ಕೊರೋನಾ ಎಫೆಕ್ಟ್​​​: ದೇಶಾದ್ಯಂತ ಏ.14ರವರೆಗೂ ರೈಲು ಸಂಚಾರ ಸ್ತಬ್ಧ; ರೈಲ್ವೆ ಇಲಾಖೆ ಅಧಿಕೃತ ಆದೇಶ

ಭಾರತದಲ್ಲಿ ಕೊರೋನಾ ವೈರಸ್​ ತಡೆಗಟ್ಟಲು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಈಗಾಗಲೇ 11 ಜನರು ಸಾವನ್ನಪ್ಪಿದ್ದಾರೆ. ಕೊರೋನಾ ವೈರಸ್​ನ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ದೇಶಾದ್ಯಂತ 21 ದಿನಗಳ ಕಾಲ ಲಾಕ್​ಡೌನ್​​ಗೆ ಕರೆ ನೀಡಿದೆ.

ಭಾರತೀಯ ರೈಲು

ಭಾರತೀಯ ರೈಲು

 • Share this:
  ನವದೆಹಲಿ(ಮಾ.25):ಕೊರೋನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿದ್ದು, ದಿನದಿಂದ ದಿನಕ್ಕೆ ಮಾರಕ ಸೋಂಕು ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಲೇ ಇದೆ. ಕೊರೋನಾ ಸೋಂಕಿಗೆ ಯಾವುದೇ ಔಷಧ ಇಲ್ಲದ ಕಾರಣ ಜನರು ಮನೆಯಲ್ಲಿಯೇ ಇರುವ ಮೂಲಕ ಸೋಂಕು ಹರಡುವಿಕೆ ನಿಯಂತ್ರಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಅದರಂತೆ ಈಗಾಗಲೇ ಪ್ರಧಾನಿ ನರೇದ್ರ ಮೋದಿಯವರು 21 ದಿನ ಇಡೀ ದೇಶ ಲಾಕ್​ಡೌನ್ ಮಾಡಿ ಆದೇಶ ಹೊರಡಿಸಿದ್ಧಾರೆ. ಈ ಬೆನ್ನಲ್ಲೀಗ ದೇಶಾದ್ಯಂತ ಏಪ್ರಿಲ್​​​ 14ರವರೆಗೆ ರೈಲು‌ ಸಂಚಾರ ಸ್ತಬ್ದ ಮಾಡಲಾಗಿದೆ. ಮಾ.‌ 31ರವರೆಗೆ ಮಾತ್ರ ಬಂದ್ ಮಾಡಿದ್ದ ರೈಲ್ವೆ ಇಲಾಖೆ ಈಗ ಇಡೀ ದೇಶ ಲಾಕ್​​ಡೌನ್​​ ಆದ ಕಾರಣ ಈ ಆದೇಶವನ್ನು ಏ.14ರವರೆಗೂ ವಿಸ್ತರಿಸಿ ಅಧಿಕೃತವಾಗಿ ಆದೇಶ ಹೊರಡಿಸಿದೆ.

  ಭಾರತದಲ್ಲಿ ಕೊರೋನಾ ವೈರಸ್​ ತಡೆಗಟ್ಟಲು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಈಗಾಗಲೇ 11 ಜನರು ಸಾವನ್ನಪ್ಪಿದ್ದಾರೆ. ಕೊರೋನಾ ವೈರಸ್​ನ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ದೇಶಾದ್ಯಂತ 21 ದಿನಗಳ ಕಾಲ ಲಾಕ್​ಡೌನ್​​ಗೆ ಕರೆ ನೀಡಿದೆ.

  ಭಾರತದಲ್ಲಿ ಈಗಾಗಲೇ 520 ಜನರಿಗೆ ಕೊರೋನಾ ಸೋಂಕು ತಗುಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಆದರೂ, ಕೊರೋನಾ ಶಂಕಿತರಿಗೆ ಸರಿಯಾದ ಟೆಸ್ಟಿಂಗ್ ಮಾಡುವಲ್ಲಿ ವಿಳಂಬ ಧೋರಣೆ ತಳೆದರೆ ಇಡೀ ದೇಶವನ್ನೇ ಆವರಿಸುವ ಕೊರೋನಾದಿಂದ ಜನರನ್ನು ಕಾಪಾಡುವುದು ಕಷ್ಟ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

  ಇದನ್ನೂ ಓದಿ: ಕೊರೋನಾ ನಿಯಂತ್ರಣಕ್ಕೆ 2.5 ಲಕ್ಷ ಸ್ವಯಂ ಸೇವಕರಿಂದ ಡೋರ್​​ ಟು ಡೋರ್​​ ಕ್ಯಾಂಪೇನ್​​ ; ಆಂಧ್ರ ಸಿಎಂ ಜಗನ್​​

  ಅಮೆರಿಕ, ಇಟಲಿಯಂತಹ ದೇಶಗಳಲ್ಲಿ ಕೂಡ ಇದೇ ರೀತಿಯ ನಿರ್ಲಕ್ಷ್ಯ ಧೋರಣೆ ತಳೆದಿದ್ದರಿಂದಲೇ ಈಗ ಸಾವಿನ ಸಂಖ್ಯೆ ವಿಪರೀತಕ್ಕೆ ಹೋಗಿದೆ. ಕೊರೋನಾ ನಿಯಂತ್ರಣಕ್ಕೆ ಸಾಧ್ಯವೇ ಇಲ್ಲ ಎಂಬ ರಿಸ್ಥಿತಿ ಎದುರಾಗಿದೆ. ಭಾರತ ಕೂಡ ಈ ರೀತಿಯ ನಿರ್ಲಕ್ಷ್ಯ ತಳೆದರೆ ಮುಂದೆ ದೊಡ್ಡ ಬೆಲೆಯನ್ನೇ ತೆರಬೇಕಾದೀತು ಎಂಬುದು ಸಂಶೋಧಕರ ಎಚ್ಚರಿಕೆ. ಇಟಲಿ ಮತ್ತು ಅಮೆರಿಕದಲ್ಲಿ ಕೂಡ ಆರಂಭದಲ್ಲಿ ಟೆಸ್ಟಿಂಗ್ ವೇಳೆ ಇದೇ ಪ್ರಮಾಣದ ಪ್ರಕರಣಗಳು ಕಂಡುಬಂದಿದ್ದವು. ಆದರೆ, ಇದೀಗ ಅಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
  First published: