ಕೊರೋನಾ ಹಾಡು: ರಾಯಚೂರು ಎಸ್ಪಿಯಿಂದ ವಿನೂತನ ಪ್ರಚಾರ

ಒಳಿತು ಮಾಡು ಮನುಜ, ನೀ ಇರೋದು ಮೂರು ದಿವಸ ಎಂಬ ಜನಪ್ರಿಯ ಹಾಡಿನ ದಾಟಿಯಲ್ಲಿ ಮನೆಯಲ್ಲಿ ಇರು ಮನುಜಾ, ಕೊರೊನಾದಿಂದ ದೂರವಾಗಿ ಎಂಬ ಸಾಹಿತ್ಯ ರಚಿಸಿ ಹಾಡುತ್ತಿದ್ದಾರೆ.

news18-kannada
Updated:April 2, 2020, 1:30 PM IST
ಕೊರೋನಾ ಹಾಡು: ರಾಯಚೂರು ಎಸ್ಪಿಯಿಂದ ವಿನೂತನ ಪ್ರಚಾರ
ರಾಯಚೂರು ಎಸ್​ಪಿ
  • Share this:
ರಾಯಚೂರು: ಡಿಸೆಂಬರ್ ತಿಂಗಳಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಮಹಾಮಾರಿ ಕೊರೊನಾ ಈಗ ಇಡೀ ಜಗತ್ತನ್ನೇ ಅಲ್ಲಾಡಿಸುತ್ತಿದೆ. ಕೊರೊನಾದಿಂದ ಇಡೀ ಭಾರತದಲ್ಲಿ ಕಳೆದೊಂದು ವಾರದಿಂದ ಸಂಪೂರ್ಣ ಲಾಕ್ ಡೌನ್ ಘೋಷಿಸಿಲಾಗಿದೆ. ಆದರೂ ಜನರು ಸಾಮಾಜಿಕ ಅಂತರ ಪಾಲಿಸದೆ ಹೊರಗಡೆ ಓಡಾಡುತ್ತಿದ್ದಾರೆ. ವೈರಸ್ ಇರುವ ವ್ಯಕ್ತಿಯ ಸ್ಪರ್ಶ ಹಾಗು ಆತನ ಉಗುಳಿನಿಂದ ಸೋಂಕು ಹರಡುತ್ತದೆ. ಇದರಿಂದಾಗಿ ಮನೆಯಲ್ಲಿಯೇ ಆರಾಮವಾಗಿರಿ ಎಂದು ಸರ್ಕಾರಗಳು ಪದೇ ಪದೇ ಮನವಿ ಮಾಡುತ್ತಲೇ ಇವೆ.

ಜನರ ಔಡಾಟ ನಿಲ್ಲಿಸಲು ಪೊಲೀಸರು ಲಾಠಿ ಬೀಸಿದ್ದು ಆಯಿತು. ನಾಕಾಬಂದಿ ಮಾಡಿ ನಿಯಂತ್ರಿಸಿದ್ದು ಆಯಿತು. ಕೆಲವು ಅಧಿಕಾರಿಗಳು ಕೈ ಮುಗಿದಿದ್ದೂ ಆಯಿತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ ಬಿ ವೇದಮೂರ್ತಿ ಹಾಡು ಹಾಡುವ ಮುಖಾಂತರ ಜಾಗೃತಿ ಮೂಡಿಸಲು ಹೊರಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕೊರೋನಾ ಸಂತ್ರಸ್ತರ ನೆರವಿಗೆ ನಿಂತ ಜೈನ ಸಂಘಟನೆ; ದಿನಕ್ಕೆ 28 ಸಾವಿರ ಮಂದಿಗೆ ಉಚಿತ ಆಹಾರ ವಿತರಣೆ

ಎರಡು ದಿನಗಳ ಹಿಂದೆ ಗಲ್ಲಿ ಗಲ್ಲಿಗಳಲ್ಲಿ ಅನಾವಶ್ಯವಾಗಿ ತಿರುಗಾಡುವವರನ್ನು ಡ್ರೋನ್ ಕೆಮರಾ ಮೂಲಕ ಪತ್ತೆ ಮಾಡಿ ಅವರ ಮೇಲೆ ಕಾನೂನುರೀತ್ಯ ಕ್ರಮ ಕೈಗೊಳ್ಳಲು ಮುಂದಾಗಲಾಗಿದೆ. ಅನವಶ್ಯಕವಾಗಿ ತಿರುಗಾಡುವವರ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಸುಮಾರು 500 ಕ್ಕೂ ಅಧಿಕ ವಾಹನಗಳನ್ನು ಸೀಜ್ ಮಾಡಲಾಗಿದೆ. ಎಸ್ಪಿ ವೇದಮೂರ್ತಿ ನಿನ್ನೆ ಮೈಕ್ ಹಿಡಿದುಕೊಂಡು ವೃತ್ತ ವೃತ್ತಗಳಲ್ಲಿ ತಿರುಗುತ್ತಾ, “ಒಳಿತು ಮಾಡು ಮನುಜ, ನೀ ಇರೋದು ಮೂರು ದಿವಸ” ಎಂಬ ಜನಪ್ರಿಯ ಹಾಡಿನ ದಾಟಿಯಲ್ಲಿ “ಮನೆಯಲ್ಲಿ ಇರಿ ಮನುಜಾ, ಕೊರೊನಾದಿಂದ ದೂರವಾಗಿ” ಎಂಬ ಸಾಹಿತ್ಯ ರಚಿಸಿ ಹಾಡುತ್ತಿದ್ದಾರೆ.

ಸಾಮಾನ್ಯ ಪೊಲೀಸ್ ಅಧಿಕಾರಿಗಳು ಹಾಡು ಮತ್ತಿತರೆ ಸಾಂಸ್ಕೃತಿಕ ಮನಸುಗಳಿಂದ ದೂರ ಇರುತ್ತಾರೆ. ಕೇವಲ ದರ್ಪದಿಂದ ವರ್ತಿಸುತ್ತಾರೆ ಎನ್ನುವ ವಾಡಿಕೆಯ ಮಾತಿನ ಮಧ್ಯೆ ರಾಯಚೂರು ಎಸ್ಪಿ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಿಂದ ವಿಭಿನ್ನ ಹಾಗು ಮಾದರಿಯಾಗಿದ್ದಾರೆ.

First published: April 2, 2020, 1:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading