HOME » NEWS » Coronavirus-latest-news » PRIVATE HOSPITALS HAD AGREED TO GIVE TREATMENT TO CORONA PATIENT SOME CONDITIONS RH

ಸರ್ಕಾರ-ಖಾಸಗಿ ಆಸ್ಪತ್ರೆಗಳ ಮಾಲೀಕರ ಮಾತುಕತೆ ಫಲಪ್ರದ; ಕೆಲ ಬೇಡಿಕೆಯೊಂದಿಗೆ ಚಿಕಿತ್ಸೆ ನೀಡಲು ಒಪ್ಪಿಗೆ

ಖಾಸಗಿ ಆಸ್ಪತ್ರೆಗಳ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಮಾತ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಯಾಕೆಂದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೆ ಇರುವ ಕಾರಣಕ್ಕೆ ಆ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ. 

news18-kannada
Updated:June 29, 2020, 6:02 PM IST
ಸರ್ಕಾರ-ಖಾಸಗಿ ಆಸ್ಪತ್ರೆಗಳ ಮಾಲೀಕರ ಮಾತುಕತೆ ಫಲಪ್ರದ; ಕೆಲ ಬೇಡಿಕೆಯೊಂದಿಗೆ ಚಿಕಿತ್ಸೆ ನೀಡಲು ಒಪ್ಪಿಗೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಕೋವಿಡ್ 19ಗೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಬೇಕು ಎಂಬ ಸರ್ಕಾರದ ಆಗ್ರಹಕ್ಕೆ ಕೊನೆಗೂ ಮಣಿದಿರುವ ಖಾಸಗಿ ಆಸ್ಪತ್ರೆಗಳ ಮಾಲೀಕರು ಕೆಲ ಬೇಡಿಕೆಯೊಂದಿಗೆ ಚಿಕಿತ್ಸೆ ನೀಡಲು ಒಪ್ಪಿಕೊಂಡಿದ್ದಾರೆ.

ಸಭೆಯ ಬಳಿಕ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಖಾಸಗಿ ಆಸ್ಪತ್ರೆಯ ಮಾಲೀಕರ ಒಕ್ಕೂಟದ ಅಧ್ಯಕ್ಷ ಡಾ.ರವೀಂದ್ರ ಅವರು, ಕಳೆದ 16 ರಿಂದ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ 19 ಚಿಕಿತ್ಸೆ ಆರಂಭವಾಗಿದೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡುತ್ತಿದ್ದೇವೆ. ಕೆಲವೆಡೆ ತಕ್ಷಣಕ್ಕೆ ಚಿಕಿತ್ಸೆ ಕೊಡಲಾಗದೇ ಸಮಸ್ಯೆ ಆಗಿದ್ದು ಹೌದು. ಇದಕ್ಕೆ ಕಾರಣ ಹಾಸಿಗೆಗಳು ಸಿದ್ಧವಿರಲಿಲ್ಲ , ದಿಢೀರ್ ಸೋಂಕು ಏರಿಕೆ, ಸೌಲಭ್ಯ ಕೊರತೆ ಇದ್ದವು. ಖಾಸಗಿ ಆಸ್ಪತ್ರೆಗಳು ಕೊರೋನಾ ನಿಯಂತ್ರಣದಲ್ಲಿ ಸರ್ಕಾರದ ಬೆಂಬಲಕ್ಕೆ ಸದಾ ಇರಲಿವೆ ಎಂದು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿಗೆ 50 ಲಕ್ಷ ವಿಮೆ ಸೌಲಭ್ಯ ಕೊಡಲು ಸರ್ಕಾರ ಒಪ್ಪಿದೆ. ದರ ಪಟ್ಟಿ ನಿಗದಿ ಬಗ್ಗೆ ಮೂರು ಸುತ್ತಿನ ಸಭೆ ಆಗಿದೆ. ಮೂರು ಹಂತದ ಚಿಕಿತ್ಸಾ ದರಗಳಿವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಬರುವ ರೋಗಿಗಳಿಗೆ ನಿಯಮದಂತೆ ಒಂದು ದರ, ಬಿಪಿಎಲ್ ಕಾರ್ಡ್ ನವರಿಗೆ ಒಂದು ದರ ಹಾಗೂ ಉಳಿದ ರೋಗಿಗಳಿಗೆ ಮತ್ತೊಂದು ದರ ಇರಲಿದೆ ಎಂದು ಡಾ.ರವೀಂದ್ರ ತಿಳಿಸಿದರು.

ನಾನ್ ಕೋವಿಡ್ ರೋಗಿಗಳ ಜೊತೆ ಕೊವಿಡ್ ರೋಗಿಗಳನ್ನು ಮಿಕ್ಸ್ ಮಾಡಲ್ಲ. ಈಗ ನಾವು ಕೊಡ್ತಿರುವ 2500 ಬೆಡ್ ಗಳು ಕೋವಿಡ್ ರೋಗಿಗಳಿಗೆ ಮಾತ್ರ. ನಾನ್ ಕೋವಿಡ್ ರೋಗಿಗಳು ಆತಂಕ ಪಡಬೇಕಿಲ್ಲ. ಅವರಿಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಇರಲಿದೆ. ದರ‌ ನಿಗದಿಯಲ್ಲಿ ನಮ್ಮ ಯಾವುದೇ ಆಕ್ಷೇಪಣೆಗಳು ಇಲ್ಲ. ಸರ್ಕಾರದ ಆದೇಶದಂತೆ ದರ ಅನುಸರಿಸುತ್ತೇವೆ. ಸರ್ಕಾರ ನಮಗೆ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದೆ.  ಹೀಗಾಗಿ ದರ ನಿಗಧಿಯಲ್ಲಿ ನಮ್ಮ ಯಾವುದೇ ತಕರಾರು ಇಲ್ಲ ಎಂದರು.

ಇನ್ಮುಂದೆ ಯಾವುದೇ ಕೊವೀಡ್ ರೋಗಿ ಭಯ ಪಡಬೇಕಿಲ್ಲ. ಕೋವಿಡ್ ಹಾಗೂ ನಾನ್ ಕೋವಿಡ್ ಸೆಂಟರ್ ಎಂದು ತೆರೆಯುತ್ತೇವೆ. ಅಲ್ಲಿ ನಿಮಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ.  ಪ್ರಾರಂಭದಲ್ಲಿ ಸ್ವಲ್ಪ ಗೊಂದಲಗಳು ಇತ್ತು. ಅದಕ್ಕೆ ಸರ್ಕಾರ ಹೇಳಿದಂತೆ ಬೆಡ್ ಕೊಡಲು ಒಪ್ಪಿರಲಿಲ್ಲ. ಇವಾಗ ಸರ್ಕಾರ ನಮಗೆ ಸಂಪೂರ್ಣವಾಗಿ ಮನವರಿಕೆ ಮಾಡಿದೆ. ಅವರ ಮಾತಿನಂತೆ ನಾವು ಇವಾಗ ಒಪ್ಪಿಕೊಂಡಿದ್ದೇವೆ. ಬೆಡ್ ಗಳನ್ನು ಕೊಡಲು ಹಾಗೂ ಚಿಕಿತ್ಸೆ ಕೊಡಲು ಒಪ್ಪಿಗೆ ಸೂಚಿಸಿದ್ದೇವೆ ಎಂದು ರವೀಂದ್ರ ಹೇಳಿದರು.

ಖಾಸಗಿ ಆಸ್ಪತ್ರೆಗಳು ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಗಳು
  • ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಲು ಸಮಿತಿ ರಚಸಬೇಕು

  • ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡುವ ಸಮಯದಲ್ಲಿ ಪೊಲೀಸರ ರಕ್ಷಣೆ ಒದಗಿಸಬೇಕು

  • ಖಾಸಗಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ನೀಡಬೇಕು

  • ಕೋವೀಡ್ಗೆ ಚಿಕಿತ್ಸೆ ನೀಡುವ ಹೆಲ್ತ್ ಕೇರ್ ವರ್ಕರ್ಸ್ ಗೂ ವಿಮೆ ಕೊಡಬೇಕು

  • ಕೋವಿಡ್​ ಚಿಕಿತ್ಸೆ ನೀಡುವ ಹೆಲ್ತ್ ಕೇರ್ ವರ್ಕರ್ಸ್ ಸ್ಯಾಲರಿ ಹೆಚ್ಚಿಸಲು ನಾವು ತೀರ್ಮಾನಿಸಿದ್ದೇವೆ. ಇದರಲ್ಲಿ ರಾಜ್ಯ ಸರ್ಕಾರ ಶೇಕಡ 50 ಕೊಡುವಂತೆ ಬೇಡಿಕೆ.


ಇದನ್ನು ಓದಿ: 4ನೇ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯ, ಶೇ.97.93 ವಿದ್ಯಾರ್ಥಿಗಳು ಹಾಜರು; ಸಚಿವ ಸುರೇಶ್ ಕುಮಾರ್

ಖಾಸಗಿ ಆಸ್ಪತ್ರೆಗಳ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಮಾತ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಯಾಕೆಂದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೆ ಇರುವ ಕಾರಣಕ್ಕೆ ಆ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.
First published: June 29, 2020, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories