HOME » NEWS » Coronavirus-latest-news » RAICHUR CORONAVIRUS CASES INCREASING AFTER MASKI BY ELECTION KARNATAKA COVID 19 CASES TODAY SCT SBR

Raichur Coronavirus: ಮಸ್ಕಿ ಉಪ ಚುನಾವಣೆ ಬಳಿಕ ರಾಯಚೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ

Raichur: ಮಸ್ಕಿ ಉಪ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ, ಅಭ್ಯರ್ಥಿ ಪ್ರತಾಪಗೌಡ ಪಾಟೀಲ, ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಪ್ರೀತಂ ಗೌಡ, ರೇಣುಕಾಚಾರ್ಯರಿಗೆ ಕೊರೋನಾ ಸೋಂಕು ತಗುಲಿದೆ. ರಾಯಚೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

news18-kannada
Updated:April 19, 2021, 8:46 AM IST
Raichur Coronavirus: ಮಸ್ಕಿ ಉಪ ಚುನಾವಣೆ ಬಳಿಕ ರಾಯಚೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ
ಕೊರೋನಾ
  • Share this:
ರಾಯಚೂರು: ಇಲ್ಲಿಯವರೆಗೂ ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯವರು ಕೊರೊನಾ ನಿಯಮ ಪಾಲಿಸದೆ ಭರ್ಜರಿ ಪ್ರಚಾರ ನಡೆಸಿದ್ದು, ಪ್ರಚಾರ ನಡೆಸಿದ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ಮುಖಂಡರಿಗೆ ಕೊರೊನಾ ಸೋಂಕು ತಗುಲಿದೆ. ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಸೋಂಕು ಏರಿಕೆಯಾಗುತ್ತಿದ್ದರೂ ಕಠಿಣ ನಿಯಮ ಪಾಲಿಸುತ್ತಿಲ್ಲ. ಇದರಿಂದ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಕಳೆದ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ರಾಯಚೂರು ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ಇಳಿಕೆಯಾಗಿತ್ತು. ಮತ್ತೆ ಕೊರೊನಾ ಎರಡನೆಯ ಅಲೆ ಹರಡುತ್ತಿದೆ. ಇದರಿಂದಾಗಿ ಮತ್ತೆ ಕೊರೊನಾ ಅಬ್ಬರಿಸಲು ಆರಂಭವಾಗಿದೆ. ಈ ತಿಂಗಳ ಆರಂಭದಿಂದ ಕೊರೊನಾ ಸೋಂಕು ಈಗ 100-150ಕ್ಕೆ ಏರಿಕೆಯಾಗುತ್ತಿದೆ.

ಕಳೆದ ವರ್ಷ ಮೇ 16ರವರೆಗೂ ಗ್ರಿನ್ ಜಿಲ್ಲೆಯಾಗಿದ್ದ ರಾಯಚೂರು ಮೇ 16ರಂದು ಮಹಾರಾಷ್ಟ್ರ ವಲಸಿಗರಿಂದ ಆರಂಭವಾದ ಕೊರೊನಾ ಸಂಖ್ಯೆ ಮಾರ್ಚ್​ 15ಕ್ಕೆ 900 ಜನರ ಗಂಟಲದ್ರವ ಪರೀಕ್ಷೆ ಮಾಡಿದರೆ ಕೇವಲ ಒಬ್ಬರಿಗೆ ಮಾತ್ರ ಸೋಂಕು ದೃಡ ಪಟ್ಟಿತ್ತು. ಅಲ್ಲಿಯವರೆಗೂ ಒಟ್ಟು ಜಿಲ್ಲೆಯಲ್ಲಿ 14,379 ಜನರಿಗೆ ಸೋಂಕು ಕಾಣಿಸಿಕೊಂಡು, 14,158 ಜನರು ಗುಣಮುಖರಾಗಿದ್ದರು. ಅಂದು ಕೇವಲ 3 ಜನ ಆಸ್ಪತ್ರೆಯಲ್ಲಿದ್ದರು. ಒಟ್ಟು 13 ಜನರಲ್ಲಿ ಸೋಂಕು ಸಕ್ರಿಯವಾಗಿತ್ತು. ಅಲ್ಲಿಯವರೆಗೂ 158 ಜನರು ಸೋಂಕಿನಿಂದ ಅಸುನೀಗಿದ್ದರು. ಮೇ ತಿಂಗಳನಿಂದ ಆರಂಭವಾಗಿ ಆಕ್ಟೋಬರ್ ಆರಂಭದವರೆಗೂ ಶೇ. 10ರಷ್ಟು ಸೋಂಕಿನ ಪ್ರಮಾಣ ಇತ್ತು. ಅಕ್ಟೋಬರ್ ನಂತರ ಸೋಂಕಿನ ಪ್ರಮಾಣ ಶೇ 0.01ರಷ್ಟು ಇಳಿಕೆಯಾಗಿತ್ತು.

ಇದರಿಂದ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈ ವರ್ಷದ ಮಾರ್ಚ್​ ನಂತರ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆರಂಭದಲ್ಲಿ ಸಾವಿರ ಜನರ ಗಂಟಲ ದ್ರವ ಪರೀಕ್ಷೆಗೆ 20 ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಸಾವಿರ ಜನಕ್ಕೆ 100ರಷ್ಟು ಜನರಿಗೆ ಸೋಂಕು ದೃಢಪಡುತ್ತಿದೆ. ಮಾರ್ಚ್​ ಅಂತ್ಯಕ್ಕೆ 1,355 ಜನರ ವರದಿ ಪರೀಕ್ಷೆಗೆ ಕಳುಹಿಸಿದರೆ ಅದರಲ್ಲಿ 21 ಜನರಿಗೆ ಸೋಂಕು ದೃಢಪಟ್ಟಿತ್ತು. ಅಂದಿಗೆ 121 ಜನರಲ್ಲಿ ಸೋಂಕು ಸಕ್ರಿಯವಾಗಿತ್ತು. ಆಸ್ಪತ್ರೆಯಲ್ಲಿ 13 ಜನರಿದ್ದರು. ಒಟ್ಟು 14,478 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಏಪ್ರಿಲ್ ಆರಂಭದಿಂದ ಕೊರೊನಾ ಗ್ರಾಫ್ ಏರಿಕೆಯಾಗುತ್ತಿದೆ. ನಿನ್ನೆಯ ವೇಳೆಗೆ ಒಟ್ಟು 1,512 ಜನರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದರೆ ಅದರಲ್ಲಿ 133 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಿನ್ನೆಯವರೆಗೂ 15,441 ಜನರಲ್ಲಿ ಸೋಂಕು ಕಾಣಿಸಿಕೊಂಡು ಇಲ್ಲಿಯವರೆಗೂ 14,516 ಜನರು ಗುಣಮುಖರಾಗಿದ್ದಾರೆ. ಈಗ 767 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಆಸ್ಪತ್ರೆಯಲ್ಲಿ 89 ಜನರಿದ್ದಾರೆ.

ರಾಯಚೂರಿನಲ್ಲಿ ಈಗಾಗಲೇ ಕೊರೊನಾ ಏರಿಕೆ ಕಾಣಿಸಿಕೊಳ್ಳುತ್ತಿದೆ. ಬರುವ ದಿನಗಳಲ್ಲಿ ಈ ಗ್ರಾಫ್ ಏರಿಕೆಯಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಜನತೆ ಕೊರೊನಾದಿಂದ ಎಚ್ಚರವಾಗಿರಬೇಕು. ಕೊವಿಡ್ ನಿಯಮ ಪಾಲನೆ ಮಾಡಲು ಜನರಲ್ಲಿ ಅರಿವು, ಕಾನೂನು ಕ್ರಮ ವಹಿಸಲು ಅಧಿಕಾರಿಗಳು ಮುಂದಾಗಿಲ್ಲ. ಜನಪ್ರತಿನಿಧಿಗಳಂತೂ ಮಸ್ಕಿ ಎಲೆಕ್ಷನ್ ಕೊರೊನಾ ಮರೆತು ಸಾವಿರಾರು ಜನರ ಸೇರಿಸಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಮಸ್ಕಿ ಉಪ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ, ಅಭ್ಯರ್ಥಿ ಪ್ರತಾಪಗೌಡ ಪಾಟೀಲ, ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಪ್ರೀತಂ ಗೌಡ, ರೇಣುಕಾಚಾರ್ಯ, ದೊಡ್ಡನಗೌಡ ಪಾಟೀಲ, ವಿಜಯೇಂದ್ರರ ಗನ್ ಮ್ಯಾನ್, ಬಿಜೆಪಿ ಮುಖಂಡರು ವಾಸವಾಗಿದ್ದ ದೊಡ್ಡನಗೌಡ ಪಾಟೀಲರ ಮನೆಯ ಅಡುಗೆ ಭಟ್ಟರು ಸೇರಿ ಈ ಸಂಖ್ಯೆ ಏರಿಕೆಯಾಗುತ್ತಿದೆ.

ಈ ಮಧ್ಯೆ ಚುನಾವಣೆಯ ನಂತರ ಮಸ್ಕಿ ಕ್ಷೇತ್ರದಲ್ಲಿ ನಿತ್ಯ 1000 ಕ್ಜೂ ಹೆಚ್ಚು ಜನರ ರ್ಯಾಂಡಮ್ ಟೆಸ್ಟ್ ಮಾಡಲು ಮುಂದಾಗಿದೆ. ಸಾಕಷ್ಟು ಜನರಲ್ಲಿ ಸೋಂಕಿಗೆ ದೂಡಿದ ಕೊರೊನಾ ಈಗ ಮತ್ತೆ ಜಿಲ್ಲೆಯಲ್ಲಿ ಆತಂಕ ಸೃಷ್ಠಿಸಿದೆ. ಒಂದು ವೇಳೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಜನರು ಹೇಳುತ್ತಿದ್ದಾರೆ.
Published by: Sushma Chakre
First published: April 19, 2021, 8:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories