ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 324ಕ್ಕೆ ಏರಿಕೆ; ಪಂಜಾಬ್​ ಸೇರಿ 5 ರಾಜ್ಯಗಳಲ್ಲಿ ಭಾಗಶಃ ಬಂದ್​ ಘೋಷಣೆ

ಈ ನಡುವೆಯೇ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಇಲಾಖೆ ತಿಳಿಸಿದೆ. ಶನಿವಾರ ಹೊಸದಾಗಿ 65 ಪ್ರಕರಣಗಳು ಪತ್ತೆಯಾಗಿವೆ. ಕೊರೋನಾ ವೈರಸ್​​ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಲ್ಲಿ ಮಾರ್ಚ್​​ ಅಂತ್ಯದವರೆಗೆ ಭಾಗಶಃ ಬಂದ್​ ಘೋಷಣೆ ಮಾಡಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ನವದೆಹಲಿ(ಮಾ.22): ದೇಶದಲ್ಲಿ ಕೊರೋನಾ ಭೀತಿ ಹೆಚ್ಚಾದ ಹಿನ್ನೆಲೆ, ಪ್ರಧಾನಿ ಮೋದಿ ಇಂದು ಜನತಾ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಫ್ಯೂ ಇರಲಿದ್ದು, ಜನರು ಮನೆಯಿಂದ ಹೊರಗೆ ಬರಬೇಡಿ ಎಂದು ಮೋದಿ ಮನವಿ ಮಾಡಿದ್ದಾರೆ. ಜನರು ಸ್ವಯಂ ಆಗಿ ನಿರ್ಬಂಧ ಹಾಕಿಕೊಂಡು ಮನೆಯಲ್ಲೇ ಇರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮೋದಿ ಹೇಳಿದ್ದಾರೆ.

  ಈ ನಡುವೆಯೇ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಇಲಾಖೆ ತಿಳಿಸಿತ್ತು. ಶನಿವಾರ ಹೊಸದಾಗಿ 65 ಪ್ರಕರಣಗಳು ಪತ್ತೆಯಾಗಿದ್ದವು. ಈಗ ಕೊರೋನಾ ಪ್ರಕರಣಗಳ ಸಂಖ್ಯೆ 324ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್​​ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಪಂಜಾಬ್​ ಮತ್ತು ಬಿಹಾರ ರಾಜ್ಯಗಳಲ್ಲಿ ಮಾರ್ಚ್​​ ಅಂತ್ಯದವರೆಗೆ ಭಾಗಶಃ ಬಂದ್​ ಘೋಷಣೆ ಮಾಡಲಾಗಿದೆ.

  ಇಟಲಿಯಲ್ಲಿ ಕೊರೋನಾ ಮರಣ ಮೃದಂಗ: ಒಂದೇ ದಿನ 793 ಮಂದಿ ಬಲಿ; ಸಾವಿನ ಸಂಖ್ಯೆ 4825ಕ್ಕೆ ಏರಿಕೆ

  ಪ್ರಧಾನಿ ಮೋದಿ ಜನತಾ ಕರ್ಫ್ಯೂ ಪಾಲಿಸುವಂತೆ ಟ್ವೀಟ್​ ಮಾಡುವ ಮೂಲಕ ದೇಶದ ಜನರಿಗೆ ಮನವಿ ಮಾಡಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರಗೆ ಮನೆಯಲ್ಲೇ ಇರಿ ಎಂದು ಹೇಳಿದ್ದಾರೆ.  ಜನತಾ ಕರ್ಫ್ಯೂ ಜಾರಿಯಿಂದಾಗಿ ಇಂದು ಇಡೀ ದೇಶ 14 ಗಂಟೆಗಳ ಕಾಲ ಸ್ತಬ್ದವಾಗಲಿದೆ. ಸಾರ್ವಜನಿಕ ಸಾರಿಗೆ, ಮಾರುಕಟ್ಟೆಗಳು ಬಂದ್​ ಆಗಿವೆ. ಸರಕು-ಸೇವೆಗಳನ್ನು ಇಂದು ಒಂದು ದಿನಕ್ಕೆ ಮಾತ್ರ ಮುಚ್ಚಲಾಗುತ್ತದೆ. ಕೊರೋನಾ ತಡೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

  ಕೇಂದ್ರ ಗೃಹ ಸಚಿವ ಅಮಿತ್​ ಶಾ ಜನತಾ ಕರ್ಫ್ಯೂ ಪಾಲಿಸುವಂತೆ ದೇಶದ ಜನರಿಗೆ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಕೊರೋನಾ ತಡೆಗಾಗಿ ಜನರು ಪ್ರಧಾನಿ ಮೋದಿಯವರ ಆದೇಶ ಪಾಲಿಸಿ ಎಂದು ಹೇಳಿದ್ದಾರೆ.  ಇಂದು ಜನತಾ ಕರ್ಫ್ಯೂ ಹಿನ್ನೆಲೆ, ಎಲ್ಲಾ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದೆಹಲಿ, ಹೈದರಾಬಾದ್​ ಮತ್ತು ಮುಂಬೈನಲ್ಲಿ ಮೆಟ್ರೋ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
  First published: