HOME » NEWS » Coronavirus-latest-news » PROGESTERONE FEMALE HORMONE PROGESTERONE TREATMENT COULD SAVE MEN FROM COVID 19 DEATH STUDY SAYS STG SCT

Progesterone: ಮಹಿಳೆಯರ ಪ್ರೊಜೆಸ್ಟೆರೋನ್‌ ಹಾರ್ಮೋನ್​ನಿಂದ ಕೊರೋನಾ ಸೋಂಕಿತ ಪುರುಷರನ್ನು ಬದುಕಿಸಬಹುದು!

ಮಹಿಳೆಯರಲ್ಲಿ ಉತ್ಪತ್ತಿಯಾಗುವ ಸೆಕ್ಸ್ ಹಾರ್ಮೋನ್ ಪ್ರೊಜೆಸ್ಟೆರೋನ್‌​ ಇಂಜೆಕ್ಟ್​​ ಮಾಡುವುದರಿಂದ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಪುರುಷರ ಆರೋಗ್ಯದಲ್ಲಿ ಸುಧಾರಣೆ ತರಬಹುದು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

news18-kannada
Updated:March 23, 2021, 3:39 PM IST
Progesterone: ಮಹಿಳೆಯರ ಪ್ರೊಜೆಸ್ಟೆರೋನ್‌ ಹಾರ್ಮೋನ್​ನಿಂದ ಕೊರೋನಾ ಸೋಂಕಿತ ಪುರುಷರನ್ನು ಬದುಕಿಸಬಹುದು!
ಸಾಂದರ್ಭಿಕ ಚಿತ್ರ
  • Share this:
ಕೋವಿಡ್​- 19ಗೆ ಭಾರತ ಈಗಾಗಲೇ ಲಸಿಕೆ ಕಂಡುಕೊಂಡಿದೆ. ಇದರ ಜೊತೆಗೆ ದೇಶ ವಿದೇಶಗಳೂ ಸಹ ಲಸಿಕೆಯನ್ನು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಮನುಷ್ಯರ ದೇಹದಲ್ಲಿ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎನ್ನುವುದನ್ನು ಸಾಕಷ್ಟು ಬಾರಿ ಕೇಳಿದ್ದೇವೆ. ಇದೇ ಹಿನ್ನೆಲೆಯಲ್ಲಿ ಈಗ ಅಮೆರಿಕದ ಕ್ಯಾಲಿಫೋರ್ನಿಯಾ ಮಹಿಳೆಯರಲ್ಲಿ ಉತ್ಪತ್ತಿಯಾಗುವ ಪ್ರೊಜೆಸ್ಟೆರೋನ್‌​ ಹಾರ್ಮೋನ್ ಮೂಲಕ ಕೋವಿಡ್​ ಸೋಂಕಿತ ಪುರುಷರನ್ನು ಕಾಪಾಡಬಹುದು ಎನ್ನುವ ಆಶ್ಚರ್ಯಕಾರಿ ಅಂಶವನ್ನು ಸಂಶೋಧನೆಗಳ ಮೂಲಕ ಬಹಿರಂಗಪಡಿಸಿದೆ.

ಮಹಿಳೆಯರಲ್ಲಿ ಉತ್ಪತ್ತಿಯಾಗುವ ಸೆಕ್ಸ್ ಹಾರ್ಮೋನ್ ಪ್ರೊಜೆಸ್ಟೆರೋನ್‌​ ಇಂಜೆಕ್ಟ್​​ ಮಾಡುವುದರಿಂದ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಪುರುಷರ ಆರೋಗ್ಯದಲ್ಲಿ ಸುಧಾರಣೆ ತರಬಹುದು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಕ್ಯಾಲಿಫೋರ್ನಿಯಾದಲ್ಲಿರುವ ತಂಡವೊಂದು ಈ ಕುರಿತು ಅಧ್ಯಯನ ನಡೆಸಿದೆ. ಪ್ರೊಜೆಸ್ಟೆರೋನ್‌​ ಆಂಟಿ ಇನ್​ಫ್ಲಮೇಟರಿ ಅಂದರೆ ಊರಿಯೂತ ಕಡಿಮೆಗೊಳಿಸುವ ಅಂಶವನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಕೋವಿಡ್​ನಿಂದ ಉಂಟಾಗುವ ಮಾರಣಾಂತಿಕ ಸಂದರ್ಭಗಳನ್ನು ಈ ಪ್ರೊಜೆಸ್ಟೆರೋನ್‌ ಇಂಜೆಕ್ಷನ್ ಮೂಲಕ ನಿಯಂತ್ರಿಸಬಹುದು ಎಂದಿದ್ದಾರೆ.

ಲಾಸ್​ ಏಂಜಲೀಸ್​ನ ಸೇಡಾರ್ ಸಿನಾಯೈ ಆಸ್ಪತ್ರೆಯ ಶ್ವಾಸಕೋಶ ತಜ್ಞರಾದ ಸಾರಾ ಘಂಡೇರಿ ಮತ್ತು ಅವರ ಸಹೋದ್ಯೋಗಿಗಳು 40 ಪುರುಷ ರೋಗಿಗಳ ಮೇಲೆ ಈ ಅಧ್ಯಯನ ನಡೆಸಿದ್ದಾರೆ. 'ಚೆಸ್ಟ್' ಎನ್ನುವ ಆನ್​ಲೈನ್ ಪತ್ರಿಕೆ ಈ ಸಂಶೋಧನೆಯ ಬಗ್ಗೆ ಪ್ರಕಟಿಸಿದೆ.

ಈ ಬಗ್ಗೆ ಮಾತನಾಡಿರುವ ಘಂಡೇರಿಯವರು ವೈರಸ್ ಮಹಿಳೆ ಮತ್ತು ಪುರುಷ ರೋಗಿಗಳಲ್ಲಿ ವಿಭಿನ್ನ ಪರಿಣಾಮವನ್ನು ಉಂಟು ಮಾಡುತ್ತಿದೆ ಇದು ಆಶ್ಚರ್ಯಕರವಾಗಿದೆ ಎಂದಿದ್ದಾರೆ. ಅಲ್ಲದೇ ಈ ನಿಟ್ಟಿನಲ್ಲಿ ಆಸ್ಪತ್ರೆಯ ಚಿಕಿತ್ಸೆಯ ಅಗತ್ಯ ಬೀಳುತ್ತದೆ. ಜೊತೆಗೆ ವೆಂಟಿಲೇಟರ್​ಗಳು ಬೇಕಾಗುತ್ತವೆ ಎಂದಿದ್ದಾರೆ.

ಇದನ್ನೂ ಓದಿ: Karnataka Coronavirus: ಕರ್ನಾಟಕದಲ್ಲಿ ಕೇರಳ, ಮಹಾರಾಷ್ಟ್ರ, ಪಂಜಾಬ್ ಪ್ರಯಾಣಿಕರಿಗಿರುವ ಕೊರೋನಾ ನಿಯಮ ತಮಿಳುನಾಡಿನವರಿಗೆ ಯಾಕಿಲ್ಲ?

ಇನ್ನು, ಪ್ರೊಜೆಸ್ಟೆರೋನ್‌​​ ಹಾರ್ಮೋನ್ ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಉತ್ಪತ್ತಿಯಾಗುತ್ತದೆ. ಅದರಲ್ಲೂ ರಿಪ್ರೊಡಕ್ಟೀವ್ ಸಮಯದಲ್ಲಿ ಇದು ಇನ್ನೂ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲದೇ ಮೆನೋಪಾಸ್​ ದಾಟಿದವರಿಗಿಂತಲೂ ಮೆನೋಪಾಸ್ ಸಮೀಪದಲ್ಲಿರುವ ಮಹಿಳೆಯರು ಕೋವಿಡ್​ ಸೋಂಕಿಗೆ ಹೆಚ್ಚು ತುತ್ತಾಗಿಲ್ಲ ಎಂದು ಪರಿಣಿತರು ವಿಶ್ಲೇಷಿಸಿದ್ದಾರೆ.

40 ಜನ ಪುರುಷರನ್ನೊಳಗೊಂಡ ಎರಡು ಪುರುಷರ ತಂಡವನ್ನು ಕ್ಲಿನಿಕಲ್ ಪ್ರಯೋಗಕ್ಕೆ ಒಳಪಡಿಸಲಾಯಿತು. ಇದರಲ್ಲಿ ಒಂದು ಗುಂಪಿನ ಪುರುಷರಿಗೆ ಸಾಮಾನ್ಯವಾದ ಕೋವಿಡ್ ಚಿಕಿತ್ಸೆಯನ್ನು ನೀಡಲಾಯಿತು. ಇನ್ನೊಂದು ಗುಂಪಿಗೆ ಪ್ರತಿದಿನ ಎರಡು ಬಾರಿಯಂತೆ 5 ದಿನ 100 ಮಿಲಿಗ್ರಾಂ ಪ್ರೊಜೆಸ್ಟೆರೋನ್‌​ ಇಂಜೆಕ್ಷನ್ ನೀಡಲಾಯಿತು. ನಂತರ 15 ದಿನಗಳ ಕಾಲ ಸಂಶೋಧನ ತಂಡವು ರೋಗಿಗಳು ಡಿಸ್ಟಾರ್ಜ್​ ಆಗುವವರೆಗೂ ಅವರ ಬಗ್ಗೆ ನಿಗಾ ವಹಿಸಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ.ಕ್ಲಿನಿಕಲ್​ ಸ್ಟೇಟಸ್​ನ ಸ್ಟ್ಯಾಂಡರ್ಡ್ 7 ಪಾಯಿಂಟ್ಸ್ ಸ್ಕೇಲ್​ ನಿಂದ 1 ರವೆರೆಗೆ ಪ್ರೊಜೆಸ್ಟೆರೋನ್‌​ ಇಂಜೆಕ್ಷನ್ ಪಡೆದ ರೋಗಿಗಳು ಹೆಚ್ಚು ಗುಣಮುಖರಾಗಿದ್ದರು. ಅಷ್ಟೇ ಅಲ್ಲದೇ ಅವರಿಗೆ ಹೆಚ್ಚು ಆಕ್ಸಿಜನ್ ಅಥವಾ ವೆಂಟಿಲೇಷನ್​ನ ಅಗತ್ಯ ಬೀಳಲಿಲ್ಲ. ಜೊತೆಗೆ ಹೆಚ್ಚು ದಿನ ಆಸ್ಪತ್ರೆಯಲ್ಲಿರಬೇಕಾಗಿರಲಿಲ್ಲ.

ಆದರೆ ಈ 15 ದಿನಗಳ ಪ್ರಯೋಗದಲ್ಲಿ ಎರಡು ಗುಂಪಿನಿಂದಲೂ ಒಬ್ಬೊಬ್ಬ ರೋಗಿಗಳು ಸಾವನ್ನಪ್ಪಿದ್ದರು. ಆದರೆ ಇದು ಪ್ರಯೋಗದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದೆ ಸಂಶೋಧನಾ ತಂಡ. ಡಾ. ಘಂಡೇರಿಯವರ ಪ್ರಕಾರ, ಪ್ರೊಜೆಸ್ಟೆರೋನ್‌​​ ಚಿಕಿತ್ಸೆಯನ್ನು ಇನ್ನೂ ಹೆಚ್ಚು ಜನರ ಮೇಲೆ ಪ್ರಯೋಗಿಸಬೇಕು. ಅದರಲ್ಲೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು, ಸ್ಥೂಲಕಾಯ ಇರುವವರ ಮೇಲೆ ಅಧ್ಯಯನ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
Published by: Sushma Chakre
First published: March 23, 2021, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories