಪಾಟ್ ಆಗಿರುವ ಮುಂಬೈನಿಂದ ಬಂದವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ.  ಏಳು ದಿನಗಳ ಕಾಲ ಇವರು ಕ್ವಾರಂಟೈನ್ ನಲ್ಲಿ ಇರಬೇಕು, ಇನ್ನುಳಿದ ಏಳು ದಿನ ಹೋಮ್ ಕ್ವಾರಂಟೈನ್​ನಲ್ಲಿ ಇರಬೇಕು. ಸೋಂಕಿನ ಗುಣಲಕ್ಷಣ ಕಂಡು ಬಂದಲ್ಲಿ ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. 

news18-kannada
Updated:June 2, 2020, 8:11 AM IST
ಬೆಂಗಳೂರಿಗೆ ಬಂದ ರಾಜಧಾನಿ ಎಕ್ಸ್​ಪ್ರೆಸ್; ಇಂದು ಮುಂಬೈನಿಂದಲೂ ಬರಲಿದೆ ಉದ್ಯಾನ್ ರೈಲು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ದೆಹಲಿಯಿಂದ ಪ್ರಯಾಣಿಕರನ್ನು ಹೊತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲು ಬೆಂಗಳೂರು ರೈಲು ನಿಲ್ದಾಣಕ್ಕೆ ಇಂದು ಬೆಳಗ್ಗೆ ಆಗಮಿಸಿದೆ.

ಫ್ಲಾಟ್ ಫಾರಂ 8ಕ್ಕೆ ರಾಜಧಾನಿ ಎಕ್ಸ್ ಪ್ರೆಸ್ ಬಂದು ತಲುಪಿದ್ದು, ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯವನ್ನು ಆರೋಗ್ಯ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ.  ದೆಹಲಿಯಿಂದ ಬಂದವರಿಗೆ ಯಾರಿಗೂ ಸಾಂಸ್ಥಿಕ ಕ್ವಾರೆಂಟೈನ್ ಇಲ್ಲ. ಬದಲಿಗೆ ಎಲ್ಲರಿಗೂ ಸೀಲ್ ಹಾಕಿ 14 ದಿನ ಹೋಮ್ ಕ್ವಾರೆಂಟೈನ್​ಗೆ ಸೂಚನೆ ನೀಡಲಾಗಿದೆ.

ಸದ್ಯ ಎಂಟಕ್ಕೂ ಹೆಚ್ಚು ಬಿಎಂಟಿಸಿ ಬಸ್​ಗಳ ನಿಯೋಜನೆ ಮಾಡಲಾಗಿದ್ದು, ಆರೋಗ್ಯ ಸಿಬ್ಬಂದಿಯಿಂದ ತಪಾಸಣೆ ಕಾರ್ಯ ಆರಂಭಿಸಿದ್ದಾರೆ. ಯಾವುದೇ ಸಮಸ್ಯೆಯಾಗದ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಂದ ಬಿಗಿ ಭಧ್ರತೆ ಒದಗಿಸಲಾಗಿದೆ.

ಬೆಂಗಳೂರಿಗೆ ಬರಲಿದೆ ಉದ್ಯಾನ್ ಎಕ್ಸ್ ಪ್ರೆಸ್

ಮುಂಬೈ ನಿಂದ ಹೊರಟಿರುವ ಉದ್ಯಾನ್ ರೈಲು ಇಂದು ಬೆಳಗ್ಗೆ 8.50ಕ್ಕೆ ಬೆಂಗಳೂರಿಗೆ ಬರಲಿದೆ. ಕೊರೋನಾ ಹಾಟ್​ಸ್ಪಾಟ್ ಆಗಿರುವ ಮುಂಬೈನಿಂದ ಬಂದವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ.  ಏಳು ದಿನಗಳ ಕಾಲ ಇವರು ಕ್ವಾರಂಟೈನ್ ನಲ್ಲಿ ಇರಬೇಕು, ಇನ್ನುಳಿದ ಏಳು ದಿನ ಹೋಮ್ ಕ್ವಾರಂಟೈನ್​ನಲ್ಲಿ ಇರಬೇಕು. ಸೋಂಕಿನ ಗುಣಲಕ್ಷಣ ಕಂಡು ಬಂದಲ್ಲಿ ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು.

ಇದನ್ನು ಓದಿ: ಕೋವಿಡ್​​-19 ಲಾಕ್​ಡೌನ್​​ನಿಂದ ರಾಜ್ಯಕ್ಕಾದ ನಷ್ಟವೆಷ್ಟು? - ಇಂದು ಅಧಿಕಾರಿಗಳ ಜತೆ ಸಿಎಂ ವಿಡಿಯೋ ಕಾನ್ಫೆರೆನ್ಸ್​

ಕೊರೋನಾ ಹಬ್ ಮುಂಬೈನಿಂದ ಬರುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರ ಮೇಲೆ ನಿಗಾ ಇಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಉದ್ಯಾನ್ ಎಕ್ಸ್ ಪ್ರೆಸ್ ರೈಲು ನಿಲ್ದಾಣ ತಲುಪಿದ ಕೂಡಲೇ ಎಲ್ಲ ಡೋರ್​ಗಳನ್ನು ಲಾಕ್ ಮಾಡಲಾಗುತ್ತದೆ. ಬಳಿಕ ಒಂದೊಂದೇ ಬೋಗಿಯಿಂದ ಪ್ರಯಾಣಿಕರಿಗೆ ಇಳಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಒಂದು ಬೋಗಿಯಲ್ಲಿನ ಪ್ರಯಾಣಿಕರ ಲಿಸ್ಟ್ ಔಟ್ ಮಾಡಲಾಗುತ್ತದೆ. ಪ್ರಯಾಣಿಕರ ಲಗೇಜ್​ಗೆ ಕೆಮಿಕಲ್ ಸ್ಪ್ರೇ ಮಾಡಲಾಗುತ್ತದೆ.  ಪ್ರತಿಯೊಬ್ಬ ಪ್ರಯಾಣಿಕರಿಗೂ ಬಾಡಿ ಸ್ಯಾನಿಟೈಸ್ ಮಾಡಲಾಗುತ್ತದೆ. ಆ ಬಳಿಕ ಹೆಸರು, ವಿಳಾಸ, ಮೊಬೈಲ್ ನಂಬರ್ ಪಡೆಯಲಾಗುತ್ತದೆ. ನಂತರ ಅವರನೆಲ್ಲ ಬಿಎಂಟಿಸಿ ಬಸ್ ನಲ್ಲಿ ಕ್ವಾರೆಂಟೈನ್​ಗೆ ಹೋಟೆಲ್ ಗಳಿಗೆ ರವಾನಿಸಲಾಗುತ್ತದೆ. ಕ್ವಾರೆಂಟೈನ್ ಗೆ ಹೋಟೆಲ್ ಆಯ್ಕೆ ಪ್ರಯಾಣಿಕರ ಇಚ್ಛೆಯಾಗಿರಲಿದೆ. ಪ್ರಯಾಣಿಕರು ಯಾವ ಹೋಟೆಲ್​ ಕೇಳುತ್ತಾರೆ ಅಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗುತ್ತದೆ. 
First published: June 2, 2020, 8:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading