‘ಸರ್ಕಾರ ನಿರ್ದೇಶನದಂತೆ ಮಾತ್ರ ಖಾಸಗಿ ಶಾಲೆಗಳು ಶುಲ್ಕ ಪಡೆಯಬೇಕು‘ - ಸಚಿವ ಗೋಪಾಲಯ್ಯ

ಖಾಸಗಿ ಶಾಲೆಗಳಲ್ಲಿ ಮಾಸಿಕ ಶುಲ್ಕವನ್ನು ಆಯಾ ತಿಂಗಳಲ್ಲಿ ಹಿಂದೆ ನೀಡಲಾಗುತ್ತಿತ್ತು. ಆದರೀಗ ಎರಡು ಕಂತುಗಳಲ್ಲಿ ನೀಡಬೇಕು ಎಂಬುದರ ಬಗ್ಗೆ ಪೋಷಕರು ಗೊಂದಲದಲ್ಲಿ ಇದೆ. ಈ ಬಗ್ಗೆ ತಿಳಿಸುವಂತೆ ಪತ್ರಕರ್ತರ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಸರಕಾರ ನಿಗದಿ ಮಾಡಿರುವಂತೆಯೇ ಖಾಸಗಿ ಶಾಲೆಗಳು ಅನುಸರಿಸಬೇಕು ಎಂದರು.

ಸಚಿವ ಗೋಪಾಲಯ್ಯ

ಸಚಿವ ಗೋಪಾಲಯ್ಯ

  • Share this:
ಹಾಸನ(ಆ.16): ಸರ್ಕಾರದ ನಿರ್ದೇಶನದಂತೆ ಖಾಸಗಿ ಶಾಲೆಗಳು ಪೋಷಕರಿಂದ ಶುಲ್ಕ ಪಡೆಯಬೇಕು. ಏನಾದರೂ ನಿಯಮ ಮೀರಿ ಶುಲ್ಕ ಪಡೆದರೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸರಿಪಡಿಸಿಕೊಳ್ಳುವಂತೆ ಪೋಷಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮನವಿ ಮಾಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡುವ ವೇಳೆ ಹೀಗೆಂದರು ಸಚಿವರು.

ಖಾಸಗಿ ಶಾಲೆಗಳಲ್ಲಿ ಮಾಸಿಕ ಶುಲ್ಕವನ್ನು ಆಯಾ ತಿಂಗಳಲ್ಲಿ ಹಿಂದೆ ನೀಡಲಾಗುತ್ತಿತ್ತು. ಆದರೀಗ ಎರಡು ಕಂತುಗಳಲ್ಲಿ ನೀಡಬೇಕು ಎಂಬುದರ ಬಗ್ಗೆ ಪೋಷಕರು ಗೊಂದಲದಲ್ಲಿ ಇದೆ. ಈ ಬಗ್ಗೆ ತಿಳಿಸುವಂತೆ ಪತ್ರಕರ್ತರ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಸರಕಾರ ನಿಗದಿ ಮಾಡಿರುವಂತೆಯೇ ಖಾಸಗಿ ಶಾಲೆಗಳು ಅನುಸರಿಸಬೇಕು. ಏನಾದರೂ ನಿಯಮ ಮೀರಿ ಹೆಚ್ಚಿನ ಹಣ ಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೇ ಸರಿಪಡಿಸುವ ಕೆಲಸ ಮಾಡಲಿದ್ದಾರೆ ಎಂದರು ಗೋಪಾಲಯ್ಯ.

ಇಂದು ಕೊರೋನಾ ಸಂದರ್ಭದಲ್ಲಿ ಶಾಲಾ ಮಕ್ಕಳ ಪೋಷಕರು ಸೇರಿ ಪ್ರತಿಯೊಬ್ಬರು ತಮ್ಮ ಜೀವನ ನಡೆಸುವುದೇ ಕಷ್ಟವಾಗಿದೆ. ಶಾಲಾ ಮಕ್ಕಳಿಗೆ ಯಾವ ತಾರತಮ್ಯವಾಗದಂತೆ ಮತ್ತು ತೊಂದರೆಯಾಗದಂತೆ ಸರಕಾರದ ನಿರ್ದೇಶನದಂತೆ ನಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದರು.

ಮಳೆಯಿಂದ ಹಾನಿಯಾಗಿರುವ ಬಗ್ಗೆ ಈಗಾಗಲೇ ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಅರಕಲಗೂಡು ಭಾಗಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಜನಪ್ರತಿನಿಧಿಗಳು ಮನವಿ ಮಾಡಿದ್ದು, ಈ ಬಗ್ಗೆ ಸ್ಪಂದಿಸುವುದಾಗಿ ಗೋಪಾಲಯ್ಯ ಹೇಳಿದರು.

ಹಿರಿಯರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೆಲವು ದಿನಗಳ ಹಿಂದೆ ಕಾಯಿದೆ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೇನೋ ಮನವಿ ಮಾಡಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಸರ್ಕಾರ ಗಮನಿಸಲಿದೆ ಎಂದರು.

ಕೊರೋನಾ ನಿಭಾಯಿಸುವಲ್ಲಿ ಸರ್ಕಾರ ಬದ್ಧವಾಗಿದೆ. ಜೊತೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸರಕಾರದಿಂದ ಏನೇನು ಆಗಬೇಕು. ನೆನೆಗುದಿಗೆ ಬಿದ್ದಿರುವ ಕೆಲಸವನ್ನು ಯಡಿಯೂರಪ್ಪ ಸರ್ಕಾರ ಪ್ರಮಾಣಿಕವಾಗಿ ಮಾಡಲಿದೆ. ಯಾವ ಕಾರಣಕ್ಕೂ ತಾರತಮ್ಯ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಕಿರಣ್ ಕುಮಾರ್ ಸಾವಿನ ಬಗ್ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಚಿವರು, ಮುಖ್ಯಮಂತ್ರಿಗಳು ಅಲ್ಲಿನ ಘಟನೆ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ವರದಿಯನ್ನು ಪಡೆಯುತ್ತಿದ್ದಾರೆ. ಸಂಪೂರ್ಣ ವರದಿ ಪಡೆದ ನಂತರ ಸಂದರ್ಭಕ್ಕೆ ತಕ್ಕಂತೆ ನಿರ್ಧಾರವನ್ನು ಸರಕಾರವು ಮಾಡಿ ಯಾವ ನ್ಯಾಯಾಂಗ ತನಿಖೆಗೆ ಕೊಡಬಹುದು ಬಗ್ಗೆ ಕುಳಿತು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ತಕ್ಷಣವೇ ತನಿಖೆ ಮಾಡಬೇಕು ಎಂದು ಹೇಳುವವರಲ್ಲಿ ನಾನು ಒಬ್ಬನಾಗಿದ್ದೇನೆ. ಕಿರಣ್ ಕುಮಾರ್ ಒಬ್ಬ ಉತ್ತಮ ಅಧಿಕಾರಿಯಾಗಿದೆ. ನಮಗೂ ಮತ್ತು ಸರ್ಕಾರಕ್ಕೂ ಅನುಕಂಪವಿದೆ. ನಿಸ್ಪಕ್ಷಪಾತವಾಗಿ ತನಿಖೆ ಮಾಡಿಸಲು ನಾವೆಲ್ಲಾ ಸಹಕಾರ ಕೊಡಬೇಕು ಎಂದು ತಿಳಿಸಿದರು.​

ಎಸ್.ಡಿ.ಆರ್.ಪಿನಲ್ಲಿ 5 ಕೋಟಿ ರೂ. ಇದೆ. ಮಳೆಯಿಂದ ಮನೆ ಬಿದ್ದು ಹಾನಿಯಾಗಿದೆ ಅಂತ ಭಾಗಗಳನ್ನು ಗುರುತಿಸಿ ತಾತ್ಕಲಿಕವಾಗಿ ಹಣ ನೀಡುತ್ತಿದೆ. ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆ-ಗಾಳಿಗೆ ಹಾಸನ ಜಿಲ್ಲೆಯಲ್ಲಿ 334 ಮನೆಗಳು ಬಿದ್ದು ನಷ್ಟವಾಗಿರುವ ಬಗ್ಗೆ ಈಗಾಗಲೇ ವರದಿ ಬಂದಿದೆ. ಬೆಳೆ, ಮನೆ ಎಲ್ಲಾವುಗಳ ಬಗ್ಗೆ ವರದಿಯನ್ನು ಇನ್ನು ನಾಲ್ಕು ದಿವಸದಲ್ಲಿ ಪಡೆದ ಬಳಿಕ ಸರಕಾರಕ್ಕೆ ವರದಿ ಬರಲಿದೆ ಎಂದರು.

ಇದನ್ನೂ ಓದಿ: Delhi Coronavirus Update: ದೆಹಲಿಯಲ್ಲಿ ಕೋವಿಡ್​-19 ಆರ್ಭಟ: ಒಂದೇ ದಿನ 1,276 ಕೇಸ್​​ ಪತ್ತೆ, 1.5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ವರ್ಗಾವಣೆ ಬಗ್ಗೆ ಯಾರು ಮಾತನಾಡಿದ್ದಾರೆ ಅವರಿಗೆ ಕೇಳಬೇಕು. ಆಡಿಯೋ ರೆಕಾರ್ಡ್  ಅವರದ್ದಾ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀವೇ ಕೊಡಬೇಕು. ಮಾಧ್ಯಮದವರೇ ಪ್ರಶ್ನೆ ಮಾಡಿ ಯಾವುದು ಸತ್ಯ ಹಾಗೂ ಸುಳ್ಳು ಎಂಬುದನ್ನು ತಿಳಿಸಬೇಕು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರ ನೀಡುವ ಮೂಲಕ ಜಾರಿಕೊಂಡರು.
Published by:Ganesh Nachikethu
First published: