ಕೊರೋನಾ ಸೋಂಕು ತಗುಲಿದ ಮಗನನ್ನು ಬೆಂಗಳೂರು ರೈಲ್ವೆ ವಿಶ್ರಾಂತಿ ಗೃಹದಲ್ಲಿ ಬಚ್ಚಿಟ್ಟ ಮಹಿಳಾ ಅಧಿಕಾರಿ ಅಮಾನತ್ತು

ಜರ್ಮನಿಯಿಂದ ಹಿಂದಿರುಗಿದ್ದ ರೈಲ್ವೆ ಅಧಿಕಾರಿಯ ಮಗನಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಆದರೆ ಮಗನನ್ನು ರೈಲ್ವೆ ಅತಿಥಿ ಗೃಹದಲ್ಲಿ ಬಚ್ಚಿಟ್ಟು, ವಿಷಯವನ್ನು ಮುಚ್ಚಿಟ್ಟಿದ್ದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ನವದೆಹಲಿ: ಜರ್ಮನಿಯಿಂದ ಮರಳಿ ಬಂದಿದ್ದ ಮಗನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡರು, ಯಾರಿಗೂ ಮಾಹಿತಿ ನೀಡದೆ ಬೆಂಗಳೂರಿನ ರೈಲ್ವೆ ವಸತಿ ಗೃಹದಲ್ಲಿ ಬಚ್ಚಿಟ್ಟ ಕಾರಣಕ್ಕೆ ನೈರುತ್ಯ ರೈಲ್ವೆಯ ಮಹಿಳಾ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

"ಮಹಿಳಾ ಅಧಿಕಾರಿಯ ಮಗ ಜರ್ಮನಿಯಿಂದ ಹಿಂದಿರುಗಿದ್ದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಮತ್ತು ಬೆಂಗಳೂರು ರೈಲ್ವೆ ನಿಲ್ದಾಣದ ಬಳಿಯ ರೈಲ್ವೆ ವಿಶ್ರಾಂತಿ ಗೃಹದಲ್ಲಿ ಮಗ ವಾಸಿಸಲು ಅನುವು ಮಾಡಿಕೊಡುವ ಮೂಲಕ ಇತರರ ಜೀವಕ್ಕೆ ಅಪಾಯವನ್ನುಂಟು ಮಾಡಿದ್ದಾರೆ" ಎಂದು ರೈಲ್ವೆ ವಕ್ತಾರ ವಿಜಯ ಹೇಳಿದ್ದಾರೆ.

ಅಮಾನತುಗೊಂಡ ಅಧಿಕಾರಿಯ 25 ವರ್ಷದ ಮಗ ಮಾರ್ಚ್ 13 ರಂದು ಜರ್ಮನಿಯಿಂದ ಸ್ಪೇನ್ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ನಂತರ ಕೊರೋನಾ ಸೋಂಕು ಕಾಣಿಸಿಕೊಂಡ ಕಾರಣ 14 ದಿನಗಳ ಕಾಲ ಮನೆಯಲ್ಲಿಯೇ ಐಸೋಲೇಶನ್ ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು ನಂತರ ರೈಲ್ವೆ ವಕ್ತಾರು ಹೇಳಿದ್ದಾರೆ.

ತನ್ನ ಕುಟುಂಬವನ್ನು ರಕ್ಷಿಸುವ ಸಲುವಾಗಿ ಅವರು ತನ್ನ ಮಗನನ್ನು ರೈಲ್ವೆ ವಿಶ್ರಾಂತಿ ಗೃಹದಲ್ಲಿ ಮರೆಮಾಚಿದ್ದರು. ಇದರಿಂದ ಸುತ್ತಮುತ್ತಲಿನ ಜನರ ಜೀವಕ್ಕೆ ಸಹ ಅಪಾಯವನ್ನುಂಟು ಮಾಡಿದ್ದರು "ಎಂದು ನೈರುತ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: Covid-19; ಜೈಪುರದಲ್ಲಿ ಇಟಲಿ ಪ್ರಜೆ ಸಾವು, ಕೊರೋನಾ ಸೋಂಕಿಗೆ ದೇಶದಲ್ಲಿ 5ನೇ ಬಲಿ!

ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್​​ಗೆ ಇದುವರೆಗೂ 10,000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. 2 ಲಕ್ಷಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿದೆ. ಭಾರತದಲ್ಲಿ ಈಗಾಗಲೇ ನಾಲ್ಕು ಜನ ಸಾವನ್ನಪ್ಪಿದ್ದಾರೆ.

ವರದಿ: ಸಂಧ್ಯಾ ಎಂ
First published: