HOME » NEWS » Coronavirus-latest-news » PRO KANNADA ACTIVIST VATAL NAGARAJ SLAMS CM BS YEDIYURAPPA LED BJP GOVERNMENT GNR

‘ಬಿಜೆಪಿ ಸರ್ಕಾರ ಹುಚ್ಚಾಸ್ಪತ್ರೆ, ಸಿಎಂ ಯಡಿಯೂರಪ್ಪ ಮಾಯಾವಿ, ಸಚಿವರು ಹುಚ್ಚರು‘ - ವಾಟಾಳ್​​ ನಾಗರಾಜ್​​ ವ್ಯಂಗ್ಯ

ಸಾಲ ಮಾಡಿಯಾದರೂ ಪರಿಹಾರ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳ್ತಾರೆ. ಇವರೇನಾದರೂ ತಮ್ಮ ಮನೆಯಿಂದ ಸಾಲ ತಂದುಕೊಂಡ್ತೀರಾ ಎಂದು ಯಡಿಯೂರಪ್ಪ ವಿರುದ್ಧ ವಾಟಾಳ್​​ ನಾಗರಾಜ್​​ ವಾಗ್ದಾಳಿ ನಡೆಸಿದರು.

news18-kannada
Updated:August 28, 2020, 11:06 AM IST
‘ಬಿಜೆಪಿ ಸರ್ಕಾರ ಹುಚ್ಚಾಸ್ಪತ್ರೆ, ಸಿಎಂ ಯಡಿಯೂರಪ್ಪ ಮಾಯಾವಿ, ಸಚಿವರು ಹುಚ್ಚರು‘ - ವಾಟಾಳ್​​ ನಾಗರಾಜ್​​ ವ್ಯಂಗ್ಯ
ವಾಟಾಳ್ ನಾಗರಾಜ್
  • Share this:
ರಾಮನಗರ(ಆ.28): ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಹುಚ್ಚಾಸ್ಪತ್ರೆ ಎಂದು ಕನ್ನಡ ಪರ ಹೋರಾಟಗ ವಾಟಾಳ್​​ ನಾಗರಾಜ್​​ ವ್ಯಂಗ್ಯವಾಡಿದ್ದಾರೆ. ನಗರದ ಐಜೂರು ವೃತ್ತದಲ್ಲಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೋವಿಡ್​​​-19 ನಿರ್ವಹಿಸುವಲ್ಲಿ ಸಿಎಂ ಯಡಿಯೂರಪ್ಪ ಸಂಪುಟ ವಿಫಲವಾಗಿದ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ವಾಟಲ್​​​ ನಾಗಾರಜ್​​​​ ಬಿಜೆಪಿ ಸರ್ಕಾರವನ್ನು ಹುಚ್ಚಾಸ್ಪತ್ರೆ ಎಂದು ಕರೆದಿದ್ದಾರೆ.


ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ವಾಟಾಳ್​​ ನಾಗರಾಜ್​​​, ಯಡಿಯೂರಪ್ಪ ಸಂಪುಟ ಸಚಿವರು ಹುಚ್ಚರು. ರಾಜ್ಯ ಸರ್ಕಾರವೊಂದು ಹುಚ್ಚಾಸ್ಪತ್ರೆ. ಈ ಸರ್ಕಾರ ಕೊರೊನಾ ವಿಚಾರದಲ್ಲಿ ಎಲ್ಲದರಲ್ಲೂ ಲೂಟಿ ಮಾಡುತ್ತಿದೆ. ಸಾವಿನ ಮನೆಯಲ್ಲೂ ಲೂಟಿ ನಡೆಯುತ್ತಿದೆ. ಸರ್ಕಾರಕ್ಕೆ ಪ್ರಾಮಾಣಿಕತೆ ಇಲ್ಲ ಎಂದು ಕಿಡಿಕಾರಿದರು.

ಇನ್ನು, ರಾಜ್ಯ ಸರ್ಕಾರದ ಭ್ರಷ್ಟಚಾರದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಧ್ವನಿ ಎತ್ತುತ್ತಿಲ್ಲ. ಹೀಗಾಗಿ ಎರಡು ಪಕ್ಷಗಳಿಗೆ ಕೊರೋನಾ ವಕ್ಕರಿಸಿದೆ. ರಾಜ್ಯದ ಸಿಎಂ ಬಿಎಸ್​ ಯಡಿಯೂರಪ್ಪಗೂ ಕೊರೋನಾ ಪಾಸಿಟಿವ್, ಮೂವರು ಆರೋಗ್ಯ ಸಚಿವರಿಗೂ ಪಾಸಿಟಿವ್ ಎಂದು ಕುಹಕವಾಡಿದರು.
Youtube Video

ಮಾರಕ ಕೊರೋನಾ ವೈರಸ್​ನಿಂದ ಪ್ರತೀನಿತ್ಯ ನೂರಾರು ಜನ ಸಾಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಅದರ ಬಗ್ಗೆ ಚಿಂತೆಯೇ ಇಲ್ಲದಂತಾಗಿದೆ. ಕಳೆದ ಬಾರಿ ಪ್ರವಾಹದಲ್ಲಿ ಸಿಲುಕಿ ಎಲ್ಲವನ್ನು ಕಳೆದುಕೊಂಡ ಸಂತ್ರಸ್ತರಿಗೂ ಇನ್ನೂ ಪರಿಹಾರ ಕೊಟ್ಟಿಲ್ಲ. ಈಗ ಕೊರೋನಾ ನಿರ್ವಹಿಸಲು ಸರ್ಕಾರಕ್ಕೆ ಯೋಗ್ಯವಿಲ್ಲ. ಸಿಎಂ ಯಡಿಯೂರಪ್ಪನವರ ಸರ್ಕಾರ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನೀಟ್​​, ಜೆಇಇ ಪರೀಕ್ಷೆಗೆ ತೀವ್ರ ವಿರೋಧ - ಇಂದು ದೇಶಾದ್ಯಂತ ಕೇಂದ್ರದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆಸಾಲ ಮಾಡಿಯಾದರೂ ಪರಿಹಾರ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳ್ತಾರೆ. ಇವರೇನಾದರೂ ತಮ್ಮ ಮನೆಯಿಂದ ಸಾಲ ತಂದುಕೊಂಡ್ತೀರಾ ಎಂದು ಯಡಿಯೂರಪ್ಪ ವಿರುದ್ಧ ವಾಟಾಳ್​​ ನಾಗರಾಜ್​​ ವಾಗ್ದಾಳಿ ನಡೆಸಿದರು.
Published by: Ganesh Nachikethu
First published: August 28, 2020, 10:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories