ಕೊರೋನಾ ವಿರುದ್ಧ ಹೋರಾಡುತ್ತಿದ್ದ ಪೊಲೀಸರಲ್ಲಿ ಆತಂಕ: ಪುಲಿಕೇಶಿನಗರ ಸಂಚಾರ ಠಾಣೆಯ ಎಲ್ಲಾ ಸಿಬ್ಬಂದಿಗೆ ಕೋವಿಡ್​ ಟೆಸ್ಟ್

ಸೋಂಕಿತ ಕಾನ್ಸ್​ಟೇಬಲ್​ ಕರ್ತವ್ಯಕ್ಕೆ ಬರುವ ವೇಳೆ ಆದೇ ಠಾಣೆಯ ಮಹಿಳಾ ಕಾನ್ಸ್​ಟೇಬಲ್​ ಒಬ್ಬರನ್ನು ತಮ್ಮ ಬೈಕ್ ನಲ್ಲಿ ಪಿಕಪ್ ಡ್ರಾಪ್ ಮಾಡುತ್ತಿದ್ದರಂತೆ.

news18-kannada
Updated:May 23, 2020, 12:40 PM IST
ಕೊರೋನಾ ವಿರುದ್ಧ ಹೋರಾಡುತ್ತಿದ್ದ ಪೊಲೀಸರಲ್ಲಿ ಆತಂಕ: ಪುಲಿಕೇಶಿನಗರ ಸಂಚಾರ ಠಾಣೆಯ ಎಲ್ಲಾ ಸಿಬ್ಬಂದಿಗೆ ಕೋವಿಡ್​ ಟೆಸ್ಟ್
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆಯಲು ಪೊಲೀಸರು ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳು ಮಡದಿಯನ್ನ ತೊರೆದು ದಿನಗಟ್ಟಲೆ ರಸ್ತೆಗಳಲ್ಲಿ ನಿಂತು ಸಾರ್ವಜನಿಕರ ಜೀವ ಉಳಿಸೋ ಮಹತ್ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೊರೋನಾ ಸೊಂಕು ತಡೆಯಲು ಶ್ರಮಿಸುತ್ತಿರುವ ಖಾಕಿಗೆ ಕೊರೋನಾ ಕಂಟಕ ಶುರುವಾಗಿದೆ.

ನಗರದ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್​ಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ. ಪೇದೆಗೆ ಪಾಸಿಟಿವ್ ವರದಿಯಾಗ್ತಿದ್ದಂತೆ ಠಾಣೆಯ ಎಲ್ಲಾ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗ್ತಿದೆ. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಇನ್ಸ್‌ಪೆಕ್ಟರ್ ಎಸ್ಐಗಳು, ಎಎಸ್ಐಗಳು ಸೇರಿ ಎಲ್ಲ ಸಿಬ್ಬಂದಿಗೆ ಕೊವೀಡ್ ಟೆಸ್ಟ್ ಮಾಡಲಾಗ್ತಿದೆ.

ನಿನ್ನೆ ಒಂದಷ್ಟು ಸಿಬ್ಬಂದಿಗೆ ಟೆಸ್ಟ್‌ ಮಾಡಿರೋ ವೈದ್ಯರು ಇಂದು ಉಳಿದ ಸಿಬ್ಬಂದಿಯ ಗಂಟಲು ದ್ರವ್ಯ ಪಡೆದು ತಪಾಸಣೆ ನಡೆಸಲು ಮುಂದಾಗಿದ್ದಾರೆ. ಇದೇ ವೇಳೆ ತಮ್ಮ ಠಾಣೆಯ ಪೇದೆಗೆ ಪಾಸಿಟಿವ್ ಬಂದಿರೋದು ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಹಲವು ಸಿಬ್ಬಂದಿಗಳ ಎದೆಯಲ್ಲಿ ನಡುಕ ಉಂಟು ಮಾಡಿದೆ.

ಇದನ್ನೂ ಓದಿ: ಸಿಗರೇಟ್​​ ಪ್ರಕರಣ: ಮಧ್ಯವರ್ತಿಗಳ ಮಾತು ಕೇಳಿ ಕೆಟ್ಟ ಪೊಲೀಸ್​​ ಅಧಿಕಾರಿಗಳು; ವಾಟ್ಸಪ್​​ ಕಾಲ್​​ ಮೂಲಕವೇ ನಡೆದಿತ್ತು ಕೋಟಿ ಕೋಟಿ ಡೀಲ್​​

ಇನ್ನೂ ಸಂಚಾರಿ ಕಾನ್ಸ್​ಟೇಬಲ್​ ಟ್ರಾವೆಲ್ ಹಿಸ್ಟರಿ ಕಲೆ ಹಾಕಲು ಆರೋಗ್ಯ ಇಲಾಖೆ ಆಧಿಕಾರಿಗಳು ಮುಂದಾಗಿದ್ದಾರೆ. ಸೋಂಕಿತ ಕಾನ್ಸ್​ಟೇಬಲ್​ ಠಾಣಾ ವ್ಯಾಪ್ತಿಯ ಹಲವೆಡೆ ಕರ್ತವ್ಯ ನಿರ್ವಹಿಸಿದ್ದು ಆತನ ಜೊತೆ ಸಂಪರ್ಕ ಹೊಂದಿದ ವ್ಯಕ್ತಿಗಳ ಪತ್ತೆ ಹಚ್ವೋ ಕೆಲಸವನ್ನ ಆಧಿಕಾರಿಗಳು ಮಾಡ್ತಿದ್ದಾರೆ. ಅಲ್ಲದೇ ಸೋಂಕಿತ ಕಾನ್ಸ್​ಟೇಬಲ್​ ಕರ್ತವ್ಯಕ್ಕೆ ಬರುವ ವೇಳೆ ಆದೇ ಠಾಣೆಯ ಮಹಿಳಾ ಕಾನ್ಸ್​ಟೇಬಲ್​ ಒಬ್ಬರನ್ನು ತಮ್ಮ ಬೈಕ್ ನಲ್ಲಿ ಪಿಕಪ್ ಡ್ರಾಪ್ ಮಾಡುತ್ತಿದ್ದರಂತೆ.

ಇದನ್ನೂ ಓದಿ: ಹೊಸ ಕೈದಿಗಳ ಆಗಮನದಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಆತಂಕ; ಮಹಿಳಾ ಜೈಲಿನಲ್ಲೇ ಹೊಸಬರ ಕ್ವಾರಂಟೈನ್

ಈಗಾಗಲೇ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಮಹಿಳಾ ಕಾನ್ಸ್​ಟೇಬಲ್​ ಸೇರಿ‌ ಸೋಂಕಿತನ ಜೊತೆ ಸಂಪರ್ಕದಲ್ಲಿದ್ದ 20 ಜನರನ್ನ ಕ್ವಾರಂಟೈನ್ ಮಾಡಿದ್ದಾರೆ. ಸದ್ಯ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣೆ ಸ್ಯಾನಿಟೈಸರ್ ಮಾಡಿರೋ ಬಿಬಿಎಂಪಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ. ಆದರೆ ಠಾಣೆಯ ಸಿಬ್ಬಂದಿಗಳ ಕೊವೀಡ್ ಟೆಸ್ಟ್‌ ನಡೆಯುತ್ತಿದ್ದು ಅದರ ರಿಪೋರ್ಟ್ ಬರುವವರೆಗೂ ಆತಂಕ ತಪ್ಪಿದ್ದಲ್ಲ.
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading