ರಾಯಚೂರಲ್ಲಿ ನಿರ್ಗತಿಕರಿಗೆ ಊಟ ನೀಡಿ ಮಾನವೀಯತೆ ಮೆರೆದ ಸಾರ್ವಜನಿಕರು

ರಾಯಚೂರು ನಗರದ ಶಶಿಧರ ಗಡಗಿ ಹಾಗೂ ಸುರೇಶ ಎಂಬಿಬ್ಬರು ವ್ಯಾಪಾರಸ್ಥರು ನಿತ್ಯ 60ಕ್ಕೂ ಅಧಿಕ ಪಾಕೆಟ್​ಗಳನ್ನು ಭಿಕ್ಷುಕರು, ನಿರ್ಗತಿಕರು ಹಾಗು ಊರಿಂದ ಬಂದು ಊಟ ಸಿಗದೆ ಇರುವವರೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ನಿರ್ಗತಿಕರಿಗೆ ಆಹಾರ ನೀಡುತ್ತಿರುವ ಸಾರ್ವಜನಿಕರು

ನಿರ್ಗತಿಕರಿಗೆ ಆಹಾರ ನೀಡುತ್ತಿರುವ ಸಾರ್ವಜನಿಕರು

  • Share this:
ರಾಯಚೂರು(ಮಾ. 24): ಕೊರೊನಾ ಭೀತಿ ಹಿನ್ನೆಲೆ ಇಡೀ ರಾಜ್ಯ ಲಾಕ್ ಔಟ್ ಆಗಿದೆ. ಈ ಮಧ್ಯೆ ರಾಯಚೂರು ನಗರ ಸೇರಿದಂತೆ ಇಡೀ ಜಿಲ್ಲೆ ಸ್ತಬ್ಧವಾಗಿದೆ. ಈ ಮಧ್ಯೆ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಜನರ ಸಂಚಾರವಿಲ್ಲದೆ ನಗರ ಬಿಕೋ ಎನ್ನುತ್ತಿದೆ. ಈ ವೇಳೆ, ರಾಯಚೂರು ನಗರದ ಶಶಿಧರ ಗಡಗಿ ಹಾಗೂ ಸುರೇಶ ಎಂಬಿಬ್ಬರು ವ್ಯಾಪಾರಸ್ಥರು ನಿತ್ಯ 60ಕ್ಕೂ ಅಧಿಕ ಪಾಕೆಟ್​ಗಳನ್ನು ಭಿಕ್ಷುಕರು, ನಿರ್ಗತಿಕರು ಹಾಗು ಊರಿಂದ ಬಂದು ಊಟ ಸಿಗದೆ ಇರುವವರೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ಮಧ್ಯೆ ನಗರದಲ್ಲಿ ರಸ್ತೆಯಲ್ಲಿ ಜನರು ಓಡಾಡದಂತೆ ಕ್ರಮ ಕೈಗೊಳ್ಳುವ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗು ಮಾಧ್ಯಮದವರಿಗೂ ಸುಖರಾಜ ಬೋಹ್ರಾ ಎಂಬುವವರು ಕುಡಿಯುವ ನೀರು, ಕಾಫಿ ನೀಡಿ ತಮ್ಮ ಸೇವೆ ಮಾಡಿದ್ದಾರೆ.

ಈ ಮಧ್ಯೆ ನಗರದಲ್ಲಿ ಎಲ್ಲರಿಗೂ ಮಾಸ್ಕ್ ಸಿಗುತ್ತಿಲ್ಲ, ಈ ಸಂದರ್ಭದಲ್ಲಿ ಮಹ್ಮದ್ ಮಸ್ತಾನ ಎಂಬುವವರು 500 ಬಟ್ಟೆಗಳಿಂದ ಮಾಸ್ಕ್ ಗಳನ್ನು ತಯಾರಿಸಿ ನಾಗರಿಕರಿಗೆ ಹಂಚುತ್ತಿದ್ದಾರೆ. ಇದು ಸ್ವಚ್ಛ ಮಾಡಬಹುದಾದ ಮಾಸ್ ಆಗಿದ್ದು , ಆಗಾಗ ಡೆಟಾಲ್ ಹಾಕಿ ಸ್ವಚ್ಛ ಮಾಡಿಕೊಳ್ಳಬಹುದು. ವೃತ್ತಿಯಲ್ಲಿ ಟೈಲರ್ ಆಗಿರುವ ಇವರು ಈಗ ತನ್ನ ದುಡಿಮೆಯಲ್ಲಿ ಅವಶ್ಯವಿದ್ದರಿಗೆ ಮಾಸ್ಕ ನೀಡುತ್ತಿದ್ದಾರೆ. ಈ ದರ್ಜಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೋನಾ ಕರ್ಫ್ಯೂ; ಲಾಠಿ ಮೂಲಕ ಜನದಟ್ಟಣೆ ನಿಯಂತ್ರಣ - ಹಲವೆಡೆ ಔಷಧ ಸಿಂಪಡಣೆ

ಒಟ್ಟಾರೆಯಾಗಿ ಜನರ ಕೊರೊನಾ ಭೀತಿಯ ಮಧ್ಯೆ ಕೆಲವರು ಮಾನವೀಯತೆ ಮೆರೆದಿದ್ದಾರೆ. ಸಂಕಷ್ಟ ಸ್ಥಿತಿಯಲ್ಲಿ ಜನರ ಸ್ಪಂದನೆ, ಮಾನವೀಯತೆ, ಜಾತಿ ಧರ್ಮ ಮತ ಭೇದವಿಲ್ಲದೇ ಕಷ್ಟದಲ್ಲಿ ಭಾಗಿಯಾಗುವ ಸಂದೇಶ ಸಾರುತ್ತಿರುವುದು ವಿಶೇಷವಾಗಿದೆ.
First published: