ಬೆಂಗಳೂರಿನಲ್ಲೇ ಸೆಟಲ್ ಆಗಲಿರುವ ಎನ್​ಆರ್​ಐಗಳು; ಖಾಸಗಿ ಶಾಲೆಗಳಿಗೆ ಈಗ ವಿಪರೀತ ಬೇಡಿಕೆ

ಎನ್​ ಆರ್​ಐಗಳು ಶಾಲೆಗಳಿಗೆ ಸಂಪರ್ಕಿಸಲು ಮುಂದಾಗಿರುವುದರಿಂದ ಖಾಸಗಿ ಶಾಲೆಗಳಲ್ಲಿ ಸೀಟುಗಳಿಗೆ ಬೇಡಿಕೆ ಹೆಚ್ಚಾಗಿದೆ

news18-kannada
Updated:June 1, 2020, 11:44 AM IST
ಬೆಂಗಳೂರಿನಲ್ಲೇ ಸೆಟಲ್ ಆಗಲಿರುವ ಎನ್​ಆರ್​ಐಗಳು; ಖಾಸಗಿ ಶಾಲೆಗಳಿಗೆ ಈಗ ವಿಪರೀತ ಬೇಡಿಕೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜೂ. 01): ಕೊರೋನಾ ವೈರಸ್​ ನಿಂದಾಗಿ ರಾಜ್ಯದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಹೆಚ್ಚಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಯಾವಾಗ ತೆರೆಯಬೇಕು ಎಂಬುದರ ಬಗ್ಗೆ ಸರ್ಕಾರ ಇನ್ನೂ ಚಿಂತನೆ ನಡೆಸುತ್ತಿದೆ. ಈ ಮಧ್ಯೆ ವಿದೇಶದಿಂದ ಬಂದ ಅನಿವಾಸಿ ಭಾರತೀಯರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವಿಶ್ವದ್ಯಾಂತ ಕೊರೋನಾ ಹೆಚ್ಚಳದಿಂದ ವಿದೇಶದಿಂದ ಭಾರತಕ್ಕೆ ಮರಳಿ ಬಂದವರಲ್ಲಿ ಅನೇಕರು ವಾಪಸ್ ಅಲ್ಲಿಗೆ ಹೋಗದೇ ಇಲ್ಲಿಯೇ ನೆಲೆಸಲು ನಿರ್ಧರಿಸಿದ್ಧಾರೆ. ತಮ್ಮ ಮಕ್ಕಳನ್ನು ಇಲ್ಲಿಯೇ ಉತ್ತಮ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಖಾಸಗಿ ಶಾಲೆಗಳನ್ನು ಸಂಪರ್ಕಿಸಿದ್ದಾರೆ. ಬೇರೆ ದೇಶಗಳಿಗಿಂದ ಬೆಂಗಳೂರು ಸುರಕ್ಷಿತ ಎನ್ನವ ಕಾರಣಕ್ಕೆ ಅವರು ಇಲ್ಲ ನೆಲೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಎನ್​ ಆರ್​ಐಗಳು ಶಾಲೆಗಳಿಗೆ ಸಂಪರ್ಕಿಸಲು ಮುಂದಾಗಿರುವುದರಿಂದ ಖಾಸಗಿ ಶಾಲೆಗಳಲ್ಲಿ ಸೀಟುಗಳಿಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಸರ್ಕಾರದ ಆದೇಶ ಬರುವವರಗೆ ಹೊಸದಾಗಿ ಮಕ್ಕಳನ್ನು ದಾಖಲೆ ಮಾಡಿಕೊಳ್ಳಲು ಶಾಲೆಗಳಿಗೆ ಪರವಾನಗಿ ಇಲ್ಲ. ಆದರೂ ಮೊದಲೇ ತಮ್ಮ ಮಕ್ಕಳಿಗೆ ಸೀಟ್ ಬ್ಲಾಕ್ ಮಾಡಲು ಅನಿವಾಸಿ ಭಾರತೀಯರು ಮುಂದಾಗಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 5 ಶ್ರಮಿಕ್ ರೈಲು; ತಾಯ್ನಾಡಿಗೆ 7,500 ವಲಸಿಗರು ವಾಪಸ್​​

ಶಿಕ್ಷಣ ಇಲಾಖೆ ಸರ್ಕಾರದ ಆದೇಶ ಹೊರಡಿಸುವವರೆಗೂ ಮಕ್ಕಳ ದಾಖಲಾತಿಯನ್ನು ಮಾಡಿಕೊಳ್ಳಬಾರದು ಎಂದು ಹೇಳಿದೆ. ಆದರೆ ವಿದೇಶದಿಂದ ಮರಳಿದವರು ರಾಜ್ಯದ ಅನೇಕ ಖಾಸಗಿ ಶಾಲೆಗಳನ್ನು ಗುಟ್ಟಾಗಿ ಸಂಪರ್ಕಿಸುತ್ತಿದ್ದಾರೆ ಎಂದು ಖಾಸಗಿ ಶಾಲೆಗಳ ಮೂಲಗಳು ಮಾಹಿತಿ ನೀಡುತ್ತಿವೆ.
First published: June 1, 2020, 11:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading