Quarantine Watch Mobile App: ಹೋಂ ಕ್ವಾರಂಟೈನ್​ನಲ್ಲಿರುವವರ ಮೇಲೆ ನಿಗಾ ಇಡುವ ಆ್ಯಪ್​..!

Quarantine Watch Mobile App: ಕ್ವಾರಂಟೈನ್​ನಲ್ಲಿರುವ ಮಾತ್ರ ಪ್ರಾಥಮಿಕ ಕೊರೋನಾ ಶಂಕಿತರು ಮಾ ಆಗಾಗ ಮನೆಯಿಂದ ಹೊರ ಬಂದು ಮನಸ್ಸಿಗೆ ಬಂದಂತೆ ಓಡಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ಕೊರೋನಾ ಹರಡುವ ಭೀತಿ ಹೆಚ್ಚಾಗಿದ್ದು, ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ ಇನ್ನು ಮುಂದೆ ಕ್ವಾರಂಟೈನ್​ನಲ್ಲಿರುವವರು ಮನೆಗಳಿಂದ ಹೊರ ಬಂದರೆ ಕಂಡು ಹಿಡಿಯುವ ಆ್ಯಪ್​ ವೊಂದನ್ನು ಕರ್ನಾಟಕದ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿದೆ.

Anitha E | news18-kannada
Updated:April 1, 2020, 4:29 PM IST
Quarantine Watch Mobile App: ಹೋಂ ಕ್ವಾರಂಟೈನ್​ನಲ್ಲಿರುವವರ ಮೇಲೆ ನಿಗಾ ಇಡುವ ಆ್ಯಪ್​..!
ಕ್ವಾರಂಟೈನ್​ ವಾಚ್​ ಮೊಬೈಲ್​ ಆ್ಯಪ್​
  • Share this:
ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಕ ಕೊರೋನಾ ಸೋಂಕು ಭಾರತದಲ್ಲೂ ಭೀತಿ ಹುಟ್ಟುಹಾಕಿದೆ. ಹೆಮ್ಮಾರಿಯಾಗಿ ಹಬ್ಬುತ್ತಿರುವ ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ಹಾಗೆಯೇ ವಿದೇಶಗಳಿಂದ ಬಂದಿರುವವರನ್ನು ಮುನ್ನೆಚ್ಚರಿಕೆಯಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಆದರೆ, ಹೋಂ ಕ್ವಾರಂಟೈನ್​ನಲ್ಲಿ ಇರುವವರು ಕಣ್ಣು ತಪ್ಪಿಸಿ, ಹೊರಗೆ ಓಡಾಡುತ್ತಿರುವ ಬಗ್ಗೆ ವರದಿಯಾಗಿದೆ. ಹಾಗಾಗಿ ಹೋಂ ಕ್ವಾರಂಟೈನ್​ನಲ್ಲಿ ಇರುವವರ ಮೇಲೆ ನಿಗಾ ಇರಿಸಲು ಹೊಸ ಉಪಾಯ ಕಂಡುಕೊಳ್ಳಲಾಗಿದೆ.

ಪ್ರಾಥಮಿಕ ಕೊರೋನಾ ಶಂಕಿತರನ್ನು ಮನೆಯಲ್ಲಿಯೇ ಕ್ವಾರಂಟೈನ್​ನಲ್ಲಿ ಇರಿಸಲಾಗದೆ. ಆದರೆ, ಇವರಲ್ಲಿ ಕೆಲವರು ಆಗಾಗ್ಗೆ ಮನೆಯಿಂದ ಹೊರಬಂದು ಮನಸ್ಸಿಗೆ ಬಂದಂತೆ ಓಡಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ಕೊರೋನಾ ಹರಡುವ ಭೀತಿ ಹೆಚ್ಚಾಗಿದ್ದು, ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕ್ವಾರಂಟೈನ್​ ವಾಚ್​ ಮೊಬೈಲ್​ ಆ್ಯಪ್​


ಆದರೆ ಇನ್ನು ಮುಂದೆ ಕ್ವಾರಂಟೈನ್​ನಲ್ಲಿರುವವರು ಮನೆಗಳಿಂದ ಹೊರ ಬಂದರೆ ಕಂಡು ಹಿಡಿಯುವ ಆ್ಯಪ್​ ವೊಂದನ್ನು ಕರ್ನಾಟಕದ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿದೆ. ಹೋಂ ಕ್ವಾರಂಟೈನ್​ನಲ್ಲಿರುವವರ ಮೇಲೆ ನಿಗಾ ವಹಿಸಿದಲೆಂದೇ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ: Prakash Rai: 500 ಕುಟುಂಬಗಳ ತುತ್ತಿನ ಬುತ್ತಿ ತುಂಬಿಸುತ್ತಿರುವ ಪ್ರಕಾಶ್​ ರೈ..!

ಐಎಎಸ್​ ಅಧಿಕಾರಿ ಮುನೀಶ್​ ಮೌದ್ಗಿಲ್​ ಹಾಗೂ ತಂಡದವರು ಈ ಆ್ಯಪ್​ ಅಭಿವೃದ್ಧಿ ಪಡಿಸಿದ್ದಾರೆ. ಈ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್​ ಮಾಡಿದ್ದಾರೆ.

Quarantine Watch Mobile App by Govt of Karnataka developed hands-on by Munish Moudgil IAS &team. https://t.co/V3VKXbQd3F


ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿರುವ ಆ ಆ್ಯಪ್​ ಕ್ವಾರಂಟೈನ್​​ ವಾಚ್​ ಮೊಬೈಲ್​ ಆ್ಯಪ್​​. ಕ್ವಾರಂಟೈನ್​ನಲ್ಲಿರುವ ವ್ಯಕ್ತಿಯಗಳ ಜೊತೆ ಸಂಪರ್ಕದಲ್ಲಿರುವ ಪ್ರಾಥಮಿಕ ಹಾಗೂ ಅವರ ನಂತರದವರು ಪ್ರತಿ 30 ನಿಮಿಷಕ್ಕೆ ಅವರೊಂದಿಗೆ ತೆಗೆದ ಸೆಲ್ಫಿಯನ್ನು ಸರ್ಕಾರಕ್ಕೆ ಕಳುಹಿಸಬೇಕು. ಸೆಲ್ಫಿಗೆ ಜಿಪಿಎಸ್​ ಕೋ-ಆರ್ಡಿನೇಟ್ಸ್​ ಅನ್ನು ಲಿಂಕ್​ ಮಾಡಲಾಗಿರುತ್ತದೆ. ಇದರಿಂದ ಸೆಲ್ಫಿ ತೆಗೆದ ಲೊಕೇಷನ್​ ಬಗ್ಗೆ ಮಾಹಿತಿ ತಿಳಿಯುತ್ತದೆ.

ಇದನ್ನೂ ಓದಿ: Corona: ಕೊರೋನಾ ವಿರುದ್ಧದ ಹೋರಾಟಕ್ಕೆ ಯಾವ ಸೆಲೆಬ್ರಿಟಿ ಎಷ್ಟು ಧನ ಸಹಾಯ ಮಾಡಿದ್ದಾರೆ ಗೊತ್ತಾ..?

ಮಲಗುವ ಸಮಯವನ್ನು ಹೊರತುಪಡಿಸಿ ಉಳಿದಂತೆ ಅರ್ಧ ಗಂಟೆಗೊಮ್ಮೆ ಸೆಲ್ಫಿಗಳನ್ನು ಕಳುಹಿಸಬೇಕು. ಒಂದು ವೇಳೆ ಸೆಲ್ಫಿ ಕಳುಹಿಸದಿದ್ದದಲ್ಲಿ ಅವರನ್ನು ಆಸ್ಪತ್ರೆಗಳಲ್ಲಿ ಮಾಡಲಾಗಿರುವ ಸಾಮೂಹಿಕ (ಮಾಸ್​) ಕ್ವಾರಂಟೈನ್​ಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Urvashi Rautela: ಹಾಟ್​ ಫೋಟೋಗಳ ಜೊತೆ ಕ್ಯೂಟ್​ ಸಂದೇಶ ಕೊಟ್ಟ ಬೋಲ್ಡ್​ ನಟಿ ಊರ್ವಶಿ..!



 
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading