• ಹೋಂ
  • »
  • ನ್ಯೂಸ್
  • »
  • Corona
  • »
  • ಆನೇಕಲ್​​ನಲ್ಲಿ ಕೊರೋನಾ ನಡುವೆ ಕಸದ ಕಾಟಕ್ಕೆ ಬೇಸತ್ತ ಜನ: ಟೈರ್​ಗೆ ಬೆಂಕಿ ಹಚ್ಚಿ ಗ್ರಾಮಸ್ಥರ ಪ್ರತಿಭಟನೆ

ಆನೇಕಲ್​​ನಲ್ಲಿ ಕೊರೋನಾ ನಡುವೆ ಕಸದ ಕಾಟಕ್ಕೆ ಬೇಸತ್ತ ಜನ: ಟೈರ್​ಗೆ ಬೆಂಕಿ ಹಚ್ಚಿ ಗ್ರಾಮಸ್ಥರ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಿಬಿಎಂಪಿ ಕಸ ಸಂಸ್ಕರಣ ಘಟಕದಲ್ಲಿ ಅವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡುವುದರಿಂದ ಅಂರ್ತಜಲ, ಸುತ್ತಮುತ್ತಲಿನ ಪರಿಸರ ಸೇರಿದಂತೆ ಇಡೀ ವಾತಾವರಣ ಕಲುಷಿತಗೊಂಡಿದೆ. ಹಲವು ಬಾರಿ ದೂರು ನೀಡಿದ್ರು ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

  • Share this:

ಆನೇಕಲ್(ಜು.12): ಮಾರಕ ಕೊರೋನಾ ಹಾವಳಿ ಆತಂಕದಲ್ಲೇ ಜನ ದಿನ ಕಳೆಯುತ್ತಿದ್ದಾರೆ. ಇದರ ನಡುವೆ ನಗರದ ಬಿಬಿಎಂಪಿ ಕಸ ಇಲ್ಲಿನ ಜನರ ನಿದ್ದೆಗೆಡಿಸಿದೆ. ಹಲವು ಬಾರಿ ಮನವಿ ಮಾಡಿದರೂ ವಿವಿಧ ಅಧಿಕಾರಿಗಳು ಸ್ಪಂದಿಸದ ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು ಟೈರ್​ಗಳಿಗೆ ಬೆಂಕಿ ಹಚ್ಚಿ, ಬಿಬಿಎಂಪಿ ಕಸದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  


ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ಗ್ರಾಮಸ್ಥರು ಬಿಬಿಎಂಪಿ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಹಲವು ದಿನಗಳಿಂದ ಸುರಿದ ಮಳೆ ನೀರಿನ‌ ಜೊತೆ ಗ್ರಾಮದ ಬಳಿ ಇರುವ ಬಿಬಿಎಂಪಿ ಕಸ ಸಂಸ್ಕರಣ ಘಟಕದಿಂದ ತ್ಯಾಜ್ಯ ನೀರನ್ನು ಕೆರೆ ಕುಂಟೆ ಕಾಲುವೆಗಳಿಗೆ ಹರಿ ಬಿಡಲಾಗಿತ್ತು. ಇದರಿಂದ ಇಡೀ ವಾತಾವರಣ ಕಲುಷಿತಗೊಂಡು ಗಬ್ಬುನಾರುತ್ತಿತ್ತು. ಈ ಬಗ್ಗೆ ಬಿಬಿಎಂಪಿ ಅಧಿಗಳ ಗಮನಕ್ಕೆ ತಂದರು ಪ್ರಯೋಜನವಾಗಿರಲಿಲ್ಲ.


ಎಲ್ಲಿ ನೋಡಿದರು ಬೀರುತ್ತಿದ್ದ ದುರ್ನಾತದಿಂದ  ಹಳ್ಳಿ ಜನ ನೆಮ್ಮದಿಯಿಂದ ಜೀವನ ನಡೆಸಲು ಕಷ್ಟವಾಗಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕೈಯಲ್ಲಿ ಪೆಟ್ರೋಲ್, ಡಿಸೇಲ್ ಮತ್ತು ಸೀಮೆಎಣ್ಣೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿದರು ಹಟಕ್ಕೆ ಬಿದ್ದ ಗ್ರಾಮಸ್ಥರು ಪೊಲೀಸರ ವಾಗ್ವಾದ ನಡೆಸಿದ್ದಾರೆ. ಸ್ಥಳಕ್ಕೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ಭೇಟಿ ನೀಡುವಂತೆ ಪಟ್ಟು ಹಿಡಿದಿದ್ದರು.


ಇದನ್ನೂ ಓದಿ: ಕೊಡಗಿನಲ್ಲಿ ಮಾರಕ ಕೊರೋನಾಗೆ ಎರಡನೇ ಬಲಿ: ಸೋಂಕಿತರ ಸಂಖ್ಯೆ 156ಕ್ಕೆ ಏರಿಕೆ


ಬಿಬಿಎಂಪಿ ಕಸ ಸಂಸ್ಕರಣ ಘಟಕದಲ್ಲಿ ಅವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡುವುದರಿಂದ ಅಂರ್ತಜಲ, ಸುತ್ತಮುತ್ತಲಿನ ಪರಿಸರ ಸೇರಿದಂತೆ ಇಡೀ ವಾತಾವರಣ ಕಲುಷಿತಗೊಂಡಿದೆ. ಹಲವು ಬಾರಿ ದೂರು ನೀಡಿದ್ರು ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಬಿಬಿಎಂಪಿ ಚಿಕ್ಕನಾಗಮಂಗಲ ಕಸ ಸಂಸ್ಕರಣ ಘಟಕವನ್ನು ಸ್ಥಳಾಂತರ ಮಾಡಬೇಕು. ಮತ್ತು ಕಲುಷಿತಗೊಂಡಿರುವ ನೀರಿನ ಮೂಲಗಳನ್ನು ಶುದ್ಧೀಕರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕೊನೆಗೆ ಪೊಲೀಸರ ಮನವೊಲಿಕೆ ಬಳಿಕ ಪೊಲೀಸರು ಪ್ರತಿಭಟನೆ ನಿಲ್ಲಿಸಿದ್ದಾರೆ.

Published by:Ganesh Nachikethu
First published: