HOME » NEWS » Coronavirus-latest-news » PRIVATE HOSPITAL MUST RESERVED 50 PERCENT BED SAYS MINISTER R ASHOK RH

ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್​ ಕೊಡಲೇಬೇಕು; ಸಚಿವ ಆರ್.ಅಶೋಕ್

ತಜ್ಞರ ವರದಿ ಪ್ರಕಾರ ಕೊರೋನಾ ಇನ್ನೂ 6 ರಿಂದ 7 ತಿಂಗಳು ಅತಿರೇಕಕ್ಕೆ ಹೋಗಲಿದೆ. ಕೊರೋನಾ ಬೆಂಗಳೂರು ಅಷ್ಟೇ ಅಲ್ಲ, ಪ್ರಪಂಚದಾದ್ಯಂತ ಇದೆ. ಹೀಗಾಗಿ ಸ್ಟ್ರೀಮ್ ಲೈನ್ ಮಾಡೋಕೆ ಕೊಂಚ ಸಮಯಬೇಕಿದೆ ಎಂದು ಹೇಳಿದರು.

news18-kannada
Updated:July 16, 2020, 3:25 PM IST
ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್​ ಕೊಡಲೇಬೇಕು; ಸಚಿವ ಆರ್.ಅಶೋಕ್
ಸಚಿವ ಆರ್​ ಅಶೋಕ್​​
  • Share this:
ಬೆಂಗಳೂರು; ಬೆಂಗಳೂರು ದಕ್ಷಿಣ ವಲಯದ ಪ್ರಮುಖರ ಸಭೆ ಕರೆದಿದ್ದೆವು. ಸೋಮವಾರ ಮತ್ತೆ ಈ ವಲಯದ ಕಾರ್ಪೊರೇಟರ್​ಗಳ ಸಭೆ ಕರೆಯುತ್ತೇವೆ. ಶೇ. 50 ಬೆಡ್ ಕೊಡಲೇಬೇಕು ಎಂದು ಇಂದು ಖಾಸಗಿ ಆಸ್ಪತ್ರೆಗಳಿಗೆ ಹೇಳಿದ್ದೇವೆ. ಪ್ರತಿ ಆಸ್ಪತ್ರೆಗೆ ನಮ್ಮ ನೋಡಲ್ ಅಧಿಕಾರಿ ಇರುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಕಂದಾಯ ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯಾ ರಾಮಲಿಂಗಾರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಆರ್.ಅಶೋಕ್, ಕೆಲವು ಕಡೆ ನರ್ಸ್​ಗಳು ಕೆಲಸಕ್ಕೆ ಗೈರಾಗುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಡ್ಡಾಯವಾಗಿ ಅವರು ಹಾಜರಾಗಲೇಬೇಕು.  ಇಂತಹ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗದೇ ತಪ್ಪಿಸಿಕೊಂಡು ಓಡಿ ಹೋದವರ ವಿರುದ್ಧ ಡಿಸಾಸ್ಟರ್ ಆಕ್ಟ್ ಅಡಿ ಕ್ರಮ ತೆಗೆದುಕೊಳ್ಳಲಾಗುವುದು. ಇಂಥ ಸಂಕಷ್ಟ ಸಮಯದಲ್ಲಿ ನರ್ಸ್​ಗಳು, ಡಾಕ್ಟರ್​ಗಳು ಕರ್ತವ್ಯ ಪ್ರಜ್ಞೆ ಮೆರೆಯಲೇಬೇಕು. ಈ ಬಗ್ಗೆ ನಮ್ಮ ಡಿಸಿಪಿಯವರಿಗೂ ಹೇಳಿದ್ದೇನೆ.  ಕರ್ತವ್ಯದಿಂದ ತಪ್ಪಿಸಿಕೊಂಡವರನ್ನು ಟ್ರ್ಯಾಕ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆಸ್ಪತ್ರೆಗಳ ನರ್ಸ್, ಡಾಕ್ಟರ್​ಗಳು ಒಂದು ವಾರ ಕೆಲಸ ಮಾಡಿದರೆ ಒಂದು ವಾರ ಕ್ವಾರೆಂಟೇನ್ ಇರಬೇಕಾಗುತ್ತೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಮನೆಗೆ ಹೋಗಲು ಆಗಲ್ಲ. ಹೀಗಾಗಿ ಅವರನ್ನು ಆಸ್ಪತ್ರೆಗಳಿಗೆ ಹತ್ತಿರ ಇರುವ ಹೋಟೆಲ್​ಗಳಲ್ಲಿ ಉಳಿಯಲು ಅವಕಾಶ ಮಾಡಿಕೊಡಲಾಗುತ್ತೆ. ಸರ್ಕಾರದಿಂದ ರಿಯಾಯಿತಿ ದರದಲ್ಲಿ ಹೋಟೆಲ್​ಗಳಲ್ಲಿ ಉಳಿಯಲು ವೈದ್ಯಕೀಯ ಸಿಬ್ಬಂದಿಗೆ ವ್ಯವಸ್ಥೆ ‌ಮಾಡಿಕೊಡುತ್ತೇವೆ. ಎಲ್ಲವನ್ನೂ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಪೌರ ಕಾರ್ಮಿಕ ಮಹಿಳೆ ಬೆಡ್ ಸಿಗದೇ ಮೃತಪಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಆರ್.ಅಶೋಕ್, ಖಾಸಗಿ ಆಸ್ಪತ್ರೆಯವರು ರೋಗಿಗಳಿಗೆ ಯಾವುದೇ ಕೋಡ್ ನಂಬರ್ ತೆಗೆದುಕೊಂಡು ಬನ್ನಿ ಅನ್ನುವ ಆಗಿಲ್ಲ. ಮೊದಲು ಅಡ್ಮಿಟ್ ಮಾಡಿಕೊಂಡೇ ನಂತರ ಕಾರ್ಪೊರೇಶನ್​ಗೆ ತಿಳಿಸಬೇಕು. ಈ ಬಗ್ಗೆ ಆದೇಶ ಹೊರಡಿಸುತ್ತೇವೆ ಎಂದರು.

ತಜ್ಞರ ವರದಿ ಪ್ರಕಾರ ಕೊರೋನಾ ಇನ್ನೂ 6 ರಿಂದ 7 ತಿಂಗಳು ಅತಿರೇಕಕ್ಕೆ ಹೋಗಲಿದೆ.  ಕೊರೋನಾ ಬೆಂಗಳೂರು ಅಷ್ಟೇ ಅಲ್ಲ, ಪ್ರಪಂಚದಾದ್ಯಂತ ಇದೆ. ಹೀಗಾಗಿ ಸ್ಟ್ರೀಮ್ ಲೈನ್ ಮಾಡೋಕೆ ಕೊಂಚ ಸಮಯಬೇಕಿದೆ ಎಂದು ಹೇಳಿದರು.

ಇದನ್ನು ಓದಿ: ಎರಡನೇ ದಿನದ ಲಾಕ್​ಡೌನ್​ನಲ್ಲೂ ಹೆಚ್ಚಿದ ವಾಹನ‌‌ ಸಂಚಾರ; ಖುದ್ದು ಪರಿಶೀಲನೆಗೆ ಇಳಿದ ಡಿಸಿಪಿಗಳು
Youtube Video
ಮಾಜಿ ಸಿಎಂ ದೇವದಾಜ ಅರಸು ಕಾಂಗ್ರೆಸ್ ನವರು. ಕಾಂಗ್ರೆಸ್​ನವರು ತಂದ ಕಾಯಿದೆ ಬದಲಿಸಬಾರದು ಅನ್ನೋದು ಸಿದ್ದರಾಮಯ್ಯ ಅವರ ಉದ್ದೇಶ. ಆದರೆ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಿದೆ. ವಿದ್ಯಾವಂತರು ಕೃಷಿ ಕಡೆ ಬರಬೇಕು ಅನ್ನೋ ಉದ್ದೇಶದಿಂದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ.  ಸಿದ್ದರಾಮಯ್ಯ ನಿಜವಾಗಲೂ ಮಲಗಿಕೊಂಡಿದ್ದರೆ ನಾನು ಅವರನ್ನು ಎಬ್ಬಿಸುತ್ತೇನೆ.  ಆದರೆ ಮಲಗಿಕೊಂಡವರ ತರ ನಾಟಕ ಮಾಡೋರನ್ನು ಎಂದಿಗೂ ಎಬ್ಬಿಸೋಕೆ ಆಗಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಅಶೋಕ್ ತಿರುಗೇಟು ನೀಡಿದರು.
Published by: HR Ramesh
First published: July 16, 2020, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories