ನಿಜವಾದ ರಾಹುಲ್ ಗಾಂಧಿ ಭವಿಷ್ಯ : 20 ಲಕ್ಷ ದಾಟಿದ ದೇಶದ ಕೊರೋನಾ ಸೋಂಕಿತರ ಸಂಖ್ಯೆ

ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಅವರ ಕೊರೋನಾ ಹರಡುವಿಕೆ ಬಗ್ಗೆ ಹಲವು ಕಹಿ ಸತ್ಯ ಹೇಳಿದ್ದಾರೆ. ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.‌ ಹೆಚ್ಚೆಚ್ಚು ಕೊರೋನಾ ಪರೀಕ್ಷೆ ನಡೆಸಿ ಎಂದು ಒತ್ತಾಯಿಸಿದ್ದಾರೆ. ಲಾಕ್​ಡೌನ್​​ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

news18-kannada
Updated:August 7, 2020, 9:08 AM IST
ನಿಜವಾದ ರಾಹುಲ್ ಗಾಂಧಿ ಭವಿಷ್ಯ : 20 ಲಕ್ಷ ದಾಟಿದ ದೇಶದ ಕೊರೋನಾ ಸೋಂಕಿತರ ಸಂಖ್ಯೆ
ರಾಹುಲ್ ಗಾಂಧಿ
  • Share this:
ನವದೆಹಲಿ(ಆಗಸ್ಟ್​.07): ಕೊರೋನಾ ಆರಂಭ ಆದಾಗಿನಿಂದಲೂ ಕರಾರುವಕ್ಕಾಗಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಅವರ ಮಾತು ಮತ್ತೊಮ್ಮೆ ನಿಜವಾಗಿದೆ. ರಾಹುಲ್ ಗಾಂಧಿ ಕಳೆದ ಜುಲೈ 17ರಂದು 'ದೇಶದಲ್ಲಿ ಕೊರೊನಾ ಸೋಂಕು ಇಷ್ಟೇ ತೀವ್ರವಾಗಿ ಹರಡುತ್ತಿದ್ದರೆ ಆಗಸ್ಟ್ 10ರೊಳಗೆ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 20 ಲಕ್ಷದ ಗಡಿ ದಾಟಲಿದೆ' ಎಂದು ಹೇಳಿದ್ದರು. ಆ ಮಾತು ಈಗ ನಿಜವಾಗಿದೆ.

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಜನವರಿ 30ರಂದು. ಇದಕ್ಕೂ ಮೊದಲು ಕೊರೋನಾ ಸೋಂಕು ಅದರ ಹುಟ್ಟುರಾದ ಚೀನಾವನ್ನು ಬೆಚ್ಚಿ ಬೀಳಿಸಿತ್ತು. ಚೀನಾದ ಪರಿಸ್ಥಿತಿ ನೋಡಿ ಇತರೆ ದೇಶಗಳು ಕೂಡ ದಿಗಿಲುಗೊಂಡಿದ್ದವು. ಆಗಲೇ ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಅವರು ಫೆಬ್ರವರಿ 12ರಂದು. 'ಕೊರೋನಾ ಎಂಬ ಮಹಾಮಾರಿ ತಂದೊಡ್ಡುವ ಅಪಾಯಗಳು ಅಂದಾಜಿಗೂ ನಿಲುಕಲಾರದಂತಿವೆ. ತಕ್ಷಣವೇ ಕೇಂದ್ರ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು' ಎಂಬ ಸಲಹೆ ನೀಡಿದ್ದರು. ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಅವರ ಆ ಮಾತು ನಿಜವಾಗಿತ್ತು. ಕೊರೋನಾ ಹೊಡೆತಕ್ಕೆ ದೇಶ ನಲುಗಿಹೋಗಿತ್ತು.

ಇದಾದ ಬಳಿಕವೂ ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಅವರ ಕೊರೋನಾ ಹರಡುವಿಕೆ ಬಗ್ಗೆ ಹಲವು ಕಹಿ ಸತ್ಯ ಹೇಳಿದ್ದಾರೆ. ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.‌ ಹೆಚ್ಚೆಚ್ಚು ಕೊರೋನಾ ಪರೀಕ್ಷೆ ನಡೆಸಿ ಎಂದು ಒತ್ತಾಯಿಸಿದ್ದಾರೆ. ಲಾಕ್​ಡೌನ್​​ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಆರ್ಥಿಕತೆ ದಿಕ್ಕು ದೆಸೆ ಇಲ್ಲದೆ ಸಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಅವರ ಸಲಹೆಗಳನ್ನು ಪರಿಗಣಿಸದ ಕಾರಣ ಸಮಸ್ಯೆಗಳೂ‌ ಹೆಚ್ಚಾಗಿವೆ.

ಇದನ್ನೂ ಓದಿ : ಐದು ಬದಲು ಒಂದೇ ವರ್ಷಕ್ಕೆ ಗ್ರಾಚ್ಯುಟಿ ಹಣ ಪಡೆಯುವ ಅವಕಾಶ ನೀಡಿ: ಸಂಸದೀಯ ಸಮಿತಿ ಶಿಫಾರಸು

ಇದರ ಮುಂದುವರೆದ ಭಾಗವಾಗಿ ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಅವರು 'ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೀಗೆ ಹೆಚ್ಚಾಗುತ್ತಿದ್ದರೆ ಆಗಸ್ಟ್ 10ರೊಳಗೆ 20 ಲಕ್ಷದ ಗಡಿ ದಾಟಲಿದೆ' ಎಂದು ಹೇಳಿದ್ದರು. ಆ ಮಾತು ಮೂರು ದಿನ (ಆಗಸ್ಟ್ 7ರಂದೇ) ಮುನ್ನವೇ ನಿಜವಾಗಿದೆ. ಅಂದು ರಾಹುಲ್ ಗಾಂಧಿ ಅವರು ಭವಿಷ್ಯ ನುಡಿದಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ ಎಂದು. ಕೊರೋನಾ ಪರೀಕ್ಷೆಯನ್ನು ಹೆಚ್ಚುಗೊಳಿಸಲಿ ಎಂದು. ಅದಕ್ಕೆ ಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳಲಿ ಎಂದು. ಆದರೆ ಅದ್ಯಾವು ಆಗದೆ ಅವರು ನುಡಿದಿದ್ದ ಭವಿಷ್ಯ ಮಾತ್ರ ನಿಜವಾಗಿದೆ.

ಈ ಬಗ್ಗೆ ಈಗ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷ ಗಡಿ ದಾಟಿದೆ. ನರೇಂದ್ರ ಮೋದಿ ಅವರ ಸರ್ಕಾರ ಕಣ್ಮರೆಯಾಗಿದೆ' ಎಂದು ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ.
Published by: G Hareeshkumar
First published: August 7, 2020, 9:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading