• Home
 • »
 • News
 • »
 • coronavirus-latest-news
 • »
 • ಇಂಡೋನೇಷ್ಯಾದ ಜಾವಾ ಪ್ರದೇಶದಲ್ಲಿ ಮಾಸ್ಕ್ ಧರಿಸದವರಿಗೆ ಏನು ಶಿಕ್ಷೆ ಗೊತ್ತಾ?

ಇಂಡೋನೇಷ್ಯಾದ ಜಾವಾ ಪ್ರದೇಶದಲ್ಲಿ ಮಾಸ್ಕ್ ಧರಿಸದವರಿಗೆ ಏನು ಶಿಕ್ಷೆ ಗೊತ್ತಾ?

ಇಂಡೋನೇಷ್ಯಾದಲ್ಲಿ ಮಾಸ್ಕ್ ಧರಿಸದವರಿಗೆ ನೀಡಲಾಗುವ ಶಿಕ್ಷೆ ಇದು.

ಇಂಡೋನೇಷ್ಯಾದಲ್ಲಿ ಮಾಸ್ಕ್ ಧರಿಸದವರಿಗೆ ನೀಡಲಾಗುವ ಶಿಕ್ಷೆ ಇದು.

ಇಂಡೋನೇಷ್ಯಾದ ಈಸ್ಟ್ ಜಾವಾ ದ್ವೀಪದಲ್ಲಿ ಮಾಸ್ಕ್ ಧರಿಸದ ಜನರಿಗೆ ವಿಶಿಷ್ಟ ಶಿಕ್ಷೆ ನೀಡಲಾಗುತ್ತಿದೆ. ಕೋವಿಡ್ನಿಂದ ಮೃತಪಟ್ಟವರಿಗೆ ಸಮಾಧಿ ನಿರ್ಮಿಸುವ ಕಾಯಕವನ್ನ ಇವರಿಗೆ ಶಿಕ್ಷೆಯಾಗಿ ನೀಡಲಾಗುತ್ತಿದೆ.

 • Share this:

  ಜಕಾರ್ತಾ, ಇಂಡೋನೇಷ್ಯಾ: ನಮ್ಮ ರಾಜ್ಯದಲ್ಲಿ ಮಾಸ್ಕ್ ಧರಿಸದವರಿಗೆ ವಿಧಿಸಲಾಗುವ ದಂಡದ ಪ್ರಮಾಣವನ್ನು 1 ಸಾವಿರ ರೂವರೆಗೆ ಹೆಚ್ಚಿಸಲಾಗಿದೆ. ಆದರೂ ಮಾಸ್ಕ್ ಧರಿಸದೆ ಓಡಾಡುವ ಜನರು ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಆದರೆ, ಇಂಡೋನೇಷ್ಯಾ ದೇಶದ ಒಂದು ಪ್ರದೇಶದಲ್ಲಿ ಮಾಸ್ಕ್ ಧರಿಸದವರ ಕಿವಿ ಹಿಂಡಲು ವಿಭಿನ್ನ ಉಪಾಯ ಮಾಡಲಾಗಿದೆ. ಮಾಸ್ಕ್ ಹಾಕದ ವ್ಯಕ್ತಿಗಳು ಸ್ಮಶಾನದಲ್ಲಿ ಮಣ್ಣು ಅಗೆಯುವ ಕೆಲಸ ಮಾಡಬೇಕಂತೆ. ಈಸ್ಟ್ ಜಾವಾ ದ್ವೀಪದಲ್ಲಿ ಇಂಥದ್ದೊಂದು ಶಿಕ್ಷೆಯನ್ನ ಜಾರಿ ಮಾಡಲಾಗಿದೆ ಎಂದು ಅಲ್ಲಿಯ ದಿ ಜಕಾರ್ತಾ ಪೋಸ್ಟ್ ಪತ್ರಿಕೆಯಲ್ಲಿ ವರದಿಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಫೇಸ್ ಮಾಸ್ಕ್ ಹಾಕಲು ನಿರಾಕರಿಸಿದ ಎಂಟು ಮಂದಿಯನ್ನು ಸ್ಮಶಾನಕ್ಕೆ ಕರೆದೊಯ್ದು, ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಗಳ ಸಮಾಧಿಗೆ ಮಣ್ಣು ಅಗೆಸಲಾಯಿತು ಎನ್ನಲಾಗಿದೆ.


  ಎನ್ಗಬೆಟನ್ ಗ್ರಾಮದ ಈ ಸ್ಮಶಾನದಲ್ಲಿ ಸಮಾಧಿಗೆ ಗುಂಡಿ ತೋಡುವವರು ಬರೀ ಮೂವರಿದ್ದರು. ಫೇಸ್ ಮಾಸ್ಕ್ ಧರಿಸದ ಈ ಎಂಟು ವ್ಯಕ್ತಿಗಳನ್ನ ಯಾಕೆ ಈ ಕಾಯಕಕ್ಕೆ ಬಳಸಿಕೊಳ್ಳಬಾರದು ಎಂದು ಯೋಚನೆ ಬಂತು. ಆಗ ಅವರನ್ನ ಕರೆದೊಯ್ದು ಆ ಕೆಲಸ ಹಚ್ಚಿಸಿದೆ. ಇಬ್ಬಿಬ್ಬರಿರುವ ತಂಡಗಳನ್ನ ಮಾಡಿ ಸಮಾಧಿ ರಚಿಸುವ ಕೆಲಸ ಮಾಡಿಸಿದೆ ಎನ್ನುವ ಅಲ್ಲಿನ ಸ್ಥಳೀಯ ಅಧಿಕಾರಿ, ಈ ಶಿಕ್ಷೆಯಿಂದ ಜನರು ಕೋವಿಡ್ ಬಗ್ಗೆ ಹೆಚ್ಚು ಜಾಗೃತರಾಗಲು ಸಾಧ್ಯವಾಗಬಹುದು ಎಂದು ಆಶಿಸಿದ್ದಾರೆ.


  ಇದನ್ನೂ ಓದಿ: ಐತಿಹಾಸಿಕ ಮಣ್ಣೆ ಗ್ರಾಮಕ್ಕೆ ಪುರಾತತ್ವ ತಜ್ಞರ ಭೇಟಿ; ನ್ಯೂಸ್18 ವರದಿ ಫಲಶೃತಿ


  ಸುಮಾರು 27 ಕೋಟಿ ಜನಸಂಖ್ಯೆ ಇರುವ ಇಂಡೋನೇಷ್ಯಾದಲ್ಲಿ ಈವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 3.1 ಲಕ್ಷ.  ಹನ್ನೊಂದು ಸಾವಿರಕ್ಕೂ ತುಸು ಹೆಚ್ಚು ಸಾವುಗಳು ಸಂಭವಿಸಿವೆ. ಆದರೆ, ಇತ್ತೀಚೆಗೆ ಇಲ್ಲಿ ಹೆಚ್ಚೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ಏಳೆಂಟು ದಿನಗಳಿಂದ ಇಲ್ಲಿ ನಿತ್ಯ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ, ಇಲ್ಲಿನ ಆಡಳಿತ ಈಗ ಕೋವಿಡ್ ನಿಯಂತ್ರಣದ ಮಾರ್ಗೋಪಾಯಗಳನ್ನ ಹುಡುಕುತ್ತಿದೆ. ದೇಶಾದ್ಯಂತ ವಿವಿಧ ನಿರ್ಬಂಧಗಳ ಮೂಲಕ ಕೊರೋನಾ ಪ್ರಸರಣಕ್ಕೆ ತಡೆ ಹಾಕುವ ಪ್ರಯತ್ನ ಮಾಡುತ್ತಿದೆ.

  Published by:Vijayasarthy SN
  First published: