ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ ಅರ್ಧದಷ್ಟು ಹಾಸಿಗೆ ಕೊಡೋದು ಕಷ್ಟ; ಖಾಸಗಿ ಆಸ್ಪತ್ರೆಗಳ ಸಂಘ ಸ್ಪಷ್ಟನೆ

ಕೋವಿಡ್ ಸಂಕಷ್ಟದಲ್ಲಿ ಕೆಲಸ ಬಿಟ್ಟು ಹೋದ ವೈದ್ಯರು, ವೈದ್ಯಕೀಯ ಸಿಬ್ಬಂದಿ ವಾಪಸ್ ಬನ್ನಿ. ಈ ಸಮಯದಲ್ಲಿ ಕೆಲಸ ಮಾಡಲೇಬೇಕಿದೆ. ನಿಮಗೆ ಬೇಕಾದ ಸೌಲಭ್ಯ ನೀಡಲಾಗುವುದು. ಎಲ್ಲರೂ ಒಂದಾಗಿ ಸೇರಿ ಕೋವಿಡ್ ಸಂಕಷ್ಟ ಎದುರಿಸೋಣ ಎಂದು ಫನಾ ಗೌರವಾಧ್ಯಕ್ಷ ಡಾ ರವೀಂದ್ರ ಮನವಿ ಮಾಡಿಕೊಂಡರು.

ಖಾಸಗಿ ಆಸ್ಪತ್ರೆಗಳ ಸಂಘದ ಪದಾಧಿಕಾರಿಗಳು ನಡೆಸಿದ ಸುದ್ದಿಗೋಷ್ಠಿ.

ಖಾಸಗಿ ಆಸ್ಪತ್ರೆಗಳ ಸಂಘದ ಪದಾಧಿಕಾರಿಗಳು ನಡೆಸಿದ ಸುದ್ದಿಗೋಷ್ಠಿ.

  • Share this:
ಬೆಂಗಳೂರು; ಕೋವಿಡ್ ಸಂಕಷ್ಟ ಸಮಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ವೈದ್ಯಕೀಯ ಸಿಬ್ಬಂದಿ ಸಿಗುತ್ತಿಲ್ಲ. ಸರ್ಕಾರ ಹೇಳಿದಂತೆ ಆಸ್ಪತ್ರೆಯ ಅರ್ಧದಷ್ಟು ಹಾಸಿಗೆ ಕೊಡುವುದು ಕಷ್ಟವಾಗುತ್ತಿದೆ. ಅದರ ಬದಲಾಗಿ ಪುಟ್ಟ ಆಸ್ಪತ್ರೆಗಳು ಎಲ್ಲರೂ ಸೇರಿ ಇಡೀ ಆಸ್ಪತ್ರೆ ಕೊಡುತ್ತೇವೆ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್​ ಸಂಘ ತಿಳಿಸಿದೆ.

ಈ ಕುರಿತು ಬೆಂಗಳೂರಿನ ಸುದ್ದಿಗೋಷ್ಠಿ ನಡೆಸಿದ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸಂಘ (ಫನಾ) ಗೌರವಾಧ್ಯಕ್ಷ ಡಾ ರವೀಂದ್ರ ಮಾತನಾಡಿ, ಬೆಂಗಳೂರಿನಲ್ಲಿ 384 ಆಸ್ಪತ್ರೆಗಳಿವೆ. ಕೊರೋನಾ ನಂತರ 58 ಆಸ್ಪತ್ರೆಗಳು ಮುಚ್ಚಿವೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ 10,500 ಬೆಡ್ ಗಳಿವೆ. ಇದರಲ್ಲಿ ಕ್ರಿಶ್ಚಿಯನ್ ಮಿಷನರ್ ಆಸ್ಪತ್ರೆಗಳು ಸೇರಿಲ್ಲ. ಕೋವಿಡ್ ಕುರಿತು ಮಾರ್ಚ್ 13ರಂದು ಸಿಎಂ ಸಭೆ ಕರೆದಿದ್ದರು. ಆರಂಭದಲ್ಲಿ ಕೋವಿಡ್ ಚೆನ್ನಾಗಿ ನಿಭಾಯಿಸಿದ್ದೇವೆ. ಆದರೆ ಜೂನ್‌ 23ರಂದು ಸಭೆ ನಡೆಸುವ ವೇಳೆ ಸರ್ಕಾರಿ ಆಸ್ಪತ್ರೆ ಬೆಡ್ ಫುಲ್ ಆದ ಕಾರಣ ಖಾಸಗಿ ಆಸ್ಪತ್ರೆಗಳ ಬೆಡ್ ಕೇಳಿದ್ದರು. ಆಗ ಇದ್ದಕ್ಕಿದ್ದಂತೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗೆ ಕಷ್ಟವಾಗಿದೆ ಎಂದರು.

ನಾನ್ ಕೋವಿಡ್ ಪೇಷೆಂಟ್ ಇದ್ದ ಕಾರಣ ಆರಂಭದಲ್ಲಿ ಕೆಲ‌ ಗೊಂದಲಗಳಾಗಿವೆ. ಕೆಲ ತೊಂದರೆಗಳಾಗಿವೆ. ಕೊರೋನಾ ಶಂಕಿತ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಗೊಂದಲ ಶುರುವಾಯ್ತು. ಕೊರೋನಾ‌ ಶಂಕಿತರನ್ನು ಕೋವಿಡ್ ವಾರ್ಡ್ ಗೆ ಸೇರಿಸಬೇಕೋ? ಸೇರಿಸಬಾರದು ಎಂಬ ಗೊಂದಲವಿತ್ತು. ಕೋವಿಡ್ ಹಾಗೂ ನಾನ್ ಕೋವಿಡ್ ಪೇಷೆಂಟ್‌ ವರ್ಗೀಕರಿಸುವುದು ಕಷ್ಟವಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಎರಡು ಸಾವಿರ ಕೋವಿಡ್ ಪೇಷೆಂಟ್​ಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಜೊತೆ ಫನಾಗೆ ಕೆಲ ವ್ಯತ್ಯಾಸಗಳಿವೆ. ಗೊಂದಲಗಳಿಲ್ಲ. 50ಕ್ಕಿಂತ ಬೆಡ್ ಚಿಕ್ಕದಿರುವ ಆಸ್ಪತ್ರೆಗಳು ಅರ್ಧ ಬೆಡ್ ಕೊಡುವುದು ಕಷ್ಟವಾಗ್ತಿದೆ. ಇದಕ್ಕಾಗಿ ಮೂರು ಚಿಕ್ಕ ಆಸ್ಪತ್ರೆಗಳು ಸೇರಿ ಒಂದು ಖಾಸಗಿ ಆಸ್ಪತ್ರೆ ಕೋವಿಡ್​ಗೆ ಕೊಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಸರ್ಕಾರವೂ ಒಪ್ಪಿಗೆ ಕೊಟ್ಟಿದೆ. ನಾವು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದೇವೆ. ಕೆಲವು ಸಿಬ್ಬಂದಿ ಕೆಲಸ ಬಿಟ್ಟುಹೋಗಿದ್ದಾರೆ. ಹೊಸ ನೇಮಕಾತಿಯಾಗುತ್ತಿಲ್ಲ. ಆಯಾ, ಡಿ ಗ್ರೂಪ್ ಬೇಕು. ವೆಂಟಿಲೇಟರ್ ಹೆಚ್ಚು ಇಲ್ಲ. ಆರು ಸಾವಿರ ನರ್ಸ್ ಸಿಬ್ಬಂದಿ ಕೆಲಸ‌ ಮಾಡುತ್ತಿದ್ದರು‌. ಇದರಲ್ಲಿ ಶೇ.20ರಷ್ಟು ಕೆಲಸ ಬಿಟ್ಟಿದ್ದಾರೆ. ಶೇ.10ರಷ್ಟು ಕೋವಿಡ್ ಕೆಲಸ ಮಾಡುತ್ತಿಲ್ಲ. ಶೇ.10ರಷ್ಟು ಕೊವಿಡ್ ಪೇಷೆಂಟ್ ಆಗಿದ್ದಾರೆ. ಶೇ.30ರಷ್ಟು ವೈದ್ಯರು ಕೋವಿಡ್ ಕೆಲಸ ಮಾಡಲು ಮುಂದಾಗುತ್ತಿಲ್ಲ. ಡಬಲ್ ಸ್ಯಾಲರಿ, ಲೈಫ್, ಹೆಲ್ತ್‌ ಇನ್ಯುಶರೆನ್ಸ್ ಕೊಡ್ತೀವಿ ಎಂದರೂ ಯಾರೂ ಬರ್ತಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಕೋವಿಡ್ ಸಂಕಷ್ಟದಲ್ಲಿ ಕೆಲಸ ಬಿಟ್ಟು ಹೋದ ವೈದ್ಯರು, ವೈದ್ಯಕೀಯ ಸಿಬ್ಬಂದಿ ವಾಪಸ್ ಬನ್ನಿ. ಈ ಸಮಯದಲ್ಲಿ ಕೆಲಸ ಮಾಡಲೇಬೇಕಿದೆ. ನಿಮಗೆ ಬೇಕಾದ ಸೌಲಭ್ಯ ನೀಡಲಾಗುವುದು. ಎಲ್ಲರೂ ಒಂದಾಗಿ ಸೇರಿ ಕೋವಿಡ್ ಸಂಕಷ್ಟ ಎದುರಿಸೋಣ ಎಂದು ಫನಾ ಗೌರವಾಧ್ಯಕ್ಷ ಡಾ ರವೀಂದ್ರ ಮನವಿ ಮಾಡಿಕೊಂಡರು.

ಹೆದರಿಕೊಂಡು ಹೋದ ವೈದ್ಯಕೀಯ ಸಿಬ್ಬಂದಿ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಲು ಚಿಂತಿಸುತ್ತಿದೆ. ಕೆಲ ರಾಜ್ಯಗಳಲ್ಲಿ ಕ್ರಮಕೈಗೊಳ್ಳಲಾಗಿದೆ. ಯಾರೂ ಹೆದರಿ ಹೋಗಿದ್ದಾರೋ ಅವರ ವೈದ್ಯಕೀಯ ಸೇವೆ ನಿಷೇಧಿಸಲು ಚಿಂತಿಸಲಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿ ಅನಸ್ತೇಷಿಯಾ ತಜ್ಞರ ಪಾತ್ರ ಪ್ರಮುಖ. ಆದರೆ ಅನಸ್ತೇಷಿಯಾ ತಜ್ಞರ ಕೊರತೆ ಹೆಚ್ಚಿದೆ ಎಂದರು.

ಇದನ್ನು ಓದಿ: ಸಚಿವ ಸಿ.ಟಿ.ರವಿಯಿಂದ ಜಿಲ್ಲಾಧಿಕಾರಿ, ಎಡಿಸಿ, ಎಸಿ ಸೇರಿದಂತೆ ಹತ್ತಾರು ಅಧಿಕಾರಿಗಳು ಕ್ವಾರಂಟೈನ್

ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್​ಗಳನ್ನು ಖಾಸಗಿ ಆಸ್ಪತ್ರೆಗೆ ಕೊಡಿ. ಇದರಿಂದ ಕೋವಿಡ್ ಗುರುತಿಸುವಿಕೆ ಸುಲಭವಾಗುತ್ತದೆ. ಈ ಕುರಿತು ಫನಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
Published by:HR Ramesh
First published: