ಕೊರೋನಾ ಚಿಕಿತ್ಸೆ ನೀಡುವ ವೈದ್ಯರಿಗೆ ಕ್ವಾರಂಟೈನ್ ವ್ಯವಸ್ಥೆ - ಶುಶ್ರೂಷಕರಿಗಿಲ್ಲ ಭದ್ರತೆ

ಮನೆಯವರಿಗೂ ಸೋಂಕು ಹರಡುತ್ತದೆಂಬ ಭೀತಿಯಿಂದ ಬಹುತೇಕ ಶುಶ್ರೂಷಕರು ಮನೆಯ ಮಹಡಿ ಮೇಲೆ, ಊಟ ಮಾಡಿ ಅಲ್ಲಿಯೇ ಮಲಗುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಲಬುರ್ಗಿ(ಏ.30): ಜಿಲ್ಲೆಯಲ್ಲಿ ಕೊರೋನಾ ವ್ಯಾಪಕಗೊಳ್ಳಲಾರಂಭಿಸಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೇವಲ ಶೀತ, ಕೆಮ್ಮು, ಜ್ವರ ಬಂದವರನ್ನು ನೋಡಲು ವೈದ್ಯರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿ ಇರುವಾಗ ಜಿಲ್ಲೆಯಲ್ಲಿ ಏಕಾಏಕಿ ಸೋಂಕಿತರ ಸಂಖ್ಯೆ ಹೆಚ್ಚಾತ್ತಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿಯೂ ಆತಂಕ ಮೂಡಿಸಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಹೆದರುವಂತಾಗಿದೆ. ಹೀಗಾಗಿ ಶುಶ್ರೂಷಕರನ್ನೇ ಕೆಲ ವೈದ್ಯರು ಮುಂದೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಲಬುರ್ಗಿಯ ಜಿಮ್ಸ್ ನಲ್ಲಿ ಶುಶ್ರೂಷಕರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಶಂಕಿತ ಮತ್ತು ಕೊರೋನಾ ಸೋಂಕಿತ ವಾರ್ಡ್ ಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಜಿಮ್ಸ್ ಹಾಗೂ ಇಎಸ್ಐ ಆಸ್ಪತ್ರೆಯ ವೈದ್ಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ವೈದ್ಯರು ಮನೆಗೆ ಹೋಗದೆ ಅವರಿಗಾಗಿ ಮಾಡಿರುವ ರೂಮ್ ಗಳಲ್ಲಿ ವಸತಿ ಮಾಡುತ್ತಿದ್ದಾರೆ. ಆದರೆ ಶುಶ್ರೂಷಕರಿಗೆ, ಇತರೆ ಸಿಬ್ಬಂದಿಗಿಲ್ಲ ವಸತಿ ವ್ಯವಸ್ಥೆ ಇಲ್ಲದಂತಾಗಿದೆ. ಐಸೋಲೇಷನ್ ವಾರ್ಡ್ ನಲ್ಲಿ ಕೆಲಸ ಮಾಡುವ ಶುಶ್ರೂಷಕರಿಗೆ ಕ್ವಾರಂಟೈನ್ ವ್ಯವಸ್ಥೆ ಇಲ್ಲವಾಗಿದೆ. ಡ್ಯೂಟಿ ಮುಗಿಸಿ ತಮ್ಮ ಮನೆಗೆ ಹೋಗುವ ಅನಿವಾರ್ಯತೆ ಇದೆ. ಮನೆಯವರಿಗೂ ಸೋಂಕು ಹರಡುತ್ತದೆಂಬ ಭೀತಿಯಿಂದ ಬಹುತೇಕ ಶುಶ್ರೂಷಕರು ಮನೆಯ ಮಹಡಿ ಮೇಲೆ, ಊಟ ಮಾಡಿ ಅಲ್ಲಿಯೇ ಮಲಗುತ್ತಿದ್ದಾರೆ. ಮನೆಯ ಮಾಳಿಗೆಯೇ ಮೇಲೆಯೇ ಸ್ನಾನ ಎಂಬ ಸ್ಥಿತಿ ನಿರ್ಮಾಣವಾಗಿದೆ. ಜಿಮ್ಸ್ ನಲ್ಲಿ ಕೆಲಸ ಮಾಡುವ ಶುಶ್ರೂಷಕರು, ಇತರೆ ಸಿಬ್ಬಂದಿ ಸ್ಥಿತಿ ಇದಾಗಿದೆ.

ಕ್ವಾರಂಟೈನ್ ಆದ ಶುಶ್ರೂಷಕನಿಗಿಲ್ಲ ಸೂಕ್ತ ವ್ಯವಸ್ಥೆ:

ಇದರ ನಡುವೆ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಶುಶ್ರೂಷಕನ ಬಗ್ಗೆಯೂ ನಿಷ್ಕಾಳಜಿ ವಹಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಏಪ್ರಿಲ್ 21 ರಂದು ಮೃತಪಟ್ಟ 80 ವರ್ಷದ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಶುಶ್ರೂಷಕನಿಗೆ ಕ್ವಾರಂಟೈನ್ ಮಾಡಲಾಗಿದೆ. ಪಿಪಿಇ ಧರಿಸಗೇ ಚಿಕಿತ್ಸೆ ನೀಡಿದ್ದರಿಂದ ಕ್ವಾರಂಟೈನ್ ಪಾಲಾಗಿದ್ದಾರೆ. ಆದರೆ ಕ್ವಾರಂಟೈನ್ ವೇಳೆಸರಿಯಾದ ಊಟ ಕೊಡುತ್ತಿಲ್ಲ. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿಲ್ಲ  ಎಂದು ಶುಶ್ರೂಷಕ ಅಲವತ್ತುಕೊಳ್ಳುತ್ತಿದ್ದಾನೆ. ಆರೋಗ್ಯ ಇಲಾಖೆಯ ಸ್ಥಿತಿಯೇ ಹೀಗಾದರೇ ಬೇರೆಯವರ ಕಥೆಯೇನು ಎಂಬ ಪ್ರಶ್ನೆ ಎದುರಾಗಿದೆ. ಆರೋಗ್ಯ ಇಲಾಖೆಯ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತವಾಗಿದೆ. ಕೊರೋನಾ ವಾರ್ಡ್ ನಲ್ಲಿ ಕೆಲಸ ಮಾಡುವವರಿಗೆ ಸೂಕ್ತ ವ್ಯವಸ್ತೆ ಕಲ್ಪಿಸಲು ಆಗ್ರಹ ಕೇಳಿ ಬಂದಿದೆ.

ರೋಗಿಗಳ ಚಿಕಿತ್ಸೆಯಲ್ಲಿಯೂ ಜಿಮ್ಸ್ ನಿರ್ಲಕ್ಷ್ಯ ಆರೋಪ:

ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ವ್ಯಾಪಕಗೊಳ್ಳಲಾರಂಭಿಸಿದ್ದು, ಸೋಂಕಿತರ ಸಂಖ್ಯೆ 52ಕ್ಕೇರಿದೆ. ಹೀಗಾಗಿ ಇಎಸ್ಐ ಜೊತೆ ಜಿಮ್ಸ್ ನಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಜಿಮ್ಸ್ ನಲ್ಲಿ ದಾಖಲಾದವರಿಗೆ ಸೂಕ್ತ ಚಿಕಿತ್ಸೆ ಸಿಗ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ. ಕೊರೋನಾ ಶಂಕೆಯಿಂದ ಕ್ವಾರಂಟೈನ್ ಆದವರಿಗೆ, ಮತ್ತು ಇತರೆ ಸಮಸ್ಯೆಯಿಂದ ಚಿಕಿತ್ಸೆ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಮಾನ್ಯ ರೋಗಿ ಹಾಗೂ ಕೊರೊನಾ ಶಂಕಿತರಿಗೆ ಒಂದೇ ವಾರ್ಡ್ ಮಾಡಲಾಗಿದೆ ಎಂದು ರೋಗಿಗಳು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ : ಪಡಿತರದಾರರಿಗೆ ಡಬಲ್ ಧಮಾಕಾ : ಮೇ 1ರಿಂದ ಕೇಂದ್ರದ ಅಕ್ಕಿ, ಬೇಳೆ ಸಿಗುತ್ತೆ!

ಕ್ವಾರಂಟೈನ್ ವಾರ್ಡ್ ನಲ್ಲಿ ಸಾಮಾನ್ಯ ರೋಗಿಗಳನ್ನೂ ಇಡುತ್ತಿದ್ದಾರೆ. ಜ್ವರ, ಶೀತ, ಹೊಟ್ಟೆ ನೋವು, ಗಂಟಲು ನೋವೆಂದು ಬಂದರೆ ಕ್ವಾರಂಟೈನ್ ಗೆ ಶಿಫ್ಟ್ ಮಾಡುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ. ಸಾಮಾನ್ಯ ರೋಗಿಗಳಿಗೆ ಶಂಕಿತರ ಜೊತೆ ಇಟ್ಟರೆ ವೈರಸ್ ಹರಡುವ ಭೀತಿ ಇರುತ್ತದೆ. ದಾಖಲಾಗಿ ನಾಲ್ಕೈದು ದಿನವಾದರೂ ಚಿಕಿತ್ಸೆ ನೀಡುತ್ತಿಲ್ಲ. ಕೇವಲ ಒಂದು ಮಾತ್ರೆ ಕೊಟ್ಟು ಹೋಗುತ್ತಿದ್ದಾರೆ ಎಂದು ವೈದ್ಯರ ವಿರುದ್ದ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಚಿಕಿತ್ಸೆ ನೀಡಿ, ಇಲ್ಲವೆ ಮನೆಗೆ ಕಳಿಸಿ ಎಂದು ರೋಗಿಗಳು ಆಗ್ರಹಿಸಿದ್ದಾರೆ.
First published: