Raja Madan Gopal Nayak: ಕೋವಿಡ್​​-19 ಸೋಂಕಿನಿಂದ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಸಾವು  

ಇದೇ ಜುಲೈ 23ರಂದು ಕಲಬುರಗಿಯ ಇಎಸ್​​ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್​​ ಇರುವದು ಪತ್ತೆಯಾಗಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡಿದರರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

news18-kannada
Updated:July 27, 2020, 3:47 PM IST
Raja Madan Gopal Nayak: ಕೋವಿಡ್​​-19 ಸೋಂಕಿನಿಂದ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಸಾವು  
ರಾಜಾ ಮದನ್​ ಗೋಪಾಲ ನಾಯಕ್​​
  • Share this:
ಯಾದಗಿರಿ(ಜು.27): ಕೊರೊನಾ ಮಹಾಮಾರಿಗೆ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಮೃತಪಟ್ಟಿದ್ದಾರೆ. ಹೀಗೆ ಯಾದಗಿರಿ ಜಿಲ್ಲೆಯಲ್ಲಿ ಕೊರೋನಾ ಸಾವಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸುರಪುರ ಪಟ್ಟಣದ ನಿವಾಸಿ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ(70) ಇಂದು ಬೆಳಿಗ್ಗೆ ಕಲಬುರಗಿ ಜಿಲ್ಲೆಯ ಇಎಸ್​​ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ನ್ಯುಮೋನಿಯಾ ಮತ್ತು ಹೃದಯ ಸಂಬಂಧಿ ಕಾಯಿಲೆ, ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿದ್ದದ್ದರು.

ಇದೇ ಜುಲೈ 23ರಂದು ಕಲಬುರಗಿಯ ಇಎಸ್​​ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್​​ ಇರುವದು ಪತ್ತೆಯಾಗಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡಿದರರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇಎಸ್​​ಐ ಆಸ್ಪತ್ರೆಯಿಂದ ಪಾರ್ಥಿವ ಶರೀರ ತರಲಾಗುತ್ತಿದೆ. ಸುರಪುರನ ಗರುಡಾದ್ರಿ ಕಲಾ ಮಂದಿರಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಬಂದು ಆ್ಯಂಬುಲೆನ್ಸ್ ಮೂಲಕವೇ ದೂರದಿಂದ ಸಾರ್ವಜನಿಕ ದರ್ಶನಕ್ಕೆ ಅನುಕೂಲ ಮಾಡಲಾಗಿದೆ. ಕೆಲ ಹೊತ್ತು ಮಾತ್ರ ದರ್ಶನಕ್ಕೆ ಅನುಕೂಲ ಮಾಡಲಾಗಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸುರಪುರ ಆರೋಗ್ಯಧಿಕಾರಿ ಡಾ.ಆರ್ ವಿನಾಯಕ ‌ಮಾತನಾಡಿ, ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಅನಾರೋಗ್ಯದಿಂದ ಬಳಲುತ್ತಿದ್ದರು. ಕಲಬುರಗಿಯ ಇಎಸ್​​ಐ ಆಸ್ಪತ್ರೆಗೆ ದಾಖಲಾಗಿದ್ದರು. ಟೆಸ್ಟ್ ಮಾಡಿಸಿದಾಗ ಕೋವಿಡ್ ಎಂದು ದೃಢವಾಗಿದೆ. ನ್ಯೂಮೋನಿಯಾ, ಹೃದಯ ಸಂಬಂಧಿ ಕಾಯಿಲೆಯಿಂದ ಕೂಡ ಬಳಲುತ್ತಿದ್ದರು. ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಸರ್ಕಾರದ ನಿಯಮದಂತೆ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದರು.

ಕಲಬುರ್ಗಿಯಿಂದ ಸುರಪುರಗೆ ಆ್ಯಂಬುಲೆನ್ಸ್​ ಮೂಲಕ ಪಾರ್ಥಿವ ಶರೀರ ತರಲಾಗುತ್ತಿದೆ. ಶೆಳ್ಳಗಿ ಗ್ರಾಮದ ಸ್ವಂತ ಹೊಲದಲ್ಲಿ ಆರೋಗ್ಯ ಇಲಾಖೆ ನಿಯಮದಂತೆ ಅಂತ್ಯಕ್ರಿಯೆ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಕೋವಿಡ್​ನಿಂದ ಮೃತಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆಯು ಅಧಿಕೃತವಾಗಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವದು ಬಾಕಿ ಇದೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ ವೇಳೆ ಡಿ.ಕೆ. ಶಿವಕುಮಾರ್, ಖರ್ಗೆ, ಸಿದ್ದರಾಮಯ್ಯರನ್ನು ವಶಕ್ಕೆ ಪಡೆದ ಪೊಲೀಸರು

ರಾಜಕೀಯ ಜೀವನ: ರಾಜಾ ಮದನ​​ ಗೋಪಾಲ ನಾಯಕ 1992-94ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದರು. ಸುರಪುರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಬಿಜೆಪಿ ಪಕ್ಷದಿಂದ ಸುರಪುರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಬೆಂಬಲವಾಗಿ ನಿಂತಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
Published by: Ganesh Nachikethu
First published: July 27, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading