ಕೊರೋನಾ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರೈಲ್ವೆ ಪ್ಲಾಟ್​ಫಾರ್ಮ್ ಟಿಕೆಟ್ ದರ ಭಾರೀ ಏರಿಕೆ

ಗುಂಪುಗಳಿರುವೆಡೆ ಕೊರೋನಾ ವೈರಸ್ ಸೋಂಕು ಹರಡುವುದು ಸುಲಭವಾದ್ದರಿಂದ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿರುವ ಸಾಧ್ಯತೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ(ಮಾ. 17): ಕೊರೋನಾ ವೈರಸ್ ಸೋಂಕು ಎಲ್ಲೆಡೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಜನರು ಹೆಚ್ಚು ಗುಂಪುಗೂಡದಂತೆ ನಿರ್ದೇಶನಗಳನ್ನ ನೀಡಿದೆ. ಹಬ್ಬ ಹರಿದಿನ, ಜಾತ್ರೆ ಮುಂತಾದವುಗಳಿಗೆ ಕಡಿವಾಣ ಹಾಕುತ್ತಿದೆ. ಈಗ ಹೆಚ್ಚು ಜನರು ಕಾಣಸಿಗುವ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ಸೃಷ್ಟಿಯಾಗದಂತೆ ರೈಲ್ವೆ ಇಲಾಖೆ ಕೆಲ ಕ್ರಮಗಳನ್ನ ಕೈಗೊಂಡಿದೆ. ಅದರಲ್ಲಿ ಪ್ಲಾಟ್​ಫಾರ್ಮ್ ಟಿಕೆಟ್ ದರ ಏರಿಕೆಯೂ ಒಂದು. ಹತ್ತು ರೂಪಾಯಿ ಇದ್ದ ಪ್ಲಾಟ್​ಫಾರ್ಮ್ ಟಿಕೆಟ್ ದರವನ್ನು 50 ರೂಪಾಯಿಗೆ ಹೆಚ್ಚಿಸಿದೆ.

  ದೇಶಾದ್ಯಂತ ಆಯ್ದ 250 ರೈಲ್ವೆ ನಿಲ್ದಾಣಗಳಲ್ಲಿ ನೂತನ ಪ್ಲಾಟ್​ಫಾರ್ಮ್ ಟಿಕೆಟ್ ದರ ಜಾರಿಗೆ ಬಂದಿದೆ. ಆಯಾ ಝೋನಲ್ ರೈಲ್ವೇಸ್ ಈ ನಿರ್ಧಾರ ಕೈಗೊಂಡಿವೆ. ಪ್ಲಾಟ್​ಫಾರ್ಮ್ ಟಿಕೆಟ್ ದರ ಏರಿಕೆ ಕಂಡ ನಿಲ್ದಾಣಗಳಲ್ಲಿ ಬೆಂಗಳೂರು, ಮೈಸೂರು ಮೊದಲಾದವೂ ಸೇರಿವೆ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರಷ್ಟೇ ಅಲ್ಲದೆ, ಅವರ ಜೊತೆ ಟ್ರೈನ್ ಹತ್ತಿಸಲು ನಿಕಟವರ್ತಿಗಳೂ ಆಗಮಿಸುವುದಿದೆ. ಇದರಿಂದ ರೈಲ್ವೆ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚೇ ಇರುತ್ತದೆ. ಗುಂಪುಗಳಿರುವೆಡೆ ಕೊರೋನಾ ವೈರಸ್ ಸೋಂಕು ಹರಡುವುದು ಸುಲಭವಾದ್ದರಿಂದ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿರುವ ಸಾಧ್ಯತೆ ಇದೆ.

  ಇದನ್ನೂ ಓದಿ: ಭಾರತದಲ್ಲಿ ಹೆಚ್ಚಿದ ಕೊರೋನಾವೈರಸ್ ಪ್ರಕರಣ: ಇಲ್ಲಿದೆ ನಗರವಾರು COVID-19 ಪಟ್ಟಿ

  ಚೀನಾದಲ್ಲಿ ಉದ್ಭವಿಸಿದ ನೂತನ ಕೊರೋನಾ ವೈರಸ್ ಇದೀಗ ವಿಶ್ವಾದ್ಯಂತ 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹರಡಿದೆ. ಭಾರತದಲ್ಲಿ 125ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಕಲಬುರ್ಗಿಯ ಒಬ್ಬರು ಸೇರಿದಂತೆ ಭಾರತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 10ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ.

  First published: