ನವದೆಹಲಿ(ಏ.17): ಕೊರೋನಾ ವೈರಸ್ ಲಾಕ್ಡೌನ್ ಸಮಯದಲ್ಲಿ ಯಾವುದೇ ಖಾಸಗಿ ಶಾಲೆಗೆ ಶುಲ್ಕ ಹೆಚ್ಚಿಸಲು ಅವಕಾಶವಿರುವುದಿಲ್ಲ. ಶಾಲೆಗಳು ಮತ್ತೆ ತೆರೆಯುವವರೆಗೆ ಬೋಧನಾ (ಟ್ಯುಷನ್ ಫೀ) ಶುಲ್ಕವನ್ನು ಮಾತ್ರ ವಿಧಿಸಬಹುದು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಸಮಯದಲ್ಲಿ ಖಾಸಗಿ ಶಾಲೆಗಳು ಶಾಲಾ ಶುಲ್ಕ ಮತ್ತು ಸಾರಿಗೆ ಶುಲ್ಕಗಳನ್ನು ಹೆಚ್ಚಿಸಿರುವ ಬಗ್ಗೆ ನಮಗೆ ಹಲವಾರು ದೂರುಗಳು ಬಂದಿವೆ. ಸಾಂಕ್ರಾಮಿಕ ರೋಗ ಕಾಯ್ದೆ ಮತ್ತು ದೆಹಲಿ ಶಾಲಾ ಶಿಕ್ಷಣ ಕಾಯ್ದೆಯಡಿ ನಿಯಮಗಳನ್ನು ಹೊರಡಿಸಲಾಗಿದೆ. ಯಾವುದೇ ಖಾಸಗಿ ಶಾಲೆಗೆ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಲಾಗುವುದಿಲ್ಲ. ಸರ್ಕಾರದಿಂದ ಅನುಮತಿ ಪಡೆಯದೆ ಶಾಲೆಗಳು ಬೋಧನಾ ಶುಲ್ಕವನ್ನು ಮೀರಿ ಶುಲ್ಕ ವಿಧಿಸಲು ಸಾಧ್ಯವಿಲ್ಲ ಎಂದು ಸಿಸೋಡಿಯಾ ಹೇಳಿದರು.
ಸಾರಿಗೆಗೆ ವಿಧಿಸುವ ಶುಲ್ಕಗಳು, ವಾರ್ಷಿಕ ಶುಲ್ಕವನ್ನು ಆದ್ದರಿಂದ ನಿಷೇಧಿಸಲಾಗಿದೆ. ಶುಲ್ಕವನ್ನು ಒಂದು ತಿಂಗಳು ಮಾತ್ರ ತೆಗೆದುಕೊಳ್ಳಬಹುದು ಮತ್ತು ಮೂರು ತಿಂಗಳ ಮುಂಚಿವಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದರು.
ಲಾಕ್ಡೌನ್ ಸಮಯದಲ್ಲಿ ಸಾರಿಗೆ ಶುಲ್ಕ, ವಾರ್ಷಿಕ ಶುಲ್ಕ ಅಥವಾ ಇನ್ನಿತರ ವಿವಿಧ ಶುಲ್ಕುಗಳನ್ನು ವಿಧಿಸಲಾಗುವುದಿಲ್ಲ. ಇದು ಮೇ 3 ವರೆಗೆ ಮುಂದುವರೆಯುತ್ತದೆ ಎಂದು ದೆಹಲಿಯ ಶಿಕ್ಷಣ ಸಚಿವರಾಗಿರುವ ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ,
ಯಾವುದೇ ಶಾಲೆಗೆ ಮೂರು ತಿಂಗಳ ಬೋಧನಾ ಶುಲ್ಕವನ್ನು ವಿಧಿಸಲಾಗುವುದಿಲ್ಲ (ಒಂದು ಸಮಯದಲ್ಲಿ), ಶುಲ್ಕವನ್ನು ಮಾಸಿಕವಾಗಿ ಸಂಗ್ರಹಿಸಬೇಕಾಗುತ್ತದೆ. ಶಾಲೆಗಳು ತಮ್ಮ ಸಿಬ್ಬಂದಿಗೆ ಒಪ್ಪಂದಂತೆ ವೇತನವನ್ನು ಪಾವತಿಸುವುದು ಕಡ್ಡಾಯವಾಗಿದೆ ಎಂದರು.
ಇದನ್ನೂ ಓದಿ :
ಎಲ್ಲಾ ಸೋಂಕಿತರು ಚೇತರಿಕೆ: ಕೊರೋನಾ ವಿರುದ್ಧ ಜಯಿಸಿತೆ ಅಂಡಮಾನ್ ದ್ವೀಪ?
ಶುಲ್ಕವನ್ನು ಪಾವತಿಸಲು ವಿಫಲವಾದಾಗ ಯಾವುದೇ ಶಾಲೆಯು ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣವನ್ನು ತಡೆಯಲು ಸಾಧ್ಯವಿಲ್ಲ. ಎಲ್ಲಾ ಶಾಲೆಗಳು ತಮ್ಮ ಎಲ್ಲಾ ಸಿಬ್ಬಂದಿಗೆ, ಬೋದಕ, ಬೋದಕೇತರ ಖಾಯಂ, ಗುತ್ತಿಗೆ ಸಿಬ್ಬಂದಿಗಳಿಗೆ ಅವರ ವೇತನವನ್ನು ಸಮಯಕ್ಕೆ ಪಾವತಿಸಬೇಕು. ಹಾಗೆ ಮಾಡಲು ವಿಫಲವಾದರೆ ಸಾಂಕ್ರಾಮಿಕ ರೋಗದ ಅಡಿಯಲ್ಲಿ ಶಿಕ್ಷೆಯನ್ನು ವಿಧಿಸುವುದು ಈಗ ಜಾರಿಯಲ್ಲಿರುವ ಆಕ್ಟ್ ನಲ್ಲಿದೆ ಎಂದು ಸಿಸೋಡಿಯಾ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ