• ಹೋಂ
  • »
  • ನ್ಯೂಸ್
  • »
  • Corona
  • »
  • ದಕ್ಷಿಣ ಕನ್ನಡ: ಕೋವಿಡ್​​-19 ಆತಂಕದ ನಡುವೆ ನಡೆದ‌ ಪಿಯು ಪರೀಕ್ಷೆ

ದಕ್ಷಿಣ ಕನ್ನಡ: ಕೋವಿಡ್​​-19 ಆತಂಕದ ನಡುವೆ ನಡೆದ‌ ಪಿಯು ಪರೀಕ್ಷೆ

ಪಿಯುಸಿ ಪರೀಕ್ಷೆ

ಪಿಯುಸಿ ಪರೀಕ್ಷೆ

ವಿದ್ಯಾರ್ಥಿಗಳು ಗುಂಪಾಗಿ ಸೇರುತ್ತಿರುವ ದೃಶ್ಯಗಳು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕಂಡು ಬಂದಿದ್ದು, ಮಕ್ಕಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವೊಲಿಸುವುದು ಕಷ್ಟ ಸಾಧ್ಯ ಅನ್ನೋದು ಇಂದು ನಡೆದ ಪರೀಕ್ಷೆಯನ್ನು ಗಮನಿಸಿದಾಗಿ ತಿಳಿದುಬಂದಿದೆ.

  • Share this:

ಪುತ್ತೂರು(ಜೂ.18): ಕೊರೋನಾ ಲಾಕ್​​ಡೌನ್​ ಕಾರಣದಿಂದ ಮುಂದೂಡಲ್ಪಟ್ಟಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಇಂದು ರಾಜ್ಯಾದ್ಯಂತ ನಡೆಸಲಾಗಿದೆ. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ 26,942 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.


ಇಂದು ಬೆಳಿಗ್ಗೆ 8.30ಕ್ಕೆ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ಸೂಚನೆಯನ್ನೂ ನೀಡಲಾಗಿತ್ತು. ಪರೀಕ್ಷೆ ಆರಂಭದ ಮುಂಚಿತವಾಗಿ ಎಲ್ಲಾ ವಿದ್ಯಾರ್ಥಿಗಳ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವಿತರಣೆ ನಡೆಸುವ ನಿಟ್ಟಿನಲ್ಲಿ ಈ ಸೂಚನೆಯನ್ನು ನೀಡಲಾಗಿತ್ತು. ಆದರೆ ಪುತ್ತೂರಿನ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಥರ್ಮಲ್ ಸ್ಕ್ಯಾನಿಂಗ್ ನಡೆಸಿಲ್ಲ ಎಂದು ಆರೋಪಿಸಲಾಗಿದೆ.


ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಸಂದರ್ಭದಲ್ಲಿ ಮಳೆಯಿದ್ದ ಪರಿಣಾಮ ಹೆಚ್ಚಿನ ವಿದ್ಯಾರ್ಥಿಗಳು ಮಳೆಗೆ ನಿಲ್ಲಲು ಜಾಗವಿಲ್ಲದೆ ಗುಂಪಾಗಿ ಸೇರಿದ್ದು, ಸಾಮಾಜಿಕ ಅಂತರ ಮಾಯವಾಗಿತ್ತು. ಅಲ್ಲದೆ ಥರ್ಮಲ್ ಸ್ಕ್ಯಾನಿಂಗನ್ನೂ ಸರಿಯಾಗಿ ಮಾಡಿಲ್ಲ ಎನ್ನುವ ಆರೋಪ ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ.


ಇದನ್ನೂ ಓದಿ: ‘ಮಾಜಿ ಮತ್ತು ಹಾಲಿ ರಕ್ಷಣಾ ಅಧಿಕಾರಿಗಳ ಸಲಹೆ ಮೇರೆಗೆ ಭಾರತ ಚೀನಾ ವಿರುದ್ಧ ಹೋರಾಡಬೇಕು‘ - ಎಂಬಿ ಪಾಟೀಲ್​​


ವಿದ್ಯಾರ್ಥಿಗಳು ಗುಂಪಾಗಿ ಸೇರುತ್ತಿರುವ ದೃಶ್ಯಗಳು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕಂಡು ಬಂದಿದ್ದು, ಮಕ್ಕಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವೊಲಿಸುವುದು ಕಷ್ಟ ಸಾಧ್ಯ ಅನ್ನೋದು ಇಂದು ನಡೆದ ಪರೀಕ್ಷೆಯನ್ನು ಗಮನಿಸಿದಾಗಿ ತಿಳಿದುಬಂದಿದೆ.


ಪಿಯುಸಿ ವಿದ್ಯಾರ್ಥಿಗಳೇ ಸಾಮಾಜಿಕ ಅಂತರದಂತಹ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದ ಕಾರಣ ಮುಂದೆ ಎಸ್.ಎಸ್‌.ಎಲ್.ಸಿ ಪರೀಕ್ಷೆಯನ್ನು ಸರಕಾರ ಹೇಗೆ ನಿರ್ವಹಿಸಲಿದೆ ಎನ್ನುವ ಪ್ರಶ್ನೆಗಳೂ ಪೋಷಕರಿಂದ ಕೇಳಿ ಬರಲಾರಂಭಿಸಿದೆ.

top videos
    First published: