HOME » NEWS » Coronavirus-latest-news » R ASHOK SAYS TEAM FORMED IN VILLAGES TO FIND INFECTION WHO COME FORM BANGALORE SESR

ಲಾಕ್​ಡೌನ್​ನಿಂದ ಹಳ್ಳಿಗಳಲ್ಲೂ ಸೋಂಕು ಆತಂಕ: ಗ್ರಾ. ಪಂ ಮಟ್ಟದಲ್ಲಿ ತಂಡ ರಚನೆ; ಆರ್​ ಅಶೋಕ್​

ಕೋವಿಡ್​ ಸೋಂಕು ಹೆಚ್ಚಿರುವ ಈ ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ಅಗತ್ಯ. ಇಂತಹ ಸಂದರ್ಭದಲ್ಲಿ ವೈದ್ಯರ ಈ ವರ್ತನೆ ಸಲ್ಲದು. ಇಂತಹ ವೇಳೆಯಲ್ಲಿ ಅವರು ಸೇವೆಗೆ ನಿರಾಕರಿಸಿದರೆ ಅವರ ವೈದ್ಯಕೀಯ ಪ್ರಮಾಣ ಪತ್ರವನ್ನು ರದ್ದು ಮಾಡಲು ಹಿಂಜರಿಯುವುದಿಲ್ಲ

news18-kannada
Updated:May 10, 2021, 2:54 PM IST
ಲಾಕ್​ಡೌನ್​ನಿಂದ ಹಳ್ಳಿಗಳಲ್ಲೂ ಸೋಂಕು ಆತಂಕ: ಗ್ರಾ. ಪಂ ಮಟ್ಟದಲ್ಲಿ ತಂಡ ರಚನೆ; ಆರ್​ ಅಶೋಕ್​
ಸಚಿವ ಆರ್​.ಅಶೋಕ್
  • Share this:
ಬೆಂಗಳೂರು (ಮೇ. 10): ಲಾಕ್​ಡೌನ್​ ಹಿನ್ನಲೆ ಸಿಲಿಕಾನ್​ ಸಿಟಿ ನಿವಾಸಿಗಳು ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ.  ಇದರಿಂದ ಹಳ್ಳಿಗಳಲ್ಲೂ ಸೋಂಕು ಹಬ್ಬವು ಭೀತಿ ಎದುರಾಗಿದೆ. ಬೆಂಗಳೂರಿನಿಂದ ಬಂದವರ ಪತ್ತೆಗಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ. ಈ ತಂಡ ಬೆಂಗಳೂರಿನಿಂದ ಬಂದವರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತದೆ. ಈ ಮೂಲಕ ಗ್ರಾಮಗಳಲ್ಲಿ ಸೋಂಕು ಹಬ್ಬದಂತೆ ಎಚ್ಚರಿಕೆ ಕ್ರಮವಹಿಸಲಾಗಿದೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ. ಇದೇ ವೇಳೆ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಒಳಗಾದವರನ್ನು ತಪಾಸಣೆಗೆ ಒಳಗಾಗದೇ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಳ್ಳತ್ತಿದ್ದಾರೆ. ಇದರಿಂದ ಇವರನ್ನು ಪತ್ತೆಹಚ್ಚುವುದು ಸರ್ಕಾರಕ್ಕೆ ಸವಾಲಾಗಿದೆ, ಇಂದು ಪ್ರತಿ ಮನೆಯಲ್ಲೂ ಸೋಂಕಿತರಿದ್ದಾರೆ. ಕಡೆ ಗಳಿಗೆಯಲ್ಲಿ ಅವರು ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಹಿನ್ನಲೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯ. ಈ ಹಿನ್ನಲೆ ಯಾರು ಕೂಡ ಮೊಬೈಲ್​ ಸ್ವಿಚ್​ ಆಫ್​ ಮಾಡದೇ ತಪಾಸಣೆಗೆ ಒಳಗಾಗಬೇಕು. ಜನರು ಸಹಕಾರ ಕೂಡ ಸೋಂಕು ನಿರ್ಮೂಲನೆಯಲ್ಲಿ ಅತಿ ಮುಖ್ಯ ಎಂದು ಮನವಿ ಮಾಡಿದರು

ಸಿದ್ಧಾರ್ಥ ಮೆಡಿಕಲ್​ ಕಾಲೇಜ್​ ವೈದ್ಯರಿಗೆ ನೋಟಿಸ್​​

ಮಾಜಿ ಸಚಿವ ಡಾ. ಜಿ ಪರಮೇಶ್ವರ ಒಡೆತನದ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರೇ ಎಂಬ ವಿಷಯ ಬಹಿರಂಗವಾಗಿದೆ. ಆಸ್ಪತ್ರೆಯಲ್ಲಿದ್ದ ವೈದ್ಯರು ಈಗಾಗಲೇ ಉದ್ಯೋಗ ತೊರೆದಿದ್ದಾರೆ. ಇದರಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಪರದಾಡುತ್ತಿದೆ. ಈ ನಡುವೆಯೂ ಅಲ್ಲಿ ಸೋಂಕಿತರನ್ನು ದಾಖಲು ಮಾಡಿಕೊಳ್ಳುತ್ತಿದ್ದು, ಯಾವುದೇ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವರು​, ಸಿದ್ಧಾರ್ಥ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಆರೋಪ ನನ್ನ ಗಮನಕ್ಕೂ ಬಂದಿದೆ. ಅಲ್ಲಿ ವೈದ್ಯರೇ ಇಲ್ಲ ಎಂಬುದು ತಿಳಿದು ಬಂದಿದೆ. ಈ ಮೆಡಿಕಲ್ ಕಾಲೇಜಿಗೆ ಅನುಮತಿ ಪಡೆಯುವ ವೇಳೆ ಕೊಟ್ಟಿರುವವ ವೈದ್ಯರ ಪಟ್ಟಿ ತರೆಸಿಕೊಳ್ಳುತ್ತೇವೆ . ಶೀಘ್ರ ಅವರಿಗೆ ನೋಟಿಸ್ ಕೊಟ್ಟು ಕೆಲಸಕ್ಕೆ ಹಾಜರಾಗಲು ತಿಳಿಸುತ್ತೇವೆ. ಹಾಜರಾಗದಿದ್ದಲ್ಲಿ ವೈದ್ಯಕೀಯ ಮಂಡಳಿಯಿಂದ ಅವರ ಹೆಸರನ್ನು ಕೈಬಿಡುವಂತೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
Youtube Video

ಕೋವಿಡ್​ ಸೋಂಕು ಹೆಚ್ಚಿರುವ ಈ ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ಅಗತ್ಯ. ಇಂತಹ ಸಂದರ್ಭದಲ್ಲಿ ವೈದ್ಯರ ಈ ವರ್ತನೆ ಸಲ್ಲದು. ಇಂತಹ ವೇಳೆಯಲ್ಲಿ ಅವರು ಸೇವೆಗೆ ನಿರಾಕರಿಸಿದರೆ ಅವರ ವೈದ್ಯಕೀಯ ಪ್ರಮಾಣ ಪತ್ರವನ್ನು ರದ್ದು ಮಾಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಇಲ್ಲದೇ ಸೋಂಕಿತರು ಪರದಾಡುತ್ತಿದ್ದಾರೆ. ಈ ಹಿನ್ನಲೆ ಅಲ್ಲರುವವರನ್ನು ಆದ್ಯತೆ ಮೇರೆಗೆ ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸುವಂತೆ ಹೇಳುತ್ತೇವೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​ ನೀಡಲು ಒಪ್ಪಿಗೆಜಿಲ್ಲೆಯ ಮೆಡಿಕಲ್ ಕಾಲೇಜುಗಳಲ್ಲಿ ಬೆಡ್ ಬ್ಲಾಕ್ ಮಾಡಿಕೊಳ್ಳುತ್ತಿಲ್ಲ ಎನ್ನುವ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ಬೆಡ್ ಕೊಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ಕೊಟ್ಟಿದ್ದೇವೆ. 25% ಬೆಡ್ ಕೊಡಲೇಬೇಕು. ಇದರಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಡ್ ಕೊಡುವ ವಿಚಾರದಲ್ಲಿ ಆರಂಭದಲ್ಲಿ ಖಾಸಗಿಯವರು ಈ ಮೊದಲು ಕಳ್ಳಾಟ ಆಡುತ್ತಿದ್ದರು. ಮೊನ್ನೆ ಸಭೆಯಲ್ಲಿ ಒಪಿಡಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇವೆ. ಬಳಿಕ ಅವರೆಲ್ಲಾ ಬೆಡ್​ ನೀಡಲು ಒಪ್ಪಿಕೊಂಡಿದ್ದಾರೆ, ಇನ್ನೊಂದೆರಡು ಆಸ್ಪತ್ರೆ ಇದ್ದು, ಅವುಗಳನ್ನು ಕರೆದು ಮಾತನಾಡುತ್ತೇವೆ. ಇನ್ಮುಂದೆ ಆಸ್ಪತ್ರೆಗಳಲ್ಲಿ ಯಾರೋ ಒಬ್ಬ ವ್ಯಕ್ತಿ, ಕ್ಲರ್ಕ್‌ಗಳು ಬೆಡ್ ಬುಕ್ ಮಾಡುವ ಆಗಿಲ್ಲ. ಖುದ್ದು ವೈದ್ಯರೇ ಬೆಡ್ ಬುಕ್ ಮಾಡಬೇಕು. ಹೀಗಾಗಿ ಆರ್.ಆರ್ ನಗರಕ್ಕೆ ಇಬ್ಬರು ವೈದ್ಯರನ್ನ ನೇಮಕ ಮಾಡಿದ್ದೇವೆ. ವೈದ್ಯರು ಇನ್ಮುಂದೆ ಯಾವ ರೋಗಿಗೆ ಯಾವ ಬೆಡ್ ಬೇಕು ಎಂದು ಬುಕ್ ಮಾಡುತ್ತಾರೆ ಎಂದು ತಿಳಿಸಿದರು

ಇನ್ನು ಬಿಬಿಎಂಪಿಯಲ್ಲಿ ಕೇಳಿಬಂದ ಬೆಡ್​ ಬುಕ್ಕಿಂಗ್​ ಪ್ರಕರಣ ಕುರಿತು ಸಿಸಿಬಿ ತನಿಖೆ ನಡೆಸುತ್ತಿದೆ. ವರದಿ ಬಂದ ಕೂಡಲೇ ಯಾರೇ ಆಗಿರಲಿ, ಎಂತಹ ದೊಡ್ಡ ವ್ಯಕ್ತಿಯೆ ಇರಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಬಡವರ ಪ್ರಾಣದ ಜೊತೆ ಚೆಲ್ಲಾಟ ಆಡೋರಿಗೆ ಬುದ್ದಿ ಕಲಿಸುತ್ತೇವೆ
Published by: Seema R
First published: May 10, 2021, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories