‘ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​​ ಕೊರೋನಾ ರಾಜಕೀಯ‘ - ಬಿಜೆಪಿ ಶಾಸಕ ಸಂಜೀವ ಮಠಂದೂರು

ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಕಾಂಗ್ರೆಸ್​​-ಜೆಡಿಎಸ್​ ಮಾತ್ರ​ ರಾಜ್ಯದ ಜನತೆಯನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

news18-kannada
Updated:August 3, 2020, 2:47 PM IST
‘ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​​ ಕೊರೋನಾ ರಾಜಕೀಯ‘ - ಬಿಜೆಪಿ ಶಾಸಕ ಸಂಜೀವ ಮಠಂದೂರು
ಪುತ್ತೂರು ಶಾಸಕ ಸಂಜೀವ ಮಠಂದೂರು
  • Share this:
ದಕ್ಷಿಣ ಕನ್ನಡ(ಆ.03): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಕೊರೋನಾ ರಾಜಕೀಯ ಮಾಡುತ್ತಿವೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತಾಡಿದ ಶಾಸಕ ಸಂಜೀವ ಮಠಂದೂರು, ಆರೋಪ ಮಾಡಬೇಕು ಎನ್ನುವ ಒಂದೇ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​​​ ಮುಖಂಡರು ರಾಜ್ಯ ಸರ್ಕಾರಕ್ಕೆ ಕೊರೋನಾ ಲೆಕ್ಕ ಕೊಡಿ ಎನ್ನುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದರು.

ಮೆಡಿಕಲ್​​ ಕಿಟ್​ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್​​ ಆರೋಪ ಮಾಡಿದ ಕೂಡಲೇ ರಾಜ್ಯ ಸರ್ಕಾರದ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಖರೀದಿಸಿದ ಎಲ್ಲಾ ವಸ್ತುಗಳ ಬಗ್ಗೆ ಸಚಿವರು ಲೆಕ್ಕ ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಈ ಬಗ್ಗೆ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ ಎಂದರು.

ಹೀಗೆ ಮುಂದುವರಿದ ಅವರು, ಕಾಂಗ್ರೆಸ್​ ಮತ್ತು ಜೆಡಿಎಸ್​​ಗೆ ಆರೋಪ ಮಾಡಲು ಯಾವುದೇ ವಿಚಾರ ಇಲ್ಲ. ಹೀಗಾಗಿ ಎರಡು ಪಕ್ಷಗಳು ಕೊರೋನಾ ರಾಜಕೀಯ ಮಾಡುತ್ತಿವೆ.  ಲೆಕ್ಕ ಬೇಕಾದರೆ ರಾಜ್ಯ ಮುಖ್ಯ ಕಾರ್ಯದರ್ಶಿ ಅಥವಾ ಆಯಾ ಇಲಾಖೆಗಳಿಂದ ಪಡೆದುಕೊಳ್ಳಲಿ ಎಂದು ವಿಪಕ್ಷಗಳ ವಿರುದ್ಧ ಸಂಜೀವ ಮಠಂದೂರು ಕಿಡಿಕಾರಿದರು.

ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಕಾಂಗ್ರೆಸ್​​-ಜೆಡಿಎಸ್​ ಮಾತ್ರ​ ರಾಜ್ಯದ ಜನತೆಯನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ಕೋವಿಡ್​-19 ರಾಜ್ಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸಂದರ್ಭದಲ್ಲಿ ಸಿಎಂ ಲಾಕ್​ಡೌನ್​ ಜಾರಿಗೊಳಿಸಿದರು. ಹೇಗಾದರೂ ಸರಿಯೇ ಕೊರೋನಾ ತಡೆಯಬೇಕು ಎಂದು ಸಾಕಷ್ಟು ಶ್ರಮಿಸಿದರು. ಕೊರೋನಾ ವೈರಸ್​​ ಹೆಚ್ಚು ವ್ಯಾಪಿಸದಂತೆ ಸಿಎಂ ಕಾರ್ಯ ನಿರ್ವಹಿಸಿದ ರೀತಿ ಶ್ಲಾಘನೀಯ ಎಂದರು.

ಇದನ್ನೂ ಓದಿ: BS Yediyurappa: ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ; ಆಸ್ಪತ್ರೆಯಿಂದ ಸಿಎಂ ಯಡಿಯೂರಪ್ಪ ವಿಡಿಯೋ ಸಂದೇಶಇನ್ನು, ಇಡೀ ರಾಜ್ಯ ಕೊರೋನಾದಿಂದ ತತ್ತರಿಸಿದಾಗ ಸುಮ್ಮನಿರದೇ ವಿರೋಧ ಪಕ್ಷಗಳು ಈಗ ಪ್ರಶ್ನಿಸುತ್ತಿವೆ. ಹಾದಿ ಬೀದಿಯಲ್ಲಿ ಲೆಕ್ಕ ಕೊಡಿ ಎಂದು ವಿಪಕ್ಷಗಳು ಕೇಳುತ್ತಿವೆ. ಬದಲಿಗೆ ಸಂಬಂಧಪಟ್ಟ ಇಲಾಖೆಯಿಂದಲೇ ಸರಿಯಾದ ಲೆಕ್ಕ ಕೇಳಿ ಪಡೆದುಕೊಳ್ಳಲಿ. ಸರ್ಕಾರಕ್ಕೆ ಬೇಕಾದ ಮಾರ್ಗದರ್ಶನ ನೀಡಲಿ ಎಂದು ಕಿವಿಮಾತು ಹೇಳಿದರು.
Published by: Ganesh Nachikethu
First published: August 3, 2020, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading