ಜರ್ಮನಿಯಿಂದ ಬಂದ ಮಗನ ಗೆಳತಿಗೆ ಆಶ್ರಯ ನೀಡಿದ ಎಂಜಿನಿಯರ್; ದೂರು ಕೊಟ್ಟ ಉಪ ತಹಶೀಲ್ದಾರ್

ಹಿರಿಯ ಅಧಿಕಾರಿಯೇ ಪುತ್ರ ವಾತ್ಸಲ್ಯದಿಂದ ಸರ್ಕಾರದ ನಿಯಮವನ್ನು‌ ಪಾಲಿಸದೆ ಇರುವುದು ದುರಂತವೇ ಸರಿ. ಸಮಾಧಾನಕರ ವಿಷಯವೆಂದರೆ ಜರ್ಮನ್ ನಿಂದ ವೈದ್ಯರ ಕೊರೊನಾ ವರದಿ ನೆಗಟಿವ್ ಬಂದಿದೆ, ಇದರಿಂದಾಗಿ ವೈಟಿಪಿಎಸ್, ಆರ್ ಟಿಪಿಎಸ್ ಹಾಗು ದೇವಸೂಗೂರು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

news18-kannada
Updated:April 4, 2020, 12:29 PM IST
ಜರ್ಮನಿಯಿಂದ ಬಂದ ಮಗನ ಗೆಳತಿಗೆ ಆಶ್ರಯ ನೀಡಿದ ಎಂಜಿನಿಯರ್; ದೂರು ಕೊಟ್ಟ ಉಪ ತಹಶೀಲ್ದಾರ್
ಸಾಂದರ್ಭಿಕ ಚಿತ್ರ
  • Share this:
ರಾಯಚೂರು(ಏ.04): ಮಹಾಮಾರಿ ಕೊರೊನಾ ತಡೆಗಾಗಿ ಅಧಿಕಾರಿಗಳು, ವೈದ್ಯರು, ಪೊಲೀಸರು ಹೆಣಗಾಡುತ್ತಿದ್ದಾರೆ. ಸಾಮಾಜಿಕ ಅಂತರ, ಸುರಕ್ಷತೆಗಾಗಿ ಗಡಿ ಬಂದ್ ಮಾಡಲಾಗಿದೆ. ಆದರೂ ಇಲ್ಲೊಬ್ಬ ಹಿರಿಯ ಇಂಜಿನಿಯರ್ ಹಾಗೂ ಆತನ ಪತ್ನಿ ಪುತ್ರ ವಾತ್ಸಲ್ಯದಿಂದಾಗಿ ಹೋಂ ಕ್ವಾರೆಂಟೇನ್ ಸೂಚಿಸಿದ್ದರೂ ವಿದೇಶದಿಂದ ಬಂದ ಮಗನ ಸ್ನೇಹಿತೆಗೆ ಆಶ್ರಯ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ದೇವಸೂಗೂರು ಉಪತಹಸೀಲ್ದಾರರು ಶಕ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಾಗಿದೆ. ವೈಟಿಪಿಎಸ್ ನ ಸೂಪರಿಡೆಂಟೆಂಟ್ ಇಂಜಿನಿಯರ್ ಎಸ್ ಆರ್ ಕಬಾಡೆ, ಅವರ ಪತ್ನಿ ಆರ್ ಟಿಪಿಎಸ್ ನಲ್ಲಿ ಅಕೌಂಟೆಂಟ್ ಆಗಿರುವ ಅನುಪಮಾ ಹಾಗೂ ಅವರ ಮಗ ಪ್ರೀತಮ್​ ಹಾಗೂ ಡಾ.ಚಿನ್ಮಯ ವಿರುವ ಎಫ್ಐಆರ್ ದಾಖಲಾಗಿದೆ.

ಎಸ್ ಆರ್ ಕಬಾಡೆ ಹಾಗೂ ಅನುಪಮರ ಮಗ ಪ್ರೀತಮರ ಸ್ನೇಹಿತೆ ಡಾ ಚಿನ್ಮಯಿ ಜರ್ಮನ್ ಗೆ ಹೋಗಿ ಬಂದಿದ್ದರು. ಅವರಿಗೆ ಅಲ್ಲಿಂದ ಬರುವಾಗ ಕೆಮ್ಮು ನೆಗಡಿ ಕಾಣಿಸಿಕೊಂಡಿತ್ತು, ಈ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಕಫ ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಹೋಂ ಕ್ವಾರೆಂಟೈನ್ ನಲ್ಲಿಡಲಾಗಿತ್ತು. ನಂತರ  ರಿಮ್ಸ್ ನಲ್ಲಿರುವ ಐಸೋಲೇಷನ್ ವಾರ್ಡಿಗೂ ಸಹ  ದಾಖಲಿಸಿದ್ದರು.

ಭಾರತದಲ್ಲಿ ಮುಂದುವರೆದ ಕೊರೋನಾ ದಾಳಿ; 68ಕ್ಕೇರಿದ ಸಾವಿನ ಸಂಖ್ಯೆ, ಒಟ್ಟು 2902 ಪ್ರಕರಣಗಳು ದಾಖಲು

ಈ ಮಧ್ಯೆ ಅವರನ್ನು ಮಾರ್ಚ್​​ 14 ರಿಂದ ಮಾರ್ಚ್​ 29 ರವರೆಗೆ ಹೊರಬರದಂತೆ ಸೂಚಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕಬಾಡೆ ಕುಟುಂಬವನ್ನು ಹೋಮ್ ಕ್ವಾರೆಂಟೈನ್ ನಲ್ಲಿರುವಂತೆ ಸೂಚಿಸಲಾಗಿತ್ತು. ಆದರೆ ಇದನ್ನು ಮರೆಮಾಚಿ ಕಬಾಡೆ ಹಾಗು ಅವರ ಪತ್ನಿ ವೈಟಿಪಿಎಸ್ ಹಾಗೂ ಆರ್ ಟಿಪಿಎಸ್ ನಲ್ಲಿ ಕೆಲಸ ಮಾಡಿದ್ದಾರೆ. ಗಂಭೀರವಾಗಿರುವ ಪ್ರಕರಣವನ್ನು ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪದಡಿ ಉಪತಹಸೀಲ್ದಾರ ಶಕ್ತಿನಗರ‌ ಪೊಲೀಸರಿಗೆ ದೂರು ನೀಡಿದ್ದರು. ದೂರಿನ್ವಯ ಪ್ರಕರಣ ದಾಖಲಾಗಿದೆ.

ಈ‌ ಮಧ್ಯೆ ಅವರ ಹೋಂ ಕ್ವಾರಂಟೈನ್ ಅವಧಿ ಮುಗಿದ ನಂತರ ಅವರ ಮನೆಗೆ ಕ್ವಾರಂಟೈನ್ ನೋಟಿಸ್​ ಹಚ್ಚಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಗಳು ಸಹ ಗಂಭೀರವಾಗಿ ತೆಗೆದುಕೊಂಡಿದ್ದರು. ಹಿರಿಯ ಅಧಿಕಾರಿಯೇ ಪುತ್ರ ವಾತ್ಸಲ್ಯದಿಂದ ಸರ್ಕಾರದ ನಿಯಮವನ್ನು‌ ಪಾಲಿಸದೆ ಇರುವುದು ದುರಂತವೇ ಸರಿ. ಸಮಾಧಾನಕರ ವಿಷಯವೆಂದರೆ ಜರ್ಮನ್ ನಿಂದ ವೈದ್ಯರ ಕೊರೊನಾ ವರದಿ ನೆಗಟಿವ್ ಬಂದಿದೆ, ಇದರಿಂದಾಗಿ ವೈಟಿಪಿಎಸ್, ಆರ್ ಟಿಪಿಎಸ್ ಹಾಗು ದೇವಸೂಗೂರು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
First published:April 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading