HOME » NEWS » Coronavirus-latest-news » RAHUL GANDHI ON LABOUR LAWS DILUTION GNR

ಕಾರ್ಮಿಕ ಕಾಯ್ದೆ ತಿದ್ದುಪಡಿ: ಶ್ರಮಿಕರ ಶೋಷಣೆ ಕ್ಷಮೆಗೆ ಅರ್ಹವಲ್ಲ - ರಾಜ್ಯ ಸರ್ಕಾರಗಳ ಮೇಲೆ ರಾಹುಲ್​​ ಕಿಡಿ

ಇನ್ನೊಂದೆಡೆ ಮಧ್ಯಪ್ರದೇಶದ ಬಿಜೆಪಿ ಸರಕಾರವು ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 25 ಹೊರತುಪಡಿಸಿ ಎಲ್ಲಾ ನಿಬಂಧನೆಗಳನ್ನು ಸಡಿಲಿಸಿದೆ. ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗಳವರೆಗೆ ವಿಸ್ತರಿಸಲಾಗಿದೆ.‌ 50ಕ್ಕಿಂತ ಕಡಿಮೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಸ್ಥೆಗಳಿಗಳನ್ನು ವಿವಿಧ ಕಾರ್ಮಿಕ ಕಾನೂನುಗಳ ಅಡಿಯಲ್ಲಿನ ಅಗತ್ಯ ಪರಿಶೀಲನೆಯಿಂದ ಹೊರಗಿಡಲಾಗಿದೆ.

news18-kannada
Updated:May 11, 2020, 3:44 PM IST
ಕಾರ್ಮಿಕ ಕಾಯ್ದೆ ತಿದ್ದುಪಡಿ: ಶ್ರಮಿಕರ ಶೋಷಣೆ ಕ್ಷಮೆಗೆ ಅರ್ಹವಲ್ಲ - ರಾಜ್ಯ ಸರ್ಕಾರಗಳ ಮೇಲೆ ರಾಹುಲ್​​ ಕಿಡಿ
ರಾಹುಲ್​ ಗಾಂಧಿ
  • Share this:
ನವದೆಹಲಿ(ಮೇ.11): ಕೊರೋನಾ ಬಿಕ್ಕಟ್ಟಿನ ನೆಪದಲ್ಲಿ ಕಾರ್ಮಿಕರ ಪರ ಕಾನೂನುಗಳನ್ನು ದುರ್ಬಲಗೊಳಿಸಿ ಆದೇಶಿಸಿದ ವಿವಿಧ ರಾಜ್ಯಗಳ ಸರ್ಕಾರಗಳ ಮೇಲೆ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್​​ ಗಾಂಧಿ ಕಿಡಿಕಾರಿದ್ದಾರೆ. ಕೊರೋನಾ ಹೆಸರಲ್ಲಿ‌ ಕಾರ್ಮಿಕರನ್ನು ಶೋಷಣೆ ಮಾಡಬೇಡಿ. ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಬೇಡಿ. ದೇಶದ ದುಡಿಯುವ ವರ್ಗದ ಶೋಷಣೆ ಕ್ಷೆಮೆಗೆ ಅರ್ಹವಾದುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ವರ್ಷಗಳ ಕಾಲ ಕಾರ್ಮಿಕ ಕಾನೂನುಗಳ ವ್ಯಾಪ್ತಿಯಿಂದ ಎಲ್ಲಾ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ವ್ಯವಹಾರಗಳಿಗೆ ವಿನಾಯಿತಿ ನೀಡುವ ಸುಗ್ರೀವಾಜ್ಞೆಯನ್ನು ಉತ್ತರ ಪ್ರದೇಶ ಸರ್ಕಾರ ಅನುಮೋದಿಸಿದೆ. ಇನ್ನು ಮುಂದೆ ಕನಿಷ್ಠ ವೇತನ ಕಾಯ್ದೆ, ಕಾರ್ಮಿಕ ಸಂಘಗಳ ಕಾಯ್ದೆ, ಕೈಗಾರಿಕಾ ವಿವಾದಗಳ ಕಾಯ್ದೆ, ಕಾರ್ಖಾನೆಗಳ ಕಾಯ್ದೆ, ಗುತ್ತಿಗೆ ಕಾರ್ಮಿಕ ಕಾಯ್ದೆ, ಬೋನಸ್ ಪಾವತಿ ಕಾಯ್ದೆ , ಅಂತರ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆ, ಕಾರ್ಯನಿರತ ಪತ್ರಕರ್ತರ ಕಾಯ್ದೆ, ನೌಕರರ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳು ಮಾತ್ರ ಅನ್ವಯವಾಗಲಿವೆ. ಯುಪಿ ಸರಕಾರದ ಸುಗ್ರೀವಾಜ್ಞೆಯು ಈಗ ಕೇಂದ್ರ ಸರ್ಕಾರದ ಅನುಮೋದನೆಗೆ ಹೊರಟಿದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಮಧ್ಯಪ್ರದೇಶದ ಬಿಜೆಪಿ ಸರಕಾರವು ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 25 ಹೊರತುಪಡಿಸಿ ಎಲ್ಲಾ ನಿಬಂಧನೆಗಳನ್ನು ಸಡಿಲಿಸಿದೆ. ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗಳವರೆಗೆ ವಿಸ್ತರಿಸಲಾಗಿದೆ.‌ 50ಕ್ಕಿಂತ ಕಡಿಮೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಸ್ಥೆಗಳಿಗಳನ್ನು ವಿವಿಧ ಕಾರ್ಮಿಕ ಕಾನೂನುಗಳ ಅಡಿಯಲ್ಲಿನ ಅಗತ್ಯ ಪರಿಶೀಲನೆಯಿಂದ ಹೊರಗಿಡಲಾಗಿದೆ.

ಇದನ್ನೂ ಓದಿ: ಕೊರೋನಾ ಲಾಕ್​​ಡೌನ್​​ ಎಫೆಕ್ಟ್: ಕರ್ನಾಟಕಕ್ಕೆ 10,675 ಕೋಟಿ ರೂ. ನಷ್ಟ

ಇತರ ರಾಜ್ಯಗಳಾದ ರಾಜಸ್ಥಾನ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯ ಸರಕಾರಗಳೂ, ಕಳೆದ ತಿಂಗಳಿನಿಂದ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ತಂದಿವೆ. ಇಲ್ಲಿಯೂ ಕೆಲಸದ ಸಮಯವನ್ನು ದಿನಕ್ಕೆ 8 ರಿಂದ 12 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಈ ಬದಲಾವಣೆಗಳ ಉದ್ದೇಶವು ಸಾಂಕ್ರಾಮಿಕ ರೋಗದ ಇಡೀ ವೆಚ್ಚ ಮತ್ತು ಬಿಕ್ಕಟ್ಟನ್ನು ಕಾರ್ಮಿಕ ವರ್ಗಕ್ಕೆ ವರ್ಗಾಯಿಸುವುದಾಗಿದೆ.
First published: May 11, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading