Rahul Gandhi: ಸೋಂಕಿನಿಂದ ಸಾವಿನ ಸಂಖ್ಯೆ ಏರುತ್ತಿದೆ, ಕೇಂದ್ರ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದೆ; ರಾಹುಲ್ ಗಾಂಧಿ ಕಿಡಿ

ಅಸಲಿಗೆ ಎರಡು ದಿನಗಳ ಹಿಂದೆ ಭಾರತದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಲಾಕ್​ಡೌನ್ ಕಾರಣದಿಂದಾಗಿ ಕ್ರಮೇಣ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಈ ವರದಿಯನ್ನು ಅಲ್ಲಗೆಳೆದಿತ್ತು.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

 • Share this:
  ನವ ದೆಹಲಿ (ಮೇ 19); ಭಾರತದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ನಗರ ಭಾಗದಲ್ಲಿ ಹೆಚ್ಚಾಗಿದ್ದ ಸೋಂಕು ಇದೀಗ ಗ್ರಾಮೀಣ ಭಾರತಕ್ಕೂ ಹರಡುತ್ತಿದೆ. ಒಂದೆಡೆ ಕೊರೋನಾ ಪರೀಕ್ಷೆಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದರೆ, ಮತ್ತೊಂದೆಡೆ ಎಲ್ಲರಿಗೂ ಲಸಿಕೆ ನೀಡುವ ಕೆಲಸವೂ ಆಗುತ್ತಿಲ್ಲ. ಪರಿಣಾಮ ಭಾರತದಲ್ಲಿ ಕೊರೋನಾ ರೋಗಿಗಳ ಸಾವಿನ ಸಂಖ್ಯೆ ಅಧಿಕವಾಗುತ್ತಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಈ ನಡುವೆ ಕೇಂದ್ರ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಮತ್ತೊಮ್ಮೆ ಕಿಡಿಕಾರಿರುವ ಕಾಂಗ್ರೆಸ್ ಪಕ್ಷದ ಮಾಜಿ ರಾ ರಾಹುಲ್ ಗಾಂಧಿ, "ಕೊರೋನಾ ಸೋಂಕಿನಿಂದ ಸಾವುಗಳು ಹೆಚ್ಚಾಗುತ್ತಿದೆ, ಆದರೆ, ಜನರಿಗೆ ಲಸಿಕೆ ನೀಡುವುದು ಕಡಿಮೆಯಾಗುತ್ತಿವೆ. ಈ ಬಗ್ಗೆ ಗಮನ ವಹಿಸದ ಕೇಂದ್ರ ಸರ್ಕಾರ ಜನರ ಗಮನವನ್ನು ಬೇರೆಡೆಗೆ ತಿರುಗಿಸಿ, ಸುಳ್ಳನ್ನು ಹರಡುವಲ್ಲಿ ನಿರತವಾಗಿದೆ" ಎಂದು ಕಿಡಿಕಾರಿದ್ದಾರೆ.

  ಕೊರೋನಾ ವ್ಯಾಕ್ಸಿನೇಷನ್‌ಗಳ ಕುಸಿತ ಮತ್ತು ಕೊರೋನಾ ಸೋಂಕಿನಿಂದ ಉಂಟಾಗುತ್ತಿರುವ ದೈನಂದಿನ ಸಾವಿನ ಸಂಖ್ಯೆಯಲ್ಲಿನ ಹೆಚ್ಚಳವನ್ನು ತೋರಿಸುವ ಗ್ರಾಫ್‌ಗಳನ್ನು ರಾಹುಲ್ ಗಾಂಧಿ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಹೀಗೆ ಮಾಹಿತಿ ಹಂಚಿಕೊಂಡಿರುವ ಟ್ವೀಟ್​ನಲ್ಲಿ, "ಲಸಿಕೆಗಳು ಕಡಿಮೆಯಾಗುತ್ತಿವೆ ಮತ್ತು ಕೊರೋನಾ ಸಾವುಗಳು ಹೆಚ್ಚುತ್ತಿವೆ. ಆದರೆ ಕೇಂದ್ರ ಸರ್ಕಾರ ಜನರ ಗಮನವನ್ನು ಬೇರೆಡೆಗೆ ತಿರುಗಿಸಿ, ಸುಳ್ಳನ್ನು ಹರಡುವ ನೀತಿಯನ್ನು ನೆಚ್ಚಿಕೊಂಡಿದೆ. ಬೊಬ್ಬೆ ಹೊಡೆದು ಸತ್ಯವನ್ನು ಮರೆಮಾಚುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಅಸಲಿಗೆ ಎರಡು ದಿನಗಳ ಹಿಂದೆ ಭಾರತದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಲಾಕ್​ಡೌನ್ ಕಾರಣದಿಂದಾಗಿ ಕ್ರಮೇಣ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಈ ವರದಿಯನ್ನು ಅಲ್ಲಗೆಳೆದಿದ್ದ ವಿಶ್ವ ಆರೋಗ್ಯ ಸಂಸ್ಥೆ, "ಭಾರತದಲ್ಲಿ ವ್ಯಾಪಕವಾಗಿ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ. ಈಗಾಗಲೇ ಗ್ರಾಮೀಣ ಭಾಗಗಳಿಗೆ ಸೋಂಕು ಹರಡಿದ್ದು, ಮುಂದೆ ಭಾರೀ ದೊಡ್ಡ ಅಲೆ ಹುಟ್ಟುವ ಸಾಧ್ಯತೆ ಇದೆ. ಆದರೆ, ಭಾರತ ಸರ್ಕಾರ ಕೊರೋನಾ ಪರೀಕ್ಷೆ ನಡೆಸದೆ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಿದೆ. ಹೀಗಾಗಿ ಈ ಯಾವ ಅಂಕಿ ಅಂಶಗಳೂ ನಂಬಿಕಾರ್ಹ ಅಲ್ಲ" ಎಂದು ಆರೋಪಿಸಿತ್ತು. ಇದರ ಬೆನ್ನಿಗೆ ಇಂದು ರಾಹುಲ್ ಗಾಂಧಿ ಸಹ ಈ ಬಗ್ಗೆ ಟ್ವೀಟ್ ಮಾಡಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

  ಭಾರತದಲ್ಲಿ ಕೊರೋನಾ ಆರ್ಭಟ:

  ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರು ಲಕ್ಷಕ್ಕಿಂತಲೂ ಕಡಿಮೆ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಆದರೆ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲಿ ಮಾತ್ರ ಇಳಿಮುಖ ಆಗಿಲ್ಲ.

  ಇದನ್ನೂ ಓದಿ: Karnataka CoronaVirus: ಕರ್ನಾಟಕದಲ್ಲಿ ಮಿತಿಮೀರಿದ ಕೊರೋನಾ ಸೋಂಕು ಮತ್ತು ಸಾವಿನ ಪ್ರಕರಣ!

  ಮಂಗಳವಾರ 2,67,334 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,54,96,330ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಮಂಗಳವಾರವಾರವೂ 4,529 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,83,248ಕ್ಕೆ ಏರಿಕೆ ಆಗಿದೆ. ಈವರೆಗೆ 2,19,86,363ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 32,26,719 ಆಕ್ಟಿವ್ ಕೇಸುಗಳಿವೆ.

  ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
  Published by:MAshok Kumar
  First published: