Covid Vaccine: ಖಾಸಗಿ ಆಸ್ಪತ್ರೆಗಳು ಹಾಗೂ ಹೋಟೆಲ್​ಗಳು ಒಂದಾಗಿ ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ; ಕೇಂದ್ರ ಸರ್ಕಾರ

ವಿಶ್ವದ ಅತಿದೊಡ್ಡ ವ್ಯಾಕ್ಸಿನ್‌ ಡ್ರೈವ್‌ ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯ ಸರ್ಕಾರಗಳು ವ್ಯಾಕ್ಸಿನೇಷನ್‌ ಕುರಿತು ತೀವ್ರ ಎಚ್ಚರಿಕೆ ವಹಿಸಬೇಕು. ಕೆಲವು ಕಡೆ ವ್ಯಾಕ್ಸೀನೇಷನ್‌ ಪ್ರಕ್ರಿಯೆಯ ನಿಯಮಗಳು ಉಲ್ಲಂಘನೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವ ದೆಹಲಿ (ಮೇ 30); ಕೊರೋನಾ ವೈರಸ್​ ಹರಡದಂತೆ ತಡೆಯಲು ಎಲ್ಲರಿಗೂ ಲಸಿಕೆ ನೀಡುವುದು ಸರ್ಕಾರದ ಮುಂದಿರುವ ಏಕೈಕ ದಾರಿ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ 18-44 ವಯೋಮಾನದ ಎಲ್ಲರಿಗೂ ಮೇ 01 ರಿಂದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಆದರೆ, ಲಸಿಕೆ ಕಾರ್ಯಕ್ಕೆ ಚಾಲನೆ ನೀಡಿದ್ದರೂ ಯಾವ ರಾಜ್ಯಗಳಿಗೂ ಕೇಂದ್ರ ಸರ್ಕಾರ ಈವರೆಗೆ ಲಸಿಕೆಯನ್ನು ಪೂರೈಸದ ಕಾರಣ ಸರ್ಕಾರ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಸರ್ಕಾರ ಆಸ್ಪತ್ರೆಗಳ ಎದುರೂ ಸಹ ಲಸಿಕೆಗಾಗಿ ಸಾಕಷ್ಟು ಜನಸಂದಣಿ ಇದೆ, ಆದರೆ, ಲಸಿಕೆಗಳ ನೋ ಸ್ಟಾಕ್​ಬೋರ್ಡ್ ಹಾಕಲಾಗಿದೆ. ಒಂದು ಅರ್ಥದಲ್ಲಿ ದೇಶದಲ್ಲಿನ ಕೋವಿಡ್‌ ಲಸಿಕೆ ಹಾಹಾಕಾರವೇ ಶುರುವಾಗಿದೆ. ಆದರೆ, ಈ ನಡುವೆ ಖಾಸಗಿ ಆಸ್ಪತ್ರೆಗಳು ಎಗ್ಗಿಲ್ಲದಂತೆ ಲಸಿಕೆ ವ್ಯಾಪಾರವನ್ನು ಮುಂದುವರೆಸಿವೆ. 900 ರೂ. ಗಳಿಂದ 2000 ರೂಗಳ ಮೊತ್ತದಲ್ಲಿ ರಾಜಾರೋಷವಾಗಿ ಲಸಿಕೆಗಳ ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ. ಅಲ್ಲದೆ, ಇದರ ಜೊತೆಗೆ ಪ್ರತಿಷ್ಠಿತ ಐಷಾರಾಮಿ ಹೊಟೇಲ್‌ ಗಳ ಜೊತೆ ಸೇರಿ ಲಸಿಕೆ ಪ್ಯಾಕೇಜ್‌ಗಳನ್ನು ಘೋಷಿಸುತ್ತಿವೆ. ಈ ವಿಚಾರ ಭಾರೀ ದೊಡ್ಡ ಸುದ್ದಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.

  ಹೋಟೆಲ್​ಗಳು ನೀಡುತ್ತಿರುವ ವ್ಯಾಕ್ಸಿನ್ ಪ್ಯಾಕೇಜ್.


  ಐಷಾರಾಮಿ ಹೊಟೇಲ್‌ ಗಳು ಆಸ್ಪತ್ರೆಗಳ ಜೊತೆ ಸೇರಿ ತಮ್ಮಲ್ಲಿನ ಬ್ರೇಕ್‌ ಫಾಸ್ಟ್‌, ಏಸಿ, ಮನರಂಜನೆ ಮುಂತಾದ ಸೌಲಭ್ಯಗಳ ಜೊತೆಗೆ ಕೊರೋನಾ ಲಸಿಕೆಗಳನ್ನು ನೀಡುವುದಾಗಿ ಹೇಳಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದವು. ಈ ಹೊಟೇಲ್‌ ಗಳ ಜೊತೆ ಖಾಸಗಿ ಆಸ್ಪತ್ರೆಗಳೂ ಶಾಮೀಲಾಗಿ ದೊಡ್ಡ ದೊಡ್ಡ ಹೊಟೇಲ್‌ ಗಳಲ್ಲಿ ತಂಗುವ ಗ್ರಾಹಕರಿಗೆ ತಮ್ಮ ವೈದ್ಯರು ಮತ್ತು ಸಿಬ್ಬಂದಿಯ ಮೂಲಕ ವಾಕ್ಸಿನೇಶನ್‌ ನಡೆಸುತ್ತಿದ್ದರು. ಈ ಕುರಿತು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಐಷಾರಾಮಿ ಹೊಟೇಲ್‌ ಗಳಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಲಸಿಕೆಗಳನ್ನು ನೀಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.

  ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಆರೋಗ್ಯ ಇಲಾಖೆ, "ವಿಶ್ವದ ಅತಿದೊಡ್ಡ ವ್ಯಾಕ್ಸಿನ್‌ ಡ್ರೈವ್‌ ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯ ಸರ್ಕಾರಗಳು ವ್ಯಾಕ್ಸಿನೇಷನ್‌ ಕುರಿತು ತೀವ್ರ ಎಚ್ಚರಿಕೆ ವಹಿಸಬೇಕು. ಕೆಲವು ಕಡೆ ವ್ಯಾಕ್ಸೀನೇಷನ್‌ ಪ್ರಕ್ರಿಯೆಯ ನಿಯಮಗಳು ಉಲ್ಲಂಘನೆಯಾಗುತ್ತಿರುವುದು ಕಂಡು ಬಂದಿದೆ. ವ್ಯಾಕ್ಸಿನೇಷನ್‌ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳು ಉಲ್ಳಂಘನೆಯಾಗದಂತೆ ನೋಡಿಕೊಂಡು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ಜನರಿಗೆ ಲಸಿಕೆಗಳನ್ನು ನೀಡಬೇಕು" ಎಂದು ಎಚ್ಚರಿಕೆ ನೀಡಿದೆ.

  ಇದನ್ನೂ ಓದಿ: VK Sasikala: ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ವಾಪಾಸ್?; ಆಡಿಯೋ ತುಣುಕು ವೈರಲ್

  ಕೇಂದ್ರ ಆರೋಗ್ಯ ಮಾರ್ಗಸೂಚಿಯ ಅನ್ವಯ ಇನ್ನು ಮುಂದೆ ಖಾಸಗಿ ಹೊಟೇಲ್‌ಗಳಲ್ಲಿ ಲಸಿಕೆಗಳನ್ನು ನೀಡಲು ಸಾಧ್ಯವಿಲ್ಲ. ಕೇಂದ್ರ ಆರೋಗ್ಯ ಇಲಾಖೆಯು ಸರ್ಕಾರಿ ಮತ್ತು ಪರವಾನಗಿಯನ್ನು ಹೊಂದಿದ ಖಾಸಗಿ ವ್ಯಾಕ್ಸಿನೇಷನ್‌ ಸೆಂಟರ್‌ಗಳು, ಇತರ ಕಚೇರಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಕೆಲಸ ನಿರ್ವಹಿಸುವ ಸ್ಥಳಗಳು, ವೃದ್ಧರು ಮತ್ತು ಅಂಗವಿಕಲರಿಗಾಗಿ ವಸತಿ ಸಮುಚ್ಛಯಗಳ ಸಮೀಪ ಅಥವಾ ಹೌಸಿಂಗ್‌ ಸೊಸೈಟಿಗಳಲ್ಲಿ,

  ಇದನ್ನೂ ಓದಿ: Boris Johnson: ರಹಸ್ಯವಾಗಿ ಮದುವೆಯಾದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್..!; ಹುಡುಗಿ ಯಾರು ಗೊತ್ತಾ?

  ಸಮುದಾಯ ಭವನಗಳು, ಪಂಚಾಯತ ಭವನಗಳು, ಶಾಲೆ-ಕಾಲೇಜುಗಳು ಮತ್ತು ವೃದ್ಧಾಶ್ರಮಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ವ್ಯಾಕ್ಸಿನೇಷನ್‌ ಸೌಲಭ್ಯಗಳನ್ನು ಕಲ್ಪಿಸಬಹುದಾಗಿದೆ ಎಂದು ಆದೇಶ ನೀಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಸೂಚಿಸಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: