ನವದೆಹಲಿ(ಜೂ.16): ದೇಶಾದ್ಯಂತ ಶರವೇಗದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ಸೋಂಕನ್ನೇ ಮುಂದಿಟ್ಟುಕೊಂಡು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಮಾಡೆಲ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಬಿಬಿಬಿ ವರದಿ ಆಧರಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತದಲ್ಲಿ ಗುಜರಾತ್‌ನಲ್ಲೇ ಕೋವಿಡ್-19 ವೈರಸ್ಗೆ ಬಲಿಯಾದವರ ಪ್ರಮಾಣ ಹೆಚ್ಚಿದೆ ಎಂದು ಲೇವಡಿ ಮಾಡಿದ್ದಾರೆ.
ಗುಜರಾತ್‌ನಲ್ಲಿ ಮರಣ ಪ್ರಮಾಣ ಶೇ.6.25ರಷ್ಟಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ 3.73, ರಾಜಸ್ಥಾನದಲ್ಲಿ ಶೇ.2.32, ಪಂಜಾಬ್ ಶೇ.2.17, ಪುದುಚೆರಿ ಶೇ.1.98, ಜಾರ್ಖಂಡ್ ಶೇ.0.5, ಛತ್ತೀಸ್‌ಗಢ ಶೇ.0.35 ರಷ್ಟಿದೆ. ಕಾಂಗ್ರೆಸ್ ಆಡಳಿರ ರಾಜ್ಯಗಳಲ್ಲಿ ಕೊರೋನಾ ಮರಣ ಪ್ರಮಾಣ ಇಷ್ಟು ಕಡಿಮೆ ಇದೆ. ಬಿಜೆಪಿ ಆಡಳಿತರೂಢ ಗುಜರಾತ್‌ನಲ್ಲಿ ಮಾತ್ರ ಯಾಕೇ ಹೆಚ್ಚಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ಧಾರೆ.
Covid19 mortality rate:
Gujarat: 6.25%
Maharashtra: 3.73%
Rajasthan: 2.32%
Punjab: 2.17%
Puducherry: 1.98%
Jharkhand: 0.5%
Chhattisgarh: 0.35%
Gujarat Model exposed.https://t.co/ObbYi7oOoD
— Rahul Gandhi (@RahulGandhi) June 16, 2020
ಇತ್ತೀಚೆಗೆ ಬಿಬಿಸಿ ಭಾರತದ ಕೋವಿಡ್-19 ಪರಿಸ್ಥಿತಿ ಸಂಬಂಧ ವರದಿಯೊಂದು ಮಾಡಿತ್ತು. ಇದರಲ್ಲಿ ಗುಜರಾತ್ ರಾಜಧಾನಿ ಅಹಮದಾಬಾದ್‌ನ ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿತ್ತು. ಜತೆಗೆ ಭಾರತದಲ್ಲಿ ಕೋವಿಡ್-19 ಏರಿಕೆಯಾಗಲು ಅನಿವಾಸಿ ಭಾರತೀಯರ ಆಗಮನ, ದೆಹಲಿ ತಬ್ಲಿಘಿ ಧಾರ್ಮಿಕ ಸಭೆ ಕಾರಣ ಎಂದು ಗುಜರಾತ್ ಸರ್ಕಾರ ಹೇಳುತ್ತಿದೆ. ಇದು ನಿಜವಲ್ಲ ಎಂದು ಹೇಳಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ