Radhika Pandit: ಮನೆ ಕೆಲಸದಾಕೆಯ ಹುಟ್ಟುಹಬ್ಬಕ್ಕಾಗಿ ಕೇಕ್​ ತಯಾರಿಸಿದ ರಾಧಿಕಾ ಪಂಡಿತ್​​..!

Radhika Pandit: ರಾಧಿಕಾ ಪಂಡಿತ್​ ತಮ್ಮ ಮನೆಯಲ್ಲಿ ಕೆಲಸ ಮಾಡುವ ಗೀತಾ ಅವರ ಹುಟ್ಟುಹಬ್ಬಕ್ಕಾಗಿ ಕೆಲ ದಿನಗಳ ಹಿಂದೆ ಕೇಕ್​ ತಯಾರಿಸಿ, ಅವರ ಬರ್ತ್​ಡೇ ಆಚರಿಸಿದ್ದಾರೆ.

Anitha E | news18-kannada
Updated:July 3, 2020, 10:23 AM IST
Radhika Pandit: ಮನೆ ಕೆಲಸದಾಕೆಯ ಹುಟ್ಟುಹಬ್ಬಕ್ಕಾಗಿ ಕೇಕ್​ ತಯಾರಿಸಿದ ರಾಧಿಕಾ ಪಂಡಿತ್​​..!
ರಾಧಿಕಾ ಪಂಡಿತ್ ಹಾಗೂ ಅವರ ಮನೆ ಕೆಲಸದಾಕೆ ಗೀತಾ
  • Share this:
ಕೊರೋನ​ ಲಾಕ್​ಡೌನ್​ ಆದಾಗಿನಿಂದಲೂ ಮನೆ ಕೆಲಸ ಮಾಡುವವರ ಸಮಸ್ಯೆಯೂ ಎದುರಾಗಿದೆ. ಹಲವರ ಮನೆಗಳಲ್ಲಿ ಮನೆಕೆಲಸ ಮಾಡಲು ಜನರಿಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಆದರೆ ಕೊರೋನ ಸೋಂಕು ಭೀತಿಯ ನಡುವೆಯೇ ಮನೆಗೆ ಬಂದು ಕೆಲಸ ಮಾಡುತ್ತಿರುವ ಜನರೂ ಸಾಕಷ್ಟು ಮಂದಿ ಇದ್ದಾರೆ. ನಟಿ ರಾಧಿಕಾ ಪಂಡಿತ್ ಅವರ ಮನೆಯಲ್ಲೂ ಗೀತಾ ಎಂಬುವರು ಮನೆ ಕೆಲಸ ಮಾಡುತ್ತಿದ್ದಾರೆ. 

ಇತ್ತೀಚೆಗೆ ಗೀತಾ ಅವರ ಹುಟ್ಟುಹಬ್ಬವಿತ್ತು. ಅದಕ್ಕೆ ರಾಧಿಕಾ ಪಂಡಿತ್ ತಮ್ಮ ಕೈಯ್ಯಾರೆ ಕೇಕ್​ ತಯಾರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಆದರೆ ಅದರ ಫೋಟೋವನ್ನು ಕೊಂಚ ತಡವಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Radhika Pandit baked a cake for her house help lady Geetas birthday
ರಾಧಿಕಾ ಪಂಡಿತ್ ಹಾಗೂ ಅವರ ಮನೆ ಕೆಲಸದಾಕೆ ಗೀತಾ


'ಗೀತಾ ಅವರು 8 ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ನಮ್ಮ ಮನೆಯವರೇ ಆಗಿ ಹೋಗಿದ್ದಾರೆ. ಇವರು ನಮ್ಮ ಮನೆಯ ಸದಸ್ಯರೇ ಆಗಿ ಹೋಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲೂ ನಮ್ಮ ಕುಟುಂಬದ ಕಾಳಜಿ ಮಾಡುತ್ತಿದ್ದಾರೆ. ಹೀಗಿರುವಾಗ ಇವರ ಬಗ್ಗೆ ನಾವೂ ಸ್ವಲ್ಪ ಹೆಚ್ಚಿನ ಕಾಳಜಿವಹಿಸಬೇಕು. ಅವರನ್ನು ನಿರ್ಲಕ್ಷಿಸಿ ಮರೆತು ಬಿಡುವುದು ತಪ್ಪು. ಅವರೂ ನಮಗೆ ಬಹಳ ಮುಖ್ಯವಾದವರು' ಎಂದು ಸಲಹೆ ನೀಡಿದ್ದಾರೆ.

 

 




View this post on Instagram




 

Made this Mango Cheesecake when Ayra turned 18 months! Baked something after really long!! It felt good 😍 #nimmaRP #radhikapandit


A post shared by Radhika Pandit (@iamradhikapandit) on






ರಾಧಿಕಾ ಈ ಕೇಕ್​ ಅನ್ನು ಗೀತಾ ಅವರ ಹುಟ್ಟುಹಬ್ಬಕ್ಕಾಗಿ ಕೆಲ ದಿನಗಳ ಹಿಂದೆ ತಯಾರಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ ರಾಧಿಕಾ ಅವರಿಗೆ ಕೇಕ್​ ಮಾಡುವುದು ಇಷ್ಟದ ಹವ್ಯಾಸ. ಹಿಂದೆ ಮಗಳು ಐರಾಗೆ 18 ತಿಂಗಳು ತುಂಬಿದಾಗ ರಾಧಿಕಾ ಮಾವಿನ ಹಣ್ಣಿನ ಕೇಕ್​ ಮಾಡಿದ್ದರು.

Alia and Shaheen Bhatt celebrated the birthday of their house help Rashida
ಮನೆ ಕೆಲಸದವರ ಹುಟ್ಟುಹಬ್ಬ ಆಚರಿಸಿದ ಆಲಿಯಾ ಭಟ್​


ಇನ್ನು ಇತ್ತೀಚೆಗಷ್ಟೆ ಆಲಿಯಾ ಭಟ್​ ಹಾಗೂ ಅವರ ಅಪ್ಪ-ಅಮ್ಮ ಸಹ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಹುಟ್ಟುಹಬ್ಬವನ್ನು ಕೇಕ್​ ಕತ್ತರಿಸುವ ಮೂಲಕ ಆಚರಿಸಿದ್ದು ಸುದ್ದಿಯಾಗಿತ್ತು.

 

Rashmika Mandanna: ಅಮ್ಮ ಇಬ್ಬರು ಮಕ್ಕಳನ್ನು ಹೇಗೆ ಬೆಳೆಸಿದರು ಅಂತ ರಶ್ಮಿಕಾಗೆ ಈಗ ಅರ್ಥವಾಗಿದೆಯಂತೆ..!


 

ಇದನ್ನೂ ಓದಿ: Chiranjeevi sarja: ಧ್ರುವ ಸರ್ಜಾ ಹೆಂಡತಿ ಪ್ರೇರಣಾ ಜೊತೆ ಸಖತ್​ ಸ್ಟೆಪ್​ ಹಾಕಿದ್ದ ಚಿರು ಸರ್ಜಾ: ವಿಡಿಯೋ ವೈರಲ್​..!
First published: July 3, 2020, 7:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading